ಮಾಹಿತಿ ಇರುವಲ್ಲಿ ಹೋಗಲು

ಮೆಸ್ಸೀಯನ ಪ್ರವಾದನೆಗಳು ಯೇಸುವೇ ಮೆಸ್ಸೀಯ ಅಂತ ತೋರಿಸಿಕೊಡುತ್ತಾ?

ಮೆಸ್ಸೀಯನ ಪ್ರವಾದನೆಗಳು ಯೇಸುವೇ ಮೆಸ್ಸೀಯ ಅಂತ ತೋರಿಸಿಕೊಡುತ್ತಾ?

ಬೈಬಲ್‌ ಕೊಡೋ ಉತ್ತರ

 ಹೌದು. ಯೇಸು ಭೂಮಿಯಲ್ಲಿದ್ದಾಗ ’ಅಭಿಷಿಕ್ತನಾದ ಪ್ರಭುವಿನ’ ಬಗ್ಗೆ ಇರೋ ತುಂಬ ಪ್ರವಾದನೆಗಳನ್ನ ನೆರವೇರಿಸಿದನು. ಆತನೇ “ಲೋಕದ ರಕ್ಷಕ” ಆಗಲಿದ್ದನು. (ದಾನಿಯೇಲ 9:25; 1 ಯೋಹಾನ 4:14) ಯೇಸು ಸತ್ತ ಮೇಲೂ ಮೆಸ್ಸೀಯನ ಪ್ರವಾದನೆಗಳನ್ನು ನೆರವೇರಿಸ್ತಿದ್ದನು.—ಕೀರ್ತನೆ 110:1; ಅಪೊಸ್ತಲರ ಕಾರ್ಯ 2:34-36.

 “ಮೆಸ್ಸೀಯ” ಪದದ ಅರ್ಥ ಏನು?

 ಮಾಶೀಯಕ್‌ (ಮೆಸ್ಸೀಯ) ಅನ್ನೋ ಹೀಬ್ರು ಪದ, ಕ್ರಿಸ್ಟೋಸ್‌ (ಕ್ರಿಸ್ತ) ಅನ್ನೋ ಗ್ರೀಕ್‌ ಪದ ಎರಡರ ಅರ್ಥ “ಅಭಿಷಿಕ್ತ.” ಹಾಗಾಗಿ ಯೇಸು ಕ್ರಿಸ್ತ ಅಂದ್ರೆ “ಅಭಿಷಿಕ್ತನಾದ ಯೇಸು” ಅಥವಾ “ಮೆಸ್ಸೀಯನಾದ ಯೇಸು.”

 ಹಿಂದಿನ ಕಾಲದಲ್ಲಿ ಒಬ್ಬ ವ್ಯಕ್ತಿಯನ್ನ ಒಂದು ವಿಶೇಷ ಅಧಿಕಾರ ಸ್ಥಾನಕ್ಕೆ ನೇಮಿಸುವಾಗ ಅವನ ತಲೆ ಮೇಲೆ ಎಣ್ಣೆ ಸುರಿದು ಅಭಿಷೇಕ ಮಾಡ್ತಿದ್ರು. (ಯಾಜಕಕಾಂಡ 8:12; 1 ಸಮುವೇಲ 16:13) ದೇವರು ಯೇಸುವನ್ನು ಮೆಸ್ಸೀಯನನ್ನಾಗಿ ಅಭಿಷೇಕ ಮಾಡಿದನು. ಅದೊಂದು ದೊಡ್ಡ ಅಧಿಕಾರ ಸ್ಥಾನ. (ಅಪೊಸ್ತಲರ ಕಾರ್ಯ 2:36) ಆದ್ರೆ ದೇವರು ಯೇಸುವನ್ನು ಎಣ್ಣೆ ಸುರಿದು ಅಭಿಷೇಕ ಮಾಡಲಿಲ್ಲ, ಪವಿತ್ರಾತ್ಮದಿಂದ ಅಭಿಷೇಕ ಮಾಡಿದನು.—ಮತ್ತಾಯ 3:16.

