“ನಮಗಿದು ಹೊಸ ವಿಷಯ!”
ಸೂಜುನ್ ದಕ್ಷಿಣ ಕೊರಿಯಾದ ಪ್ರೌಢಶಾಲೆಯೊಂದರ ಶಿಕ್ಷಕಿ. ಇವರು ತಮ್ಮ ತರಗತಿಯಲ್ಲಿ jw.org ವೆಬ್‌ಸೈಟಿನಲ್ಲಿನ ವಿಡಿಯೋಗಳನ್ನು ತೋರಿಸಿದರು. ನಂತರ ಹೇಳಿದ್ದು: “ನಿಜವಾದ ಸ್ನೇಹಿತ ಯಾರು? ಎಂಬ ವಿಡಿಯೋ ನೋಡಿದ ಮೇಲೆ ವಿದ್ಯಾರ್ಥಿಗಳು ತೋರಿಸಿದ ಪ್ರತಿಕ್ರಿಯೆ ಅಮೋಘವಾಗಿತ್ತು. ವಿಡಿಯೋ ನೋಡಿದ ಮೇಲೆ ವಿದ್ಯಾರ್ಥಿಗಳು ‘ಸ್ನೇಹದ ಬಗ್ಗೆ ನಾವು ಈ ರೀತಿ ಯೋಚಿಸಿಯೇ ಇರಲಿಲ್ಲ. ನಮಗಿದು ಹೊಸ ವಿಷಯ!’ ಎಂದು ಹೇಳಿದರು. ಕೆಲವರಂತೂ ಸಲಹೆ ಬೇಕಾದಾಗೆಲ್ಲಾ ಈ ವೆಬ್‌ಸೈಟ್ ನೋಡ್ತೀವಿ ಅಂತ ಹೇಳಿದ್ರು. ಈ ವಿಡಿಯೋ ಬಗ್ಗೆ ನಾನು ನನ್ನ ಜೊತೆಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೂ ಹೇಳಿದ್ದೇನೆ. ಮಕ್ಕಳಿಗೆ ಕಲಿಸಲು ಇಂಥ ಉಪಯುಕ್ತ ಸಾಧನ ಇರುವುದಕ್ಕಾಗಿ ಅವರು ತುಂಬ ಖುಷಿಪಡುತ್ತಾರೆ.”
ದಕ್ಷಿಣ ಕೊರಿಯಾದಲ್ಲಿ ವಿದ್ಯಾರ್ಥಿಗಳಿಗೆ ಹಿಡಿಸಿದ ಇನ್ನೊಂದು ವಿಡಿಯೋ ಕೈಮಾಡದೆ ರ್ಯಾಗಿಂಗನ್ನು ಜಯಿಸಿ. ಮಕ್ಕಳ ಮೇಲಿನ ಹಿಂಸೆಯನ್ನು ತಡೆಗಟ್ಟುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕಿ ಇದನ್ನು ತನ್ನ ತರಗತಿಯ ವಿದ್ಯಾರ್ಥಿಗಳಿಗೆ ತೋರಿಸಿದಳು. “ಈ ವಿಡಿಯೋದಲ್ಲಿರುವ ಆಕರ್ಷಣೀಯ ಚಿತ್ರಗಳು ಮಕ್ಕಳ ಗಮನ ಸೆಳೆಯುತ್ತವೆ. ಈ ವಿಡಿಯೋ, ರ್ಯಾಗಿಂಗನ್ನು ಹೇಗೆ ನಿಭಾಯಿಸಬಹುದು ಎಂದು ಮಾತ್ರವೇ ಅಲ್ಲ ಅದನ್ನು ಹೇಗೆ ತಡೆಗಟ್ಟಬಹುದು ಎಂದೂ ತಿಳಿಸುತ್ತದೆ” ಎಂದು ಆಕೆ ಹೇಳಿದಳು. ತಮ್ಮ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳ ಪಾಠಗಳಲ್ಲಿ ಈ ವಿಡಿಯೋವನ್ನು ಉಪಯೋಗಿಸಲು ಈ ಸಂಸ್ಥೆಗೆ ಅನುಮತಿ ಸಿಕ್ಕಿತು. ಪೊಲೀಸರು ಸಹ jw.org ವೆಬ್‌ಸೈಟಿನಲ್ಲಿರುವ ವಿಡಿಯೋಗಳನ್ನು ಉಪಯೋಗಿಸುತ್ತಿದ್ದಾರೆ.
ನೀವಿನ್ನೂ ಈ ವೆಬ್‌ಸೈಟ್ ನೋಡಿಲ್ಲದಿದ್ದರೆ, ಯಾಕೆ ಒಮ್ಮೆ ನೋಡಬಾರದು? ಈ ವೆಬ್‌ಸೈಟನ್ನು ಸುಲಭವಾಗಿ ಉಪಯೋಗಿಸಬಹುದು ಮತ್ತು ಎಲ್ಲ ಆಡಿಯೋ, ವಿಡಿಯೋಗಳು, ಬೈಬಲ್ ಮತ್ತು ಬೈಬಲಾಧಾರಿತ ಸಾಹಿತ್ಯಗಳು ಉಚಿತ. ◼ (g16-E No. 5)