ಸೆಕ್ಸ್ ಬಗ್ಗೆ ಯೋಚನೆ ಮಾಡೋದ್ರಿಂದ ದೂರ ಇರೋದು ಹೇಗೆ?
ಯುವ ಜನರ ಪ್ರಶ್ನೆಗಳು
“ಸೆಕ್ಸ್ ಬಗ್ಗೆ ಒಂದು ಸಲ ಯೋಚ್ನೆ ಮಾಡಿದ್ರೆ ನನ್ನ ತಲೆ ತುಂಬ ಅದೇ ತುಂಬಿಕೊಂಡಿರುತ್ತೆ. ಅದು ಸಡೆನ್ ಆಗಿ ಬಂದ್ಬಿಡುತ್ತೆ, ಆಗ ಬೇರೆ ವಿಷ್ಯದ ಬಗ್ಗೆ ಯೋಚ್ನೆ ಮಾಡೋಕೆ ಆಗಲ್ಲ. ನಾನು ಹೀಗೆಲ್ಲಾ ಯೋಚ್ನೆ ಮಾಡ್ತೀನಾ ಅಂತ ಅನ್ಸಿಬಿಡುತ್ತೆ.”—ವೆರಾ.
“ಸೆಕ್ಸ್ ಬಗ್ಗೆ ಯೋಚ್ನೆ ಮಾಡ್ದೆ ಇರೋಕೇ ಆಗಲ್ಲ. ನಾನು ಅದ್ರ ಕಲ್ಪನಾ ಲೋಕದಲ್ಲೇ ತೇಲಾಡ್ತಾ ಇರ್ತೀನಿ.”—ಜಾನ್.
ವೆರಾ ಮತ್ತು ಜಾನ್ ತರಾನೇ ನಿಮ್ಗೂ ಅನ್ಸುತ್ತಾ? ಹಾಗಿದ್ರೆ ಈ ಲೇಖನದಲ್ಲಿರೋ ಸಲಹೆಗಳು ಅಂಥಾ ಯೋಚ್ನೆಗಳಿಂದ ಹೊರಗೆ ಬರೋಕೆ ಸಹಾಯ ಮಾಡುತ್ತೆ.
ನಾವು ಸೆಕ್ಸ್ ಬಗ್ಗೆ ಯಾಕೆ ಯೋಚ್ನೆ ಮಾಡ್ಬಾರದು?
“ಲೈಂಗಿಕ ಬಯಕೆ ನಮ್ಮಲ್ಲಿ ಇಟ್ಟಿರೋದೇ ದೇವರು, ಅದನ್ನ ತೃಪ್ತಿ ಪಡಿಸ್ಕೊಳ್ಳೋದ್ರಲ್ಲಿ ತಪ್ಪೇನಿಲ್ಲ ಅಂತ ನನ್ನ ಅಂಕಲ್ ಹೇಳಿದ್ರು,” ಅಂತ ಅಲೆಕ್ಸ್ ಅನ್ನೋ ಯುವಕ ಹೇಳ್ದ.
ಅಲೆಕ್ಸ್ ಅವರ ಅಂಕಲ್ ಹೇಳಿದ್ರಲ್ಲಿ ಒಂದು ಭಾಗ ಮಾತ್ರ ಸರಿ. ದೇವರು ಲೈಂಗಿಕ ಬಯಕೆನ ಒಳ್ಳೇ ಕಾರಣಕ್ಕೋಸ್ಕರ ಕೊಟ್ಟಿದ್ದಾರೆ. ಈ ಸಾಮರ್ಥ್ಯ ಇರದಿದ್ರೆ ಭೂಮಿಯಲ್ಲಿ ಯಾರೂ ಇರ್ತಾ ಇರಲಿಲ್ಲ. ಆದ್ರೆ ಇದ್ರ ಬಗ್ಗೆನೇ ನಾವು ಯೋಚ್ನೆ ಮಾಡಬಾರದು. ಯಾಕೆ? ಈ ಎರಡು ಕಾರಣಗಳನ್ನ ನೋಡಿ:
ಮದುವೆಯಾಗಿರೋ ಗಂಡು ಮತ್ತು ಹೆಣ್ಣಿನ ನಡುವೆ ಮಾತ್ರ ಈ ಸಂಬಂಧ ಇರಬೇಕು ಅನ್ನೋದೇ ದೇವರ ಉದ್ದೇಶ ಅಂತ ಬೈಬಲ್ ಹೇಳುತ್ತೆ.—ಆದಿಕಾಂಡ 1:28; 2:24.