 ಮೆಸ್ಸೀಯನ ಪ್ರವಾದನೆಗಳನ್ನು ನೆರವೇರಿಸೋದು ಒಬ್ಬನೇನಾ ತುಂಬ ಜನರಾ?

 ಒಬ್ಬನೇ ನೆರವೇರಿಸೋದು. ಒಂದು ಬೆರಳಚ್ಚು ಹೇಗೆ ಒಬ್ಬ ವ್ಯಕ್ತಿಯನ್ನಷ್ಟೇ ಸೂಚಿಸುತ್ತೋ ಅದೇ ತರ ಬೈಬಲ್‌ ಪ್ರವಾದನೆಗಳ ನೆರವೇರಿಕೆ ಕೂಡ ಮೆಸ್ಸೀಯ ಅಥವಾ ಕ್ರಿಸ್ತ ಒಬ್ಬನೇ ಅಂತ ಸೂಚಿಸುತ್ತೆ. ಆಗಿದ್ರೂ “ಸುಳ್ಳು ಕ್ರಿಸ್ತರೂ ಸುಳ್ಳು ಪ್ರವಾದಿಗಳೂ ಎದ್ದು ಸಾಧ್ಯವಾದರೆ ಆಯ್ದುಕೊಳ್ಳಲ್ಪಟ್ಟವರನ್ನೂ ತಪ್ಪುದಾರಿಗೆ ಎಳೆಯಲಿಕ್ಕಾಗಿ ಮಹಾ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿತೋರಿಸುವರು” ಎಂದು ಬೈಬಲ್‌ ಎಚ್ಚರಿಕೆ ಕೊಡುತ್ತೆ.—ಮತ್ತಾಯ 24:24.

 ಮೆಸ್ಸೀಯ ಮುಂದೇನಾದರೂ ಬರುತ್ತಾನಾ?

 ಇಲ್ಲ. ಇಸ್ರಾಯೇಲಿನ ರಾಜ ದಾವೀದನ ವಂಶದಲ್ಲಿ ಮೆಸ್ಸೀಯ ಬರುತ್ತಾನೆಂದು ಬೈಬಲ್‌ ಮುಂಚೆನೇ ಹೇಳಿತ್ತು. (ಕೀರ್ತನೆ 89:3, 4) ದಾವೀದನಿಂದ ಯೇಸುವಿನ ತನಕ ಇರೋ ಯೆಹೂದಿ ಪೂರ್ವಜರ ದಾಖಲೆಗಳು ಕಳೆದು ಹೋಗಿವೆ. ಕ್ರಿ.ಶ. 70 ರಲ್ಲಿ ರೋಮನ್ನರು ಯೆರೂಸಲೇಮನ್ನು ವಶಪಡಿಸಿಕೊಂಡಾಗ ಬಹುಶಃ ಆ ದಾಖಲೆಗಳು ನಾಶ ಆಗಿರಬಹುದು. a ಆಮೇಲಿಂದ ಯೇಸು ದಾವೀದನ ರಾಜವಂಶದವನು ಅಂತ ಯಾರಿಂದನೂ ಸಾಬೀತು ಮಾಡಲು ಆಗಲಿಲ್ಲ. ಆದ್ರೆ ಯೇಸು ಭೂಮಿಯಲ್ಲಿ ಇದ್ದಾಗ ಪೂರ್ವಜರ ಆ ದಾಖಲೆಗಳು ಇದ್ದವು. ಆದ್ದರಿಂದ ಯೇಸು ತಾನು ದಾವೀದನ ವಂಶದವನು ಅಂತ ಹೇಳಿದಾಗ ಅವನ ಶತ್ರುಗಳು ಕೂಡ ಅವನನ್ನ ಪ್ರಶ್ನಿಸಲು ಧೈರ್ಯ ಮಾಡಲಿಲ್ಲ.—ಮತ್ತಾಯ 22:41-46.

 ಮೆಸ್ಸೀಯನ ಬಗ್ಗೆ ಬೈಬಲಲ್ಲಿ ಎಷ್ಟು ಪ್ರವಾದನೆಗಳು ಇವೆ?

