ಮಾಹಿತಿ ಇರುವಲ್ಲಿ ಹೋಗಲು

ಸದಾಕಾಲ ಬದುಕಬೇಕಂದ್ರೆ ಏನು ಮಾಡಬೇಕು?

ಸದಾಕಾಲ ಬದುಕಬೇಕಂದ್ರೆ ಏನು ಮಾಡಬೇಕು?

ಬೈಬಲ್‌ ಕೊಡೋ ಉತ್ತರ

 “ದೇವರ ಚಿತ್ತಕ್ಕನುಸಾರವಾಗಿ ಮಾಡುವವನು ಸದಾಕಾಲ ಜೀವಿಸುವನು” ಅಂತ ಬೈಬಲ್‌ ಮಾತು ಕೊಡುತ್ತೆ. (1 ಯೋಹಾನ 2:17, ಪರಿಶುದ್ಧ ಬೈಬಲ್‌ಈಸಿ ಟು ರೀಡ್‌ ವರ್ಷನ್‌) ಹಾಗಾದ್ರೆ ನೀವೇನು ಮಾಡಿದ್ರೆ ದೇವರಿಗೆ ಇಷ್ಟ ಆಗುತ್ತೆ?

  •   ದೇವರನ್ನ, ದೇವರ ಮಗ ಯೇಸುವನ್ನ ತಿಳ್ಕೊಳ್ಳಿ. ದೇವರಿಗೆ ಪ್ರಾರ್ಥಿಸ್ತಾ ಯೇಸು ಹೇಳಿದ್ದು: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.” (ಯೋಹಾನ 17:3) ದೇವರ ಮತ್ತು ಆತನ ಮಗನ ಜ್ಞಾನವನ್ನ ಹೇಗೆ ಪಡ್ಕೊಳ್ಳೋದು? ಬೈಬಲನ್ನ ಕಲಿಯುವಾಗ ಮತ್ತು ಅದರಲ್ಲಿರೋ ಸಂದೇಶವನ್ನ ನಮ್ಮ ಜೀವನದಲ್ಲಿ ಅನ್ವಯಿಸುವಾಗ ನಾವು ಅವರ ಜ್ಞಾನ ಪಡ್ಕೊಳ್ಳಬಹುದು. a ನಮಗೆ ಜೀವ ಕೊಟ್ಟ ನಮ್ಮ ಸೃಷ್ಟಿಕರ್ತ ಯೆಹೋವ ದೇವರ ಆಲೋಚನೆಗಳ ಬಗ್ಗೆ ಬೈಬಲ್‌ ತಿಳಿಸುತ್ತೆ. (ಅಪೊಸ್ತಲರ ಕಾರ್ಯ 17:24, 25) ಅಷ್ಟೇ ಅಲ್ಲ, ‘ನಿತ್ಯಜೀವದ ಮಾತುಗಳನ್ನ’ ತಿಳಿಸಿದ ಆತನ ಮಗನಾದ ಯೇಸು ಬಗ್ಗೆನೂ ಬೈಬಲ್‌ ತಿಳಿಸುತ್ತೆ.—ಯೋಹಾನ 6:67-69.

  •   ಯೇಸು ಕೊಟ್ಟ ವಿಮೋಚನ ಮೌಲ್ಯದ ಮೇಲೆ ನಂಬಿಕೆ ಇಡಿ. ಯೇಸು ಭೂಮಿಗೆ “ಸೇವೆಮಾಡುವುದಕ್ಕೂ ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೂ ಬಂದನು” (ಮತ್ತಾಯ 20:28) ಯೇಸು ಕೊಟ್ಟ ವಿಮೋಚನ ಮೌಲ್ಯದಿಂದ ಮಾನವರಿಗೆ ಭೂಮಿಯ ಮೇಲೆ ಪರದೈಸಿನಲ್ಲಿ ಸದಾಕಾಲ ಜೀವಿಸುವ ದಾರಿ ತೆರೆಯಿತು. b (ಕೀರ್ತನೆ 37:29) ಯೇಸು ಹೇಳಿದ್ದು, “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ಯೋಹಾನ 3:16) ಈ ಮಾತಿಂದ ಒಂದು ವಿಷ್ಯ ಅರ್ಥ ಆಗುತ್ತೆ, ಅದೇನಂದ್ರೆ ನಾವು ಯೇಸು ಮೇಲೆ ನಂಬಿಕೆ ಇಡಬೇಕು ಅಂದ್ರೆ ಆತನು ಕಲಿಸಿಕೊಟ್ಟ ಪ್ರಕಾರ ನಡೀಬೇಕು ಮತ್ತು ಆತನ ತಂದೆಯ ಇಷ್ಟದ ಪ್ರಕಾರ ಜೀವಿಸಬೇಕು.—ಮತ್ತಾಯ 7:21; ಯಾಕೋಬ 2:17.

  •   ದೇವರ ಜೊತೆ ಆಪ್ತ ಸ್ನೇಹ ಬೆಳೆಸಿಕೊಳ್ಳಿ. ನಾವು ದೇವರಿಗೆ ಆಪ್ತರಾಗಿರಬೇಕು, ಆತನ ಗೆಳೆಯರಾಗಿರಬೇಕು ಅಂತ ದೇವರು ಬಯಸ್ತಾನೆ. (ಯಾಕೋಬ 2:23; 4:8) ದೇವರಿಗೆ ಸಾವು ಅನ್ನೋದೇ ಇಲ್ಲ, ಆತನು ಅಮರ. ಆತನ ಸ್ನೇಹಿತರು ಸಹ ಆತನ ತರ ಸದಾಕಾಲ ಜೀವಿಸಬೇಕು ಅನ್ನೋದೇ ಆತನ ಆಸೆ. ಆತನನ್ನ ಆರಾಧಿಸೋ ಜನ್ರೆಲ್ಲ ಎಷ್ಟು ಕಾಲ ಬದುಕಬೇಕು ಅಂತ ಆತನು ಇಷ್ಟಪಡ್ತಾನೆ ಅನ್ನೋದನ್ನ ತನ್ನ ವಾಕ್ಯದಲ್ಲಿ ಹೀಗೆ ಬರಿಸಿದ್ದಾನೆ: “ನೀವು ಶಾಶ್ವತಕ್ಕೂ ಜೀವನವನ್ನ ಆನಂದಿಸಬೇಕು.”—ಕೀರ್ತನೆ 22:26, ನೂತನ ಲೋಕ ಭಾಷಾಂತರ.

ಸದಾಕಾಲ ಬದುಕೋದರ ಬಗ್ಗೆ ಇರೋ ಊಹಾಪೋಹಗಳು

 ಊಹಾಪೋಹ: ಮನುಷ್ಯರು ಹಾಕೋ ಶ್ರಮದಿಂದ ಸದಾಕಾಲದ ಜೀವನ ಸಾಧ್ಯ.

 ಸತ್ಯ: ವೈದ್ಯಕೀಯ ಲೋಕ ಮಾಡ್ತಿರೋ ಸಾಧನೆಯಿಂದ ಮನುಷ್ಯರ ಆಯಸ್ಸನ್ನ ಹೆಚ್ಚಿಸಿರೋದಾದ್ರೂ ಅವರ ಶ್ರಮದಿಂದ ಸದಾಕಾಲದ ಜೀವನ ಕನಸಾಗೇ ಉಳಿದಿದೆ. ದೇವರು ಒಬ್ಬನೇ ಸದಾಕಾಲದ ಜೀವನ ಕೊಡಲು ಸಾಧ್ಯ. ಯಾಕಂದ್ರೆ ಆತನೇ “ಬಳಿಯಲ್ಲಿ ಜೀವದ ಬುಗ್ಗೆ” ಇದೆ. (ಕೀರ್ತನೆ 36:9) ಅಷ್ಟೇ ಅಲ್ಲ, ದೇವರು “ಮರಣವನ್ನು ಶಾಶ್ವತವಾಗಿ” ತೆಗೆದುಹಾಕಿ ನಂಬಿಗಸ್ತ ಜನರಿಗೆಲ್ಲ ಸದಾಕಾಲದ ಜೀವನ ಕೊಡ್ತೇನೆ ಅಂತ ಮಾತು ಕೊಟ್ಟಿದ್ದಾನೆ.—ಯೆಶಾಯ 25:8; 1 ಯೋಹಾನ 2:25.

 ಊಹಾಪೋಹ: ಕೆಲವು ಜನಾಂಗದವರು ಮಾತ್ರ ಸದಾಕಾಲ ಬದುಕ್ತಾರೆ.

 ಸತ್ಯ: ದೇವರು ಪಕ್ಷಪಾತಿಯಲ್ಲ. ಬದಲಿಗೆ, “ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ.” (ಅಪೊಸ್ತಲರ ಕಾರ್ಯ 10:34, 35) ಯಾವುದೇ ಹಿನ್ನೆಲೆ, ಸಂಸ್ಕೃತಿಯಿಂದ ಬಂದ ಜನರು ಅವರಾಗಿರಲಿ ದೇವರಿಗೆ ವಿಧೇಯರಾಗಿದ್ರೆ ಸಾಕು ಸದಾಕಾಲ ಜೀವಿಸೋ ಅವಕಾಶ ಅವರ ಮುಂದಿದೆ.

 ಊಹಾಪೋಹ: ಸದಾಕಾಲದ ಜೀವನ ಬೋರಿಂಗ್‌ ಆಗಿರುತ್ತೆ.

 ಸತ್ಯ: ಸದಾಕಾಲ ಜೀವನದ ಉಡುಗೊರೆ ಕೊಡ್ತಿರೋದು ಯೆಹೋವ ದೇವರೇ, ಆತನಿಗೆ ನಮ್ಮ ಮೇಲೆ ತುಂಬ ಪ್ರೀತಿ ಇದೆ. ಅಷ್ಟೇ ಅಲ್ಲ ನಾವು ಖುಷಿಯಾಗಿರಬೇಕು ಅನ್ನೋದೇ ಆತನ ಆಸೆ. (ಯಾಕೋಬ 1:17; 1 ಯೋಹಾನ 4:8) ಹಾಗಾಗಿ ನಾವು ಖುಷಿಯಾಗಿ ಜೀವನ ಮಾಡಬೇಕಂದ್ರೆ ಸಂತೃಪ್ತಿ ಕೊಡೋ, ಅರ್ಥ ಇರೋ ಕೆಲಸ ಇರಬೇಕಂತ ಆತನಿಗೆ ಗೊತ್ತು. (ಪ್ರಸಂಗಿ 3:12) ಯಾರಿಗೆಲ್ಲ ದೇವರು ಸದಾಕಾಲದ ಜೀವನ ಕೊಡ್ತಾನೋ ಅವರಿಗೆಲ್ಲ ತೃಪ್ತಿ ಕೊಡೋ, ಅರ್ಥ ಇರೋ ಕೆಲಸ ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. ಆ ಕೆಲಸದಿಂದ ನಿಮಗೂ ನಿಮ್ಮನ್ನ ಪ್ರೀತಿಸೋ ಜನರಿಗೂ ತುಂಬ ಪ್ರಯೋಜನ ಆಗುತ್ತೆ.—ಯೆಶಾಯ 65:22, 23.

 ಅಷ್ಟೇ ಅಲ್ಲ, ಸದಾಕಾಲ ಜೀವನವನ್ನ ತಮ್ಮದಾಗಿ ಮಾಡ್ಕೊಳ್ಳೋರು ತಮ್ಮ ಸೃಷ್ಟಿಕರ್ತನ ಬಗ್ಗೆ ಮತ್ತು ಆತನ ಸೃಷ್ಟಿಯ ಬಗ್ಗೆ ಹೊಸಹೊಸ ವಿಷ್ಯಗಳನ್ನ ಕಲಿತಾ ಇರ್ತಾರೆ. ದೇವರು ಮನುಷ್ಯರನ್ನ ಸೃಷ್ಟಿಸುವಾಗ್ಲೇ ಅವರು ಸದಾಕಾಲ ಜೀವಿಸಬೇಕು ಮತ್ತು ತನ್ನ ಬಗ್ಗೆ ತಿಳ್ಕೊಬೇಕು ಅನ್ನೋ ಉದ್ದೇಶದಿಂದ ಸೃಷ್ಟಿಸಿದ್ದಾನೆ. ಹಾಗಿದ್ರೂ, “ದೇವರ ಕಾರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವೇ ಇಲ್ಲ.” (ಪ್ರಸಂಗಿ 3:10, 11, ಪರಿಶುದ್ಧ ಬೈಬಲ್‌ಈಸಿ ಟು ರೀಡ್‌ ವರ್ಷನ್‌) ಹಾಗಾಗಿ ಸದಾಕಾಲ ಜೀವಿಸುವವರಿಗೆ ಕಲಿಯೋಕೆ ಮತ್ತು ಕಲಿತಿದ್ದನ್ನ ಮಾಡೋಕೆ ಹೊಸಹೊಸ ವಿಷ್ಯಗಳು ಯಾವಾಗ್ಲೂ ಇದ್ದೇ ಇರ್ತವೆ.

a ಯೆಹೋವನ ಸಾಕ್ಷಿಗಳು ಉಚಿತವಾಗಿ ಬೈಬಲ್‌ ಬಗ್ಗೆ ಕಲಿಸ್ತಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ಅಧ್ಯಯನ ಅಂದರೇನು? ಅನ್ನೋ ವಿಡಿಯೋ ನೋಡಿ.