ಮಾಹಿತಿ ಇರುವಲ್ಲಿ ಹೋಗಲು

ಜೀವನದ ಉದ್ದೇಶವೇನು?

ಜೀವನದ ಉದ್ದೇಶವೇನು?

ಬೈಬಲ್‌ ಕೊಡೋ ಉತ್ತರ

 ಜೀವನದ ಉದ್ದೇಶದ ಬಗ್ಗೆ ನಾವು ಬೇರೆ-ಬೇರೆ ರೀತಿಯಲ್ಲಿ ಪ್ರಶ್ನೆಗಳನ್ನ ಕೇಳಬಹುದು. ಉದಾಹರಣೆಗೆ, ನಾವು ಯಾಕೆ ಇಲ್ಲಿ ಇದ್ದೇವೆ? ನನ್ನ ಜೀವನಕ್ಕೆ ಒಂದು ಉದ್ದೇಶ ಇದೆಯಾ? ದೇವರ ಜೊತೆ ಒಳ್ಳೇ ಸ್ನೇಹವನ್ನ ಬೆಳೆಸಿಕೊಳ್ಳುವುದೇ ಜೀವನದ ಉದ್ದೇಶ ಅಂತ ಬೈಬಲ್‌ ಕಲಿಸುತ್ತೆ. ಅವುಗಳಲ್ಲಿ ಬೈಬಲ್‌ ತಿಳಿಸೋ ಮುಖ್ಯ ಸತ್ಯಗಳನ್ನ ನಾವು ಈಗ ನೋಡೋಣ.

  •   ದೇವರು ನಮ್ಮನ್ನ ಸೃಷ್ಟಿಸಿದನು. ಬೈಬಲ್‌ ಹೀಗೆ ಹೇಳುತ್ತೆ: “ನಮ್ಮನ್ನ ಸೃಷ್ಟಿಸಿದ್ದು ಆತನೇ, ನಾವು ಆತನಿಗೆ ಸೇರಿದವರು.”—ಕೀರ್ತನೆ 100:3; ಪ್ರಕಟನೆ 4:11.

  •   ನಮ್ಮ ಬಗ್ಗೆ ಮತ್ತು ಬೇರೆಲ್ಲ ಸೃಷ್ಟಿಗಳ ಬಗ್ಗೆ ದೇವರಿಗೆ ಒಂದು ಉದ್ದೇಶವಿದೆ.—ಯೆಶಾಯ 45:18.

  •   ನಮ್ಮ ‘ಆಧ್ಯಾತ್ಮಿಕ ಅಗತ್ಯವನ್ನ’ ಗುರುತಿಸೋ ರೀತಿಯಲ್ಲಿ ದೇವರು ನಮ್ಮನ್ನ ಸೃಷ್ಟಿ ಮಾಡಿದ್ದಾನೆ. ಇದರಲ್ಲಿ ಜೀವನದ ಉದ್ದೇಶವನ್ನ ತಿಳ್ಕೊಳ್ಳೋ ಆಸೆನೂ ಸೇರಿದೆ. (ಮತ್ತಾಯ 5:3, ಪಾದಟಿಪ್ಪಣಿ) ಆ ಆಸೆಯನ್ನ ತೀರಿಸಿಕೊಳ್ಳಬೇಕು ಅಂತ ದೇವರು ಬಯಸುತ್ತಾನೆ.—ಕೀರ್ತನೆ 145:16.

  •   ದೇವರ ಜೊತೆ ಒಳ್ಳೇ ಸ್ನೇಹವನ್ನ ಬೆಳೆಸಿಕೊಳ್ಳೋ ಮೂಲಕ ಆಧ್ಯಾತ್ಮಿಕ ಅಗತ್ಯವನ್ನ ಪೂರೈಸಿಕೊಳ್ಳಬಹುದು. ದೇವರ ಜೊತೆ ಸ್ನೇಹ ಬೆಳೆಸೋಕೆ ಸಾಧ್ಯನೇ ಇಲ್ಲ ಅಂತ ಕೆಲವರು ನೆನಸ್ತಾರೆ. ಆದ್ರೆ ಬೈಬಲ್‌ ನಮಗೆ ಹೀಗೆ ಪ್ರೋತ್ಸಾಹಿಸುತ್ತೆ: “ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ.”—ಯಾಕೋಬ 4:8; 2:23.

  •   ನಾವು ದೇವರ ಸ್ನೇಹಿತರಾಗಬೇಕಂದ್ರೆ ಆತನಿಗೆ ಇಷ್ಟ ಆಗೋ ತರ ನಡ್ಕೊಬೇಕು. ಪ್ರಸಂಗಿ 12:13 ರಲ್ಲಿ ದೇವರ ಉದ್ದೇಶದ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಸತ್ಯ ದೇವರಿಗೆ ಭಯಪಡು ಮತ್ತು ಆತನ ಆಜ್ಞೆಗಳನ್ನ ಪಾಲಿಸು. ಇದೇ ಎಲ್ಲಾ ಮನುಷ್ಯರ ಕರ್ತವ್ಯ.”

  •   ದೇವರು ಬೇಗನೇ ಕೆಟ್ಟತನವನ್ನು ತೆಗೆದುಹಾಕಿ ಆತನ ಮೇಲೆ ನಂಬಿಕೆ ಇಟ್ಟ ತನ್ನ ಆರಾಧಕರಿಗೆ ಸಾವೇ ಇಲ್ಲದ ಜೀವನವನ್ನ ಕೊಡುತ್ತಾನೆ. ಆಗ ದೇವರು ನಮ್ಮನ್ನ ಯಾವ ಉದ್ದೇಶದಿಂದ ಸೃಷ್ಟಿಮಾಡಿದ್ದಾನೆ ಅಂತ ನಾವು ಅರ್ಥ ಮಾಡಿಕೊಳ್ಳುತ್ತೇವೆ.—ಕೀರ್ತನೆ 37:10, 11.