 ಇಷ್ಟೇ ಅಂತ ಹೇಳಕ್ಕಾಗಲ್ಲ. ಏಕೆಂದ್ರೆ ಮೆಸ್ಸೀಯನ ಬಗ್ಗೆನೇ ಇರೋ ಪ್ರವಾದನೆಯ ಭಾಗಗಳನ್ನ ಒಬ್ಬೊಬ್ಬರೂ ಒಂದೊಂದು ತರ ಲೆಕ್ಕ ಮಾಡ್ತಾರೆ. ಉದಾಹರಣೆಗೆ, ಯೆಶಾಯ 53:2-7 ರಲ್ಲಿರೋ ಮೆಸ್ಸೀಯನ ಪ್ರವಾದನೆ ನೋಡಿ. ಅದರಲ್ಲಿ ಮೆಸ್ಸೀಯನಿಗೆ ಏನೇನು ಆಗುತ್ತೆ ಅಂತ ಬೇರೆ ಬೇರೆ ವಿಷ್ಯಗಳನ್ನ ತಿಳಿಸಲಾಗಿದೆ. ಕೆಲವರು ಆ ಎಲ್ಲ ವಿಷ್ಯಗಳನ್ನ ಒಂದೇ ಪ್ರವಾದನೆ ಅಂತ ಲೆಕ್ಕ ಮಾಡ್ತಾರೆ. ಇನ್ನು ಕೆಲವರು ಒಂದೊಂದು ವಿಷ್ಯವನ್ನು ಬೇರೆ ಬೇರೆ ಪ್ರವಾದನೆ ಅಂತ ನೆನಸ್ತಾರೆ.