ನೀವು ಮದುವೆಯಾಗದೆ ಇದ್ದು, ಯಾವಾಗಲೂ ಸೆಕ್ಸ್ ಬಗ್ಗೆನೇ ಯೋಚ್ನೆ ಮಾಡ್ತಿರೋದಾದ್ರೆ ಒಂದಲ್ಲಾ ಒಂದಿನ ಅದನ್ನ ಮಾಡಿಬಿಡೋ ಸಾಧ್ಯತೆ ಹೆಚ್ಚು. ಆಮೇಲೆ ಮುಂದೆ ಜೀವನದಲ್ಲಿ ’ಎಂಥಾ ದೊಡ್ಡ ತಪ್ಪು ಮಾಡಿಬಿಟ್ಟೆ‘ ಅಂತ ಬೇಸರ ಪಟ್ಕೊತೀರ. ದೇವರ ಮಾತಿಗೆ ನೀವು ಬೆಲೆ ಕೊಡೋದಾದ್ರೆ ಹೀಗೆ ಮಾಡಲ್ಲ.
ನಿಮ್ಮ ಯೋಚನೆಗಳನ್ನ ಕಂಟ್ರೋಲ್ ಮಾಡೋದಾದ್ರೆ, ಸ್ವನಿಯಂತ್ರಣ ತೋರಿಸೋದಾದ್ರೆ ನಿಮ್ಮ ಜೀವನದ ಬೇರೆ ಕ್ಷೇತ್ರದಲ್ಲೂ ಸಮಸ್ಯೆಗಳಿಂದ ದೂರ ಇರ್ತೀರ.—1 ಕೊರಿಂಥ 9:25.
ಸ್ವನಿಯಂತ್ರಣ ತೋರಿಸೋದ್ರಿಂದ ಈಗಲೂ ಪ್ರಯೋಜ್ನ ಇದೆ, ಮುಂದೆನೂ ಪ್ರಯೋಜ್ನ ಇದೆ. ಇದ್ರಿಂದ ನೀವು ಯಾವಾಗ್ಲೂ ಸಂತೋಷದಿಂದ ಜೀವನ ನಡೆಸೋದಿಕ್ಕೆ ಸಾಧ್ಯವಾಗುತ್ತೆ. ಯಾವ ಮಕ್ಕಳಲ್ಲಿ ಸ್ವನಿಯಂತ್ರಣ ಇರುತ್ತೋ ಅಂಥವರಿಗೆ ಆರೋಗ್ಯ ಸಮಸ್ಯೆ ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗೋದು ಕಮ್ಮಿ. ಸಾಧ್ಯವಾದಷ್ಟು ಅವರು ನಿಯಮಗಳನ್ನ ಪಾಲಿಸೋದಕ್ಕೆ ಪ್ರಯತ್ನಿಸ್ತಾರೆ. a
ಸೆಕ್ಸ್ ಬಗ್ಗೆ ಯೋಚ್ನೆ ಮಾಡದೆ ಇರೋದು ಯಾಕೆ ಕಷ್ಟ?
ಹಾರ್ಮೋನುಗಳಲ್ಲಿ ಆಗೋ ಬದಲಾವಣೆಗಳು ಮತ್ತು ನಮ್ಮ ಸುತ್ತ ಮುತ್ತ ಸೆಕ್ಸ್ ಬಗ್ಗೆನೇ ಮಾತಾಡೋದ್ರಿಂದ ಅದರ ಬಗ್ಗೆ ಯೋಚ್ನೆ ಮಾಡ್ದೆ ಇರೋಕೆ ತುಂಬ ಕಷ್ಟ ಆಗುತ್ತೆ.
“ಮದುವೆಗೆ ಮುಂಚೆ ಸೆಕ್ಸ್ ಮಾಡೋದ್ರಲ್ಲಿ ತಪ್ಪೇನಿಲ್ಲ ಅನ್ನೋ ತರ ಎಲ್ಲಾ ಟೀವಿ ಪ್ರೋಗ್ರಾಮ್‌ಗಳಲ್ಲೂ ತೋರಿಸ್ತಾರೆ. ಅದ್ರಿಂದ ಏನೂ ತೊಂದರೆಗಳಾಗಲ್ಲ ಅಂತ ತೋರಿಸೋವಾಗ ಮನಸ್ಸು ಅದರ ಬಗ್ಗೆ ಯೋಚಿಸೋದು ಸಹಜ.”—ರೂತ್.
