ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಗುರುತು ಅಥವಾ ವ್ಯಕ್ತಿತ್ವ ದೃಢವಾಗಿ ಇದ್ದರೆ ಬಿರುಗಾಳಿ ಎದುರಾದರೂ ನೀವು ಸ್ಥಿರವಾಗಿ ನಿಲ್ಲಬಲ್ಲಿರಿ

ಯುವಜನರಿಗಾಗಿ

9: ಗುರುತು

9: ಗುರುತು

ಅರ್ಥವೇನು?

ನಿಮ್ಮ ಹೆಸರು ಮತ್ತು ನೀವು ಹೇಗೆ ಕಾಣಿಸುತ್ತೀರಿ ಎನ್ನುವುದು ಮಾತ್ರ ನಿಮ್ಮ ಗುರುತಲ್ಲ. ನಿಮ್ಮ ಆದರ್ಶಗಳು, ನಂಬಿಕೆಗಳು ಮತ್ತು ಸ್ವಭಾವವೂ ಇದರಲ್ಲಿ ಸೇರಿದೆ. ನೀವು ಏನಾಗಿದ್ದೀರೋ ಅದೆಲ್ಲವೂ ಅಂದರೆ ನಿಮ್ಮ ಹೊರತೋರಿಕೆ ಮತ್ತು ಒಳಗಿನ ಗುಣಗಳೆಲ್ಲ ಸೇರಿ ನಿಮ್ಮ ಗುರುತಾಗಿದೆ.

ಯಾಕೆ ಮುಖ್ಯ?

ನಿಮ್ಮ ಗುರುತು ಅಥವಾ ವ್ಯಕ್ತಿತ್ವ ದೃಢವಾಗಿರುವಲ್ಲಿ ನಿಮಗಿರುವ ನಂಬಿಕೆಗಳನ್ನು ನೀವು ಸಮರ್ಥಿಸಲು ಶಕ್ತರಾಗಿರುತ್ತೀರಿ. ಸಮಪ್ರಾಯದವರು ನಿಮ್ಮನ್ನು ನಿಯಂತ್ರಿಸಲು ನೀವು ಬಿಡುವುದಿಲ್ಲ.

“ಅನೇಕರು ಅಂಗಡಿಯಲ್ಲಿರುವ ಬೊಂಬೆಗಳಂತೆ ಇರುತ್ತಾರೆ. ಯಾವ ಬಟ್ಟೆ ಹಾಕಬೇಕೆಂದು ಆ ಬೊಂಬೆಗಳು ಆರಿಸುವುದಿಲ್ಲ, ಬೇರೆಯವರು ಆರಿಸುತ್ತಾರೆ.”—ಏಡ್ರಿಯನ್‌.

“ಕಷ್ಟವಾದಾಗಲೂ ಸರಿಯಾದದ್ದನ್ನು ಸಮರ್ಥಿಸುವುದು ಹೇಗೆಂದು ಕಲಿತಿದ್ದೇನೆ. ನನ್ನ ನಿಜ ಸ್ನೇಹಿತರು ಯಾರೆಂದು ಅವರು ನಡೆದುಕೊಳ್ಳುವ ಮತ್ತು ಅವರೊಟ್ಟಿಗಿರುವಾಗ ನಾನು ನಡೆದುಕೊಳ್ಳುವ ರೀತಿಯಿಂದ ಹೇಳಬಲ್ಲೆ.”—ಕೊರ್‌ಟ್ನೀ.

ಬೈಬಲ್‌ ತತ್ವ: “ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟು . . . ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ.”—ರೋಮನ್ನರಿಗೆ 12:2.

ನೀವೇನು ಮಾಡಬಹುದು?

ನೀವು ಈಗ ಏನಾಗಿದ್ದೀರಿ ಮತ್ತು ಮುಂದೆ ಏನಾಗಬೇಕು ಎಂದಿದ್ದೀರಿ ಎಂದು ಯೋಚಿಸಿ. ಇದಕ್ಕಾಗಿ ನಿಮ್ಮ ಬಲ ಮತ್ತು ಬಲಹೀನತೆಗಳು ಹಾಗೂ ನಿಮ್ಮ ದೃಢ ಅಭಿಪ್ರಾಯಗಳನ್ನು ಪರಿಶೀಲಿಸಿ. ಇದನ್ನು ಮಾಡಲು ಆರಂಭಿಸುವ ಅತ್ಯುತ್ತಮ ವಿಧ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡುವುದೇ ಆಗಿದೆ:

ಬಲ: ನನಗೆ ಯಾವೆಲ್ಲ ಪ್ರತಿಭೆ, ಕೌಶಲಗಳಿವೆ? ನನ್ನಲ್ಲಿ ಯಾವೆಲ್ಲ ಉತ್ತಮ ಅಂಶಗಳಿವೆ? (ಉದಾ: ನಾನು ಸಮಯಪಾಲಕನಾ? ಶ್ರಮಜೀವಿಯಾ? ಉದಾರಿಯಾ? ನನಗೆ ಸ್ವನಿಯಂತ್ರಣ ಇದೆಯಾ?) ನಾನು ಯಾವ ಒಳ್ಳೇ ವಿಷಯಗಳನ್ನು ಮಾಡುತ್ತೇನೆ?