 ಯೇಸು ನೆರವೇರಿಸಿದ ಕೆಲವು ಪ್ರವಾದನೆಗಳು

ಪ್ರವಾದನೆ

ವಚನ

ನೆರವೇರಿಕೆ

ಅಬ್ರಹಾಮನ ಸಂತಾನ

ಆದಿಕಾಂಡ 22:17, 18

ಮತ್ತಾಯ 1:1

ಅಬ್ರಹಾಮನ ಮಗನಾದ ಇಸಾಕನ ವಂಶ

ಆದಿಕಾಂಡ 17:19

ಮತ್ತಾಯ 1:2

ಇಸ್ರಾಯೇಲಿನ ಯೆಹೂದ ಕುಲದಲ್ಲಿ ಹುಟ್ಟುತ್ತಾನೆ

ಆದಿಕಾಂಡ 49:10

ಮತ್ತಾಯ 1:1, 3

ರಾಜ ದಾವೀದನ ರಾಜವಂಶ

ಯೆಶಾಯ 9:7

ಮತ್ತಾಯ 1:1

ಕನ್ಯೆಗೆ ಹುಟ್ಟುತ್ತಾನೆ

ಯೆಶಾಯ 7:14

ಮತ್ತಾಯ 1:18, 22, 23

ಬೇತ್ಲೆಹೇಮಲ್ಲಿ ಹುಟ್ಟುತ್ತಾನೆ

ಮೀಕ 5:2

ಮತ್ತಾಯ 2:1, 5, 6

ಅವನ ಹೆಸರು ಇಮ್ಮಾನುವೇಲ್‌ b

ಯೆಶಾಯ 7:14

ಮತ್ತಾಯ 1:21-23

ಬಡಕುಟುಂಬದಲ್ಲಿ ಹುಟ್ಟಿದನು

ಯೆಶಾಯ 53:2

ಲೂಕ 2:7

ಅವನು ಹುಟ್ಟಿದ ಮೇಲೆ ಚಿಕ್ಕ ಮಕ್ಕಳನ್ನು ಸಾಯಿಸಿದ್ರು

ಯೆರೆಮೀಯ 31:15

ಮತ್ತಾಯ 2:16-18

ಐಗುಪ್ತದಿಂದ ಕರೆಯಲಾಯಿತು

ಹೋಶೇಯ 11:1

ಮತ್ತಾಯ 2:13-15

ಜನ ಅವನನ್ನ ನಜರೇತಿನವನು c ಅಂತ ಕರೆದ್ರು

ಯೆಶಾಯ 11:1

ಮತ್ತಾಯ 2:23

ಅವನಿಗಿಂತ ಮುಂಚೆ ಅವನ ಬಗ್ಗೆ ಸಾರುವವನು ಬರ್ತಾನೆ

ಮಲಾಕಿ 3:1

ಮತ್ತಾಯ 11:7-10

ಕ್ರಿ.ಶ. 29 ರಲ್ಲಿ d ಮೆಸ್ಸೀಯನಾಗಿ ಅಭಿಷೇಕ

ದಾನಿಯೇಲ 9:25

ಮತ್ತಾಯ 3:13-17

ದೇವರು ಆತನನ್ನ ತನ್ನ ಮಗ ಅಂತ ಒಪ್ಪಿಕೊಂಡ

ಕೀರ್ತನೆ 2:7

ಅಪೊಸ್ತಲರ ಕಾರ್ಯ 13:33, 34

ದೇವರ ಆಲಯಕ್ಕಾಗಿ ಅವನಿಗಿದ್ದ ಹುರುಪು

ಕೀರ್ತನೆ 69:9

ಯೋಹಾನ 2:13-17

ಸುವಾರ್ತೆ ಸಾರುತ್ತಾನೆ

ಯೆಶಾಯ 61:1

ಲೂಕ 4:16-21

ಗಲಿಲಾಯದಲ್ಲಿ ಮಾಡಿದ ಸೇವೆ ದೊಡ್ಡ ಬೆಳಕು ತರ ಇತ್ತು

ಯೆಶಾಯ 9:1, 2

ಮತ್ತಾಯ 4:13-16

ಮೋಶೆ ತರ ಅದ್ಭುತ ಮಾಡಿದನು

ಧರ್ಮೋಪದೇಶಕಾಂಡ 18:15

ಅಪೊಸ್ತಲರ ಕಾರ್ಯ 2:22

ಮೋಶೆ ತರ ಆತನು ದೇವರ ಯೋಚನೆಗಳನ್ನ ತಿಳಿಸಿದನು

ಧರ್ಮೋಪದೇಶಕಾಂಡ 18:18, 19

ಯೋಹಾನ 12:49

ತುಂಬ ಜನರನ್ನ ವಾಸಿಮಾಡಿದನು

ಯೆಶಾಯ 53:4

ಮತ್ತಾಯ 8:16, 17

ತನ್ನ ಕಡೆ ಗಮನ ಸೆಳೆಯಲಿಲ್ಲ

ಯೆಶಾಯ 42:2

ಮತ್ತಾಯ 12:17, 19

ಕಷ್ಟದಲ್ಲಿ ಇರುವವರಿಗೆ ಅನುಕಂಪ ತೋರಿಸಿದನು

ಯೆಶಾಯ 42:3

ಮತ್ತಾಯ 12:9-20; ಮಾರ್ಕ 6:34