“ಕೆಲಸದ ಜಾಗದಲ್ಲಿ ಲೈಂಗಿಕತೆ ಬಗ್ಗೆ ಅಸಭ್ಯ ಮಾತುಗಳನ್ನ ತುಂಬ ಕೇಳಿಸ್ಕೊಳ್ಳೋದ್ರಿಂದ ಅದರ ಬಗ್ಗೆ ಕುತೂಹಲ ಹೆಚ್ಚಾಗುತ್ತೆ. ಅದರ ಬಗ್ಗೆ ಮಾತಾಡಿ ಮಾತಾಡಿ ಅದೇನೂ ತಪ್ಪಾದ ವಿಷ್ಯನೇ ಅಲ್ಲ ಅನ್ನೋ ರೀತಿಯಲ್ಲಿ ಪರಿಸ್ಥಿತಿ ಬದಲಾಗಿಬಿಟ್ಟಿದೆ.”—ನಿಕೋಲೆ.
“ಸೋಶಿಯಲ್ ಮೀಡಿಯಾದಲ್ಲಿ ಚಿತ್ರಗಳನ್ನ ನೋಡುವಾಗ ಇಂಥಾ ಅಸಭ್ಯವಾದ ಚಿತ್ರಗಳು ಬರುತ್ತೆ. ಒಂದು ಅಶ್ಲೀಲವಾದ ಚಿತ್ರನ ನೋಡಿದ್ರೂ ಅದನ್ನ ನಮ್ಮ ಮನಸ್ಸಿಂದ ಅಳಿಸಿ ಹಾಕೋದು ತುಂಬ ಕಷ್ಟ”—ಮರಿಯ.
ಈ ಎಲ್ಲಾ ಕಾರಣಗಳಿಂದ ಅಪೊಸ್ತಲ ಪೌಲನಿಗೆ ಹೇಗೆ ಅನಿಸ್ತೋ ಅದೇ ತರ ನಿಮ್ಗೂ ಅನಿಸಬಹುದು. ಅವನು ಹೇಳಿದ್ದು: “ನಾನು ಒಳ್ಳೇದು ಮಾಡೋಕೆ ಹೋಗ್ತೀನಿ, ಆದ್ರೆ ನನ್ನೊಳಗೆ ಕೆಟ್ಟದೇ ಇದೆ.”—ರೋಮನ್ನರಿಗೆ 7:21.
ನೀವೇನು ಮಾಡ್ಬಹುದು
ಮನಸ್ಸನ್ನ ಬೇರೆ ಕಡೆ ತಿರುಗಿಸಿ. ಸೆಕ್ಸ್ ಬಗ್ಗೆ ಯೋಚಿಸೋದನ್ನ ಬಿಟ್ಟು ಬೇರೆ ಒಳ್ಳೇ ವಿಷ್ಯಗಳ ಕಡೆ ಗಮನ ಕೊಡಿ. ಉದಾಹರಣೆಗೆ, ಆಟ ಆಡಿ, ವ್ಯಾಯಾಮ ಮಾಡಿ ಅಥ್ವಾ ನಿಮ್ಗೆ ಇಷ್ಟವಾದ ಬೇರೆ ಯಾವುದಾದ್ರೂ ವಿಷ್ಯಗಳನ್ನ ಮಾಡಿ. ಇದ್ರಿಂದ ನಿಮ್ಮ ಗಮನ ಬೇರೆ ಕಡೆ ಹೋಗುತ್ತೆ. “ಬೈಬಲ್ ಓದೋದು ನನ್ಗೆ ಸಹಾಯ ಮಾಡುತ್ತೆ, ಯಾಕಂದ್ರೆ ದೇವರ ಬಗ್ಗೆ ಯೋಚ್ನೆ ಮಾಡೋದಾದ್ರೆ ಬೇರೆ ಕೆಟ್ಟ ಯೋಚ್ನೆಗಳು ನಮ್ಮ ಮನಸ್ಸಿಗೆ ಬರಲ್ಲ” ಅಂತ ವಲೇರಿ ಹೇಳ್ತಾಳೆ.
ಸೆಕ್ಸ್ ಬಗ್ಗೆ ಯೋಚ್ನೆಗಳು ನಿಮ್ಮ ಮನಸ್ಸಿಗೆ ಸಡನ್ ಆಗಿ ಬಂದುಬಿಡುತ್ತೆ ನಿಜ. ಆದ್ರೆ ಅದನ್ನ ತೆಗೆದುಹಾಕೋದು ಬಿಡೋದು ನಿಮ್ಮ ಕೈಯಲ್ಲಿದೆ.
“ಸೆಕ್ಸ್ ಬಗ್ಗೆ ಯೋಚ್ನೆಗಳು ನನ್ನ ಮನಸ್ಸಿಗೆ ಬಂದ ತಕ್ಷಣ ನನ್ನ ಮನಸ್ಸನ್ನ ಬೇರೆ ಕಡೆ ತಿರುಗಿಸ್ತೀನಿ. ಇಂಥಾ ಯೋಚ್ನೆಗಳು ಬರೋದಿಕ್ಕೆ ಕಾರಣ ಏನು ಅಂತ ತಿಳ್ಕೊತ್ತೀನಿ. ಅದು ನನ್ನ ಮೊಬೈಲಲ್ಲಿರೊ ಹಾಡಾಗಿರ್ಬಹುದು ಅಥ್ವಾ ಒಂದು ಫೋಟೋ ಆಗಿರ್ಬಹುದು. ಅದನ್ನ ಕೂಡಲೇ ಡಿಲೀಟ್ ಮಾಡ್ತೀನಿ.”— ಹೆಲೆನಾ.
ಬೈಬಲ್ ತತ್ವ: ‘ಯಾವುದು ನೀತಿನೋ, ಶುದ್ಧನೋ [ಅಥವಾ ”ನೈತಿಕವಾಗಿ ಶುದ್ಧನೋ,“ ಪಾದಟಿಪ್ಪಣಿ] ಅಂಥ ಎಲ್ಲ ವಿಷ್ಯಗಳಿಗೆ ಯಾವಾಗ್ಲೂ ಗಮನಕೊಡಿ.‘—ಫಿಲಿಪ್ಪಿ 4:8.
ಒಳ್ಳೇ ಫ್ರೆಂಡ್ಸ್ ಜೊತೆ ಸಹವಾಸ ಮಾಡಿ. ಯಾವಾಗ್ಲೂ ಸೆಕ್ಸ್ ಬಗ್ಗೆನೇ ಮಾತಾಡೋ ಫ್ರೆಂಡ್ಸ್ ನಿಮಗಿದ್ರೆ ನಿಮ್ಮ ಮನಸ್ಸು ತುಂಬ ಅದೇ ಯೋಚನೆಗಳು ತುಂಬಿಕೊಂಡಿರುತ್ತೆ.
“ನಾನು ಯುವತಿಯಾಗಿದ್ದಾಗ ಕೆಟ್ಟ ವಿಷ್ಯಗಳ ಬಗ್ಗೆನೇ ಯೋಚ್ನೆ ಮಾಡ್ತಿದ್ದೆ. ಯಾಕಂದ್ರೆ ನನ್ನ ಫ್ರೆಂಡ್ಸ್ ಕೂಡ ಅಂಥ ಯೋಚ್ನೆ ಮಾಡುವವ್ರೇ ಆಗಿದ್ರು. ಅನೈತಿಕ ವಿಷ್ಯಗಳು ಮಾಡೋದು ತಪ್ಪೇನಿಲ್ಲ ಅನ್ನುವವ್ರ ಜೊತೆ ಸಹವಾಸ ಮಾಡೋದಾದ್ರೆ ಅದು ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ ಇರುತ್ತೆ. ಇಂಥವ್ರ ಜೊತೆ ಇದ್ರೆ ಒಳ್ಳೆ ವಿಷ್ಯಗಳ ಬಗ್ಗೆ ಹೇಗೆ ಯೋಚ್ನೆ ಮಾಡಕ್ಕಾಗುತ್ತೆ?”—ಸಾರಾ.
ಬೈಬಲ್ ತತ್ವ: “ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ, ಮೂರ್ಖನ ಜೊತೆ ಸೇರುವವನು ಹಾಳಾಗಿ ಹೋಗ್ತಾನೆ.”—ಜ್ಞಾನೋಕ್ತಿ 13:20.
ಕೆಟ್ಟ ಮನರಂಜನೆಯಿಂದ ದೂರ ಇರಿ. ಇವತ್ತಿರೋ ಮನರಂಜನೆ ಬರೀ ಲೈಂಗಿಕ ಅನೈತಿಕತೆಯಿಂದ ತುಂಬಿದೆ ಅನ್ನೋದು ಎಲ್ರಿಗೂ ಗೊತ್ತು. “ಮ್ಯೂಸಿಕ್ ನನ್ಗೆ ತುಂಬ ಇಷ್ಟ, ಕೆಲವು ಸಲ ಅದು ನನ್ನ ಮೇಲೆ ತುಂಬ ಪ್ರಭಾವ ಬೀರುತ್ತೆ. ಎಷ್ಟರ ಮಟ್ಟಿಗೆ ಅಂದ್ರೆ ಅದು ನನ್ನ ಲೈಂಗಿಕ ಬಯಕೆಗಳನ್ನ ಬಡಿದೆಬ್ಬಿಸುತ್ತೆ” ಅಂತ ನಿಕೋಲೆ ಹೇಳ್ತಾನೆ.
“ನಾನು ಲೈಂಗಿಕ ವಿಷ್ಯಗಳಿಂದ ತುಂಬಿದ ಚಲನಚಿತ್ರಗಳನ್ನ ಮತ್ತು ಟೀವಿ ಪ್ರೋಗ್ರಾಮ್ಗಳನ್ನೇ ನೋಡೋಕೆ ಶುರು ಮಾಡ್ದೆ. ಆಗ ಹೆಚ್ಚಾಗಿ ಸೆಕ್ಸ್ ಬಗ್ಗೆನೇ ನಾನು ಯೋಚ್ನೆ ಮಾಡೋಕೆ ಶುರು ಮಾಡ್ದೆ. ಆದ್ರೆ ಯಾವಾಗ ಇಂಥಾ ಮನರಂಜನೆಯನ್ನ ನೋಡೋದನ್ನ ನಿಲ್ಲಿಸಿದ್ನೋ ಆಗ ನನ್ನ ಯೋಚನೆಗಳು ಕೂಡ ಬದಲಾದ್ವು. ತಪ್ಪಾದ ಮನರಂಜನೆಯಿಂದ ದೂರ ಇದ್ರೆ ಇಂಥಾ ಕೆಟ್ಟ ಬಯಕೆಗಳ ವಿರುದ್ಧ ಹೋರಾಡೋದು ತುಂಬ ಸುಲಭ.”—ಜೋಆನ್ .
ಬೈಬಲ್ ತತ್ವ: “ಲೈಂಗಿಕ ಅನೈತಿಕತೆ, ಎಲ್ಲ ತರದ ಅಶುದ್ಧತೆ, ದುರಾಸೆ ಇವುಗಳ ಬಗ್ಗೆ ನೀವು ಮಾತಾಡ್ಲೂಬಾರದು.”—ಎಫೆಸ 5:3.
ಪಾಠ: ಕೆಲವ್ರು ಇಂಥಾ ಲೈಂಗಿಕ ಬಯಕೆಗಳನ್ನ ಕಂಟ್ರೋಲ್ ಮಾಡಕ್ಕಾಗಲ್ಲ ಮತ್ತು ಕಂಟ್ರೋಲ್ ಮಾಡಬಾರದು ಅಂತ ಹೇಳ್ತಾರೆ. ಆದ್ರೆ ಬೈಬಲ್ ಹಾಗೆ ಹೇಳಲ್ಲ. ನಾವು ನಮ್ಮ ಯೋಚ್ನೆಗಳನ್ನ ಖಂಡಿತ ಕಂಟ್ರೋಲ್ ಮಾಡಬಹುದು. ನಾವು ಹೇಗೆ ನಡ್ಕೊಳ್ತೀವೋ ಅದನ್ನ ದೇವರು ತುಂಬ ಗಂಭೀರವಾಗಿ ನೋಡ್ತಾರೆ.
ಬೈಬಲ್ ತತ್ವ: “ನಿಮ್ಮ ಯೋಚ್ನೆ ಮತ್ತು ನಡತೆಯನ್ನ ಬದಲಾಯಿಸ್ಕೊಳ್ತಾ ಇರಬೇಕು.”—ಎಫೆಸ 4:23.
a ಮದುವೆಗೆ ಮುಂಚೆ ಸ್ವನಿಯಂತ್ರಣ ತೋರಿಸೋದು ತುಂಬ ಪ್ರಾಮುಖ್ಯ. ಯಾಕಂದ್ರೆ ಮದುವೆಯಾದ ಮೇಲೆ ಕೂಡ ಸ್ವನಿಯಂತ್ರಣ ತೋರಿಸಬೇಕಾಗುತ್ತೆ.