ಇದನ್ನ ಮಾಡಿ ನೋಡಿ!
ಮುಖ್ಯ ವಿಷ್