ದೇವರ ನೀತಿ ಏನಂತ ತೋರಿಸಿಕೊಟ್ಟನು

ಯೆಶಾಯ 42:1, 4

ಮತ್ತಾಯ 12:17-20

ಅದ್ಭುತ ಸಲಹೆಗಾರ

ಯೆಶಾಯ 9:6, 7

ಯೋಹಾನ 6:68

ಯೆಹೋವನ ಹೆಸರನ್ನ ತಿಳಿಸಿದನು

ಕೀರ್ತನೆ 22:22

ಯೋಹಾನ 17:6

ಉದಾಹರಣೆಗಳನ್ನು ಕೊಟ್ಟು ಮಾತಾಡಿದನು

ಕೀರ್ತನೆ 78:2

ಮತ್ತಾಯ 13:34, 35

ನಾಯಕ

ದಾನಿಯೇಲ 9:25

ಮತ್ತಾಯ 23:10

ತುಂಬ ಜನ ಆತನನ್ನ ನಂಬಲಿಲ್ಲ

ಯೆಶಾಯ 53:1

ಯೋಹಾನ 12:37, 38

ಆತನು ಎಡವಿಸೋ ಕಲ್ಲು

ಯೆಶಾಯ 8:14, 15

ಮತ್ತಾಯ 21:42-44

ಜನ ಆತನನ್ನ ತಿರಸ್ಕರಿಸ್ತಾರೆ

ಕೀರ್ತನೆ 118:22, 23

ಅಪೊಸ್ತಲರ ಕಾರ್ಯ 4:10, 11

ಕಾರಣ ಇಲ್ಲದೆ ಆತನನ್ನ ದ್ವೇಷಿಸಿದ್ರು

ಕೀರ್ತನೆ 69:4

ಯೋಹಾನ 15:24, 25

ಕತ್ತೆ ಮೇಲೆ ಕೂತು ವಿಜಯೋತ್ಸವದಿಂದ ಯೆರೂಸಲೇಮಿಗೆ ಪ್ರವೇಶ

ಜೆಕರ್ಯ 9:9

ಮತ್ತಾಯ 21:4-9

ಮಕ್ಕಳು ಹೊಗಳ್ತಾರೆ

ಕೀರ್ತನೆ 8:2

ಮತ್ತಾಯ 21:15, 16

ಯೆಹೋವನ ಹೆಸರಿನಲ್ಲಿ ಬಂದನು

ಕೀರ್ತನೆ 118:26

ಯೋಹಾನ 12:12, 13

ನಂಬಿದ ಸ್ನೇಹಿತನೇ ದ್ರೋಹ ಮಾಡಿದ

ಕೀರ್ತನೆ 41:9

ಯೋಹಾನ 13:18

30 ಬೆಳ್ಳಿ ನಾಣ್ಯಕ್ಕೋಸ್ಕರ ದ್ರೋಹ e

ಜೆಕರ್ಯ 11:12, 13

ಮತ್ತಾಯ 26:14-16; 27:3-10

ಆತನನ್ನ ಸ್ನೇಹಿತರು ಬಿಟ್ಟುಹೋದ್ರು

ಜೆಕರ್ಯ 13:7

ಮತ್ತಾಯ 26:31, 56

ಆತನ ವಿರುದ್ಧ ಸುಳ್ಳು ಸಾಕ್ಷಿ ಹೇಳಿದ್ರು

ಕೀರ್ತನೆ 35:11

ಮತ್ತಾಯ 26:59-61

ಸುಳ್ಳು ಆರೋಪ ಹಾಕಿದವರ ಮುಂದೆ ಮೌನವಾಗಿದ್ದನು

ಯೆಶಾಯ 53:7

ಮತ್ತಾಯ 27:12-14

ಉಗುಳಿದರು

ಯೆಶಾಯ 50:6

ಮತ್ತಾಯ 26:67; 27:27, 30

ತಲೆ ಮೇಲೆ ಹೊಡೆದ್ರು

ಮೀಕ 5:1

ಮಾರ್ಕ 15:19

ಚಾಟಿಯಿಂದ ಹೊಡೆದ್ರು

ಯೆಶಾಯ 50:6

ಯೋಹಾನ 19:1

ಹೊಡೆದವರನ್ನ ತಡೆಯಲಿಲ್ಲ

ಯೆಶಾಯ 50:6

ಯೋಹಾನ 18:22, 23

ಅಧಿಕಾರಿಗಳು ಆತನ ವಿರುದ್ಧ ಸಂಚು ಹೂಡಿದ್ರು

ಕೀರ್ತನೆ 2:2

ಲೂಕ 23:10-12

ಆತನ ಕಾಲು ಕೈಗಳನ್ನ ಕಂಬಕ್ಕೆ ಜಡಿದರು

ಕೀರ್ತನೆ 22:16

ಮತ್ತಾಯ 27:35; ಯೋಹಾನ 20:25

ಆತನ ಬಟ್ಟೆಗಾಗಿ ಚೀಟು ಹಾಕಿದ್ರು (ಜೂಜಾಡಿದ್ರು)