ಕಿವಿಮಾತು: ನೀವು ಮಾಡಿದ ಅಥವಾ ಹೇಳಿದ ಒಳ್ಳೇ ವಿಷಯಗಳು ನೆನಪಿಗೆ ಬರುತ್ತಿಲ್ಲವಾ? ಹಾಗಿದ್ದರೆ ನಿಮ್ಮಲ್ಲಿ ಯಾವ ಒಳ್ಳೇ ಅಂಶಗಳನ್ನು ನೋಡಿದ್ದಾರೆಂದು ನಿಮ್ಮ ಹೆತ್ತವರನ್ನು ಅಥವಾ ಭರವಸಾರ್ಹ ಸ್ನೇಹಿತರನ್ನು ಕೇಳಿ. ಅವರು ಹಾಗನ್ನಲು ಕಾರಣವೇನೆಂದೂ ಕೇಳಿ.

ಬೈಬಲ್‌ ತತ್ವ: “ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ, ಆಗ ಅವನಿಗೆ ತನ್ನ ವಿಷಯದಲ್ಲೇ ಹೆಚ್ಚಳಪಡಲು ಕಾರಣವಿರುವುದೇ ಹೊರತು ಬೇರೊಬ್ಬ ವ್ಯಕ್ತಿಯೊಂದಿಗೆ ಹೋಲಿಕೆಯಲ್ಲಿ ಅಲ್ಲ.”—ಗಲಾತ್ಯ 6:4.

ಬಲಹೀನತೆಗಳು: ನನ್ನ ವ್ಯಕ್ತಿತ್ವದ ಯಾವ ಅಂಶಗಳಲ್ಲಿ ಹೆಚ್ಚು ಪ್ರಗತಿ ಮಾಡಬೇಕಿದೆ? ನಾನು ಯಾವ ಸನ್ನಿವೇಶಗಳಲ್ಲಿ ತಪ್ಪು ಮಾಡುವ ಸಾಧ್ಯತೆಗಳು ಹೆಚ್ಚು? ಯಾವ ವಿಷಯಗಳಲ್ಲಿ ನಾನು ಹೆಚ್ಚು ಸ್ವನಿಯಂತ್ರಣ ತೋರಿಸಬೇಕು?

ಬೈಬಲ್‌ ತತ್ವ: ‘“ನಮ್ಮಲ್ಲಿ ಯಾವುದೇ ಪಾಪವಿಲ್ಲ” ಎಂದು ನಾವು ಹೇಳುವುದಾದರೆ ನಮ್ಮನ್ನೇ ಮೋಸಗೊಳಿಸಿಕೊಳ್ಳುತ್ತಿದ್ದೇವೆ.’ —1 ಯೋಹಾನ 1:8.

ದೃಢ ಅಭಿಪ್ರಾಯಗಳು: ನನ್ನ ನೈತಿಕ ಮಟ್ಟಗಳೇನು? ನಾನು ಯಾಕೆ ಆ ಮಟ್ಟಗಳ ಪ್ರಕಾರ ನಡೆಯುತ್ತೇನೆ? ದೇವರಿದ್ದಾನೆಂದು ನಂಬುತ್ತೇನಾ? ದೇವರಿದ್ದಾನೆ ಎಂದು ಯಾವ ಸಾಕ್ಷ್ಯದಿಂದ ನನಗೆ ಮನವರಿಕೆ ಆಗಿದೆ? ನಾನು ಯಾವುದನ್ನು ಅನ್ಯಾಯ ಎನ್ನುತ್ತೇನೆ ಮತ್ತು ಯಾಕೆ? ಭವಿಷ್ಯದಲ್ಲಿ ಏನಾಗುತ್ತದೆ ಎಂಬ ದೃಢನಂಬಿಕೆ ನನಗಿದೆ?

ಬೈಬಲ್‌ ತತ್ವ: “ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು ನಿನ್ನನ್ನು ಕಾಪಾಡುವದು.”—ಜ್ಞಾನೋಕ್ತಿ 2:11.