ನನ್ನ ಫ್ರೆಂಡ್ ನನಗೆ ನೋವು ಮಾಡಿದ್ರೆ ಏನ್ ಮಾಡಲಿ?
ಯುವ ಜನರ ಪ್ರಶ್ನೆಗಳು
ನಿಮಗೆ ಏನ್ ಗೊತ್ತಿರಬೇಕು?
ಎಲ್ಲ ಮಾನವರ ಮಧ್ಯ ಸಮಸ್ಯೆ ಇದ್ದೆ ಇರುತ್ತೆ. ನಿಮ್ಮ ಫ್ರೆಂಡ್ ಅಥವಾ ನಿಮ್ಮ ಬೆಸ್ಟ್ ಫ್ರೆಂಡ್ ಪರಿಪೂರ್ಣರಲ್ಲದ ಕಾರಣ ಅವರ ಮಾತು, ನಡತೆಯಿಂದ ನಿಮಗೆ ನೋವು ಆಗಬಹುದು. ನೀವು ಕೂಡ ಪರಿಪೂರ್ಣರಲ್ಲ. ಹಾಗಾಗಿ ನಿಮ್ಮಿಂದನೂ ಬೇರೆಯವರಿಗೆ ನೋವು ಆಗಿರಬಹುದಲ್ಲಾ?—ಯಾಕೋಬ 3:2.
ಇಂಟರನೆಟ್ನಿಂದ ನಿಮಗೆ ನೋವಾಗೋ ಸಾಧ್ಯತೆ ಹೆಚ್ಚು. ಉದಾಹರಣೆಗೆ, ಡೇವಿಡ್ ಅನ್ನೋ ಹುಡುಗ ಹೀಗೆ ಹೇಳ್ತಾನೆ: “ನೀವು ಆನ್ಲೈನ್ನಲ್ಲಿ ಇದ್ದಾಗ ನಿಮ್ಮ ಫ್ರೆಂಡ್ಸ್ ಎಲ್ಲ ಸೇರಿ ಪಾರ್ಟಿ ಮಾಡ್ತಿರೋ ಫೋಟೋ ನೋಡ್ತಿರಾ. ಆಗ ನನಗೆ ಯಾಕೆ ಕರಿಲಿಲ್ಲ ಅಂತ ಯೋಚನೆ ಮಾಡೋಕೆ ಶುರು ಮಾಡ್ತೀರಾ. ಅಲ್ಲದೆ ಅವರು ನಿಮಗೆ ಮೋಸ ಮಾಡಿದ್ದಾರೆ ಅಂತ ಅಂದ್ಕೊಂಡು ಬೇಜಾರ್ ಮಾಡ್ಕೊಳ್ತಿರಾ.”
ಸಮಸ್ಯೆಯನ್ನ ಹೇಗೆ ಸರಿಪಡಿಸೋದು ಅಂತ ಕಲಿಯಿರಿ.
ನೀವೇನು ಮಾಡಬಹುದು?
ನಿಮ್ಮನೇ ಪರೀಕ್ಷಿಸಿಕೊಳ್ಳಿ. ಬೈಬಲ್ ಹೀಗೆ ಹೇಳುತ್ತೆ: “ತಟ್ಟಂತ ಕೋಪ ಮಾಡ್ಕೊಬೇಡ. ಯಾಕಂದ್ರೆ ಮೂಗಿನ ತುದಿಯಲ್ಲೇ ಕೋಪ ಇರೋದು ಮೂಢರಿಗೆ.”—ಪ್ರಸಂಗಿ 7:9.
“ಕೆಲವು ಸಲ ನಿಮಗೆ ಯಾವ ವಿಷ್ಯದ ಮೇಲೆ ಬೇಜಾರ್ ಆಗಿದೆಯೋ ಅದು ಅಷ್ಟು ದೊಡ್ಡ ವಿಷ್ಯನೇ ಅಲ್ಲ ಅಂತ ನಿಮಗೆ ಆಮೇಲೆ ಗೊತ್ತಾಗುತ್ತೆ.”—ಅಲಿಸಾ.
ಸ್ವಲ್ಪ ಯೋಚಿಸಿ: ನೀವು ಯಾವಾಗ್ಲೂ ಅತಿಯಾಗಿ ಯೋಚಿಸ್ತೀರಾ? ಬೇರೆಯವರ ಅಪರಿಪೂರ್ಣತೆಯನ್ನ ಸಹಿಸಿಕೊಳ್ಳೋಕೆ ನೀವು ಕಲಿಯೋಕಾಗುತ್ತಾ?—ಪ್ರಸಂಗಿ 7:21, 22.
ಕ್ಷಮಿಸೋದ್ರಿಂದ ಸಿಗೋ ಪ್ರಯೋಜನಗಳ ಬಗ್ಗೆ ಯೋಚಿಸಿ. ಬೈಬಲ್ ಹೀಗೆ ಹೇಳುತ್ತೆ: “ತಪ್ಪನ್ನ ಗಮನಿಸದೆ ಇರೋದು . . . ಗೌರವ ತರುತ್ತೆ.”—ಜ್ಞಾನೋಕ್ತಿ 19:11.
“ನೀವು ತಪ್ಪು ಹೊರಿಸಲು ಕಾರಣ ಇದ್ರು ಮನಸಾರೆ ಕ್ಷಮಿಸಿ. ಅಂದ್ರೆ ಆ ವ್ಯಕ್ತಿಯ ತಪ್ಪನ್ನ ಪದೇ-ಪದೇ ನೆನಪಿಸುತ್ತಾ ಅವರು ಪ್ರತೀ ಸಲ ಕ್ಷಮೆ ಕೇಳೋ ತರ ಮಾಡೋದಲ್ಲ. ನೀವು ಒಂದು ಸಲ ಕ್ಷಮಿಸಿದ್ರೆ ಅಲ್ಲಿಗೆ ಅದು ಮುಗಿತು, ಮತ್ತೆ ಅದನ್ನ ನೆನಪಿಸಿಕೊಳ್ಳಬಾರದು.”—ಮಾಲರೀ.
ಸ್ವಲ್ಪ ಯೋಚಿಸಿ: ಈ ವಿಷ್ಯ ಅಷ್ಟು ಗಂಭೀರವಾದದ್ದಾ? ಶಾಂತಿ ಕಾಪಾಡಿಕೊಳ್ಳೋಕೆ ನೀವು ಕ್ಷಮಿಸಬಹುದಾ?—ಕೊಲೊಸ್ಸೆ 3:13.
ಬೇರೆಯವರ ಬಗ್ಗೆ ಯೋಚಿಸಿ. ಬೈಬಲ್ ಹೀಗೆ ಹೇಳುತ್ತೆ: “ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.”—ಫಿಲಿಪ್ಪಿ 2:4.
“ಫ್ರೆಂಡ್ಶಿಪ್ನಲ್ಲಿ ಪ್ರೀತಿ, ಗೌರವ ಇದ್ರೆ ಸಮಸ್ಯೆಗಳನ್ನ ಬೇಗನೇ ಪರಿಹಾರ ಮಾಡೋಕೆ ಒಂದು ಬಲವಾದ ಕಾರಣ ಇರುತ್ತೆ. ಫ್ರೆಂಡ್ಶಿಪ್ ಉಳಿಸಿಕೊಳ್ಳೋಕೆ ನೀವು ಸಮಯ, ಶಕ್ತಿ ಮತ್ತು ಪ್ರಯತ್ನ ಹಾಕಿದ್ದೀರಾ. ಹಾಗಾಗಿ ಅದನ್ನ ಕಳಕೊಳ್ಳೋಕೆ ನೀವು ಬಯಸಲ್ಲ.”—ನಿಕೋಲ್.
ಸ್ವಲ್ಪ ಯೋಚಿಸಿ: ಬೇರೆಯವರಲ್ಲಿರೋ ಕೆಲವು ಒಳ್ಳೇ ಗುಣಗಳನ್ನ ಕಂಡುಹಿಡಿಯೋಕೆ ಆಗುತ್ತಾ?—ಫಿಲಿಪ್ಪಿ 2:3.
ಸಾರಾಂಶ: ನೋವಾದಾಗ ಅದನ್ನ ಎದುರಿಸೋಕೆ ಕಲಿಯೋದು ಒಂದು ಕೌಶಲ್ಯವಾಗಿದೆ. ಅದನ್ನ ಕಲಿತರೆ ಮುಂದೆ ದೊಡ್ಡವರಾದಾಗ ನಿಮಗೆ ಸಹಾಯ ಆಗುತ್ತೆ. ಅದನ್ನ ಯಾಕೆ ಈಗಲೇ ಕಲಿಯಬಾರದು?