ಕೀರ್ತನೆ 22:18

ಯೋಹಾನ 19:23, 24

ಪಾಪಿಗಳಲ್ಲಿ ಒಬ್ಬ ಅಂತ ಎಣಿಸಿದರು

ಯೆಶಾಯ 53:12

ಮತ್ತಾಯ 27:38

ಬೈದರು, ಅವಮಾನಿಸಿದರು

ಕೀರ್ತನೆ 22:7, 8

ಮತ್ತಾಯ 27:39-43

ಪಾಪಿಗಳಿಗಾಗಿ ಕಷ್ಟಪಟ್ಟನು

ಯೆಶಾಯ 53:5, 6

1 ಪೇತ್ರ 2:23-25

ದೇವರು ಕೈಬಿಟ್ಟಿದ್ದಾನೇನೋ ಅಂತ ಜನ ಅಂದುಕೊಂಡರು

ಕೀರ್ತನೆ 22:1

ಮಾರ್ಕ 15:34

ಆತನಿಗೆ ಕುಡಿಯಲು ಹುಳಿರಸ ಮತ್ತು ಕಹಿರಸ ಕೊಟ್ರು

ಕೀರ್ತನೆ 69:21

ಮತ್ತಾಯ 27:34

ಸಾಯೋ ಮುಂಚೆ ದಾಹ ಆಯ್ತು

ಕೀರ್ತನೆ 22:15

ಯೋಹಾನ 19:28, 29

ತನ್ನ ಜೀವವನ್ನ ದೇವರ ಕೈಗೆ ಒಪ್ಪಿಸಿದನು

ಕೀರ್ತನೆ 31:5

ಲೂಕ 23:46

ಪ್ರಾಣ ಬಿಟ್ಟನು

ಯೆಶಾಯ 53:12

ಮಾರ್ಕ 15:37

ಪಾಪ ತೆಗೆದು ಹಾಕಲು ತನ್ನ ಜೀವವನ್ನ ಬೆಲೆಯಾಗಿ ಕೊಟ್ಟನು

ಯೆಶಾಯ 53:12

ಮತ್ತಾಯ 20:28

ಮೂಳೆ ಮುರಿಯಲಿಲ್ಲ

ಕೀರ್ತನೆ 34:20

ಯೋಹಾನ 19:31-33, 36

ಈಟಿಯಿಂದ ಚುಚ್ಚಿದ್ರು

ಜೆಕರ್ಯ 12:10

ಯೋಹಾನ 19:33-35, 37

ಶ್ರೀಮಂತರ ಜೊತೆ ಹೂಣಿಡಲಾಯಿತು

ಯೆಶಾಯ 53:9

ಮತ್ತಾಯ 27:57-60

ಆತನನ್ನ ದೇವರು ಜೀವಂತವಾಗಿ ಎಬ್ಬಿಸಿದನು

ಕೀರ್ತನೆ 16:10

ಅಪೊಸ್ತಲರ ಕಾರ್ಯ 2:29-31

ದ್ರೋಹ ಮಾಡಿದವನ ಸ್ಥಾನಕ್ಕೆ ಇನ್ನೊಬ್ಬನನ್ನ ನೇಮಿಸಲಾಯಿತು

ಕೀರ್ತನೆ 109:8

ಅಪೊಸ್ತಲರ ಕಾರ್ಯ 1:15-20

ದೇವರ ಬಲಗಡೆ ಕೂತನು

ಕೀರ್ತನೆ 110:1

ಅಪೊಸ್ತಲರ ಕಾರ್ಯ 2:34-36

a “ಯೆಹೂದಿ ಕುಲ ಮತ್ತು ಕುಟುಂಬಗಳ ದಾಖಲೆಗಳು ಅಳಿದು ಹೋದದ್ದು ಯೆರೂಸಲೇಮ್‌ ನಾಶ ಆದಾಗ, ಅದಕ್ಕಿಂತ ಮುಂಚೆ ಅಲ್ಲ ಅಂತ ಖಂಡಿತ ಹೇಳಬಹುದು” ಎಂದು ಮೆಕ್‌ಕ್ಲಿಂಗ್‌ಟಾಕ್‌ ಮತ್ತು ಸ್ಟ್ರಾಂಗ್ಸ್‌ ಸೈಕ್ಲೋಪೀಡಿಯ ಹೇಳುತ್ತೆ.

b ಇಮ್ಮಾನುವೇಲ್‌ ಅನ್ನೋ ಹೀಬ್ರು ಹೆಸರಿನ ಅರ್ಥ “ದೇವರು ನಮ್ಮೊಂದಿಗಿದ್ದಾನೆ.” ಇದು ಯೇಸು ಮೆಸ್ಸೀಯನಾಗಿ ವಹಿಸೋ ಪಾತ್ರವನ್ನು ಚೆನ್ನಾಗಿ ತಿಳಿಸುತ್ತೆ. ಯೇಸು ಭೂಮಿ ಮೇಲೆ ಇದ್ದದ್ದು ಮತ್ತು ಆತನ ಮಾಡಿದ ಕೆಲಸಗಳು ದೇವರು ತನ್ನ ಆರಾಧಕರ ಜೊತೆ ಇದ್ದಾನೆ ಅಂತ ತೋರಿಸಿಕೊಟ್ಟಿತು.—ಲೂಕ 2:27-32; 7:12-16.

c ನಟ್ಸರ್‌ ಎಂಬ ಹೀಬ್ರು ಪದದಿಂದ “ನಜರೇತಿನವನು” ಅನ್ನೋ ಪದ ಬಂದಿರಬಹುದು. ನಟ್ಸರ್‌ ಅಂದ್ರೆ “ಚಿಗುರು.”

d ಮೆಸ್ಸೀಯ ಕ್ರಿ.ಶ. 29 ರಲ್ಲಿ ಬರ್ತಾನೆ ಅಂತ ತಿಳಿಸೋ ಬೈಬಲ್‌ ಕಾಲಗಣನೆಯ ವಿವರಗಳಿಗೆ “ದಾನಿಯೇಲನ ಪ್ರವಾದನೆಯು ಮೆಸ್ಸೀಯನ ಆಗಮನವನ್ನು ಮುಂತಿಳಿಸುವ ವಿಧ” ಎಂಬ ಲೇಖನ ನೋಡಿ.

e ಈ ಪ್ರವಾದನೆ ಜೆಕರ್ಯ ಪುಸ್ತಕದಲ್ಲಿದೆ. ಆದ್ರೆ ಈ ಪ್ರವಾದನೆಯು “ಪ್ರವಾದಿಯಾದ ಯೆರೆಮೀಯನ ಮೂಲಕ ತಿಳಿಸಲ್ಪಟ್ಟ ಮಾತು” ಅಂತ ಬೈಬಲ್‌ ಬರಹಗಾರ ಮತ್ತಾಯ ಹೇಳಿದ. (ಮತ್ತಾಯ 27:9) ಬೈಬಲಲ್ಲಿ “ಪ್ರವಾದಿಗಳ ಗ್ರಂಥ” ಅನ್ನೋ ವಿಭಾಗದಲ್ಲಿ ಯೆರೆಮೀಯ ಪುಸ್ತಕ ಕೆಲವೊಮ್ಮೆ ಮೊದಲು ಇರ್ತಿತ್ತು. (ಲೂಕ 24:44) ಪ್ರವಾದಿಗಳ ಪುಸ್ತಕಗಳ ಇಡೀ ಸಂಗ್ರಹಕ್ಕೆ ಸೂಚಿಸಲು “ಯೆರೆಮೀಯ” ಅಂತ ಮತ್ತಾಯ ಹೇಳಿರಬಹುದು. ಈ ಸಂಗ್ರಹದಲ್ಲಿ ಜೆಕರ್ಯ ಪುಸ್ತಕನೂ ಇದೆ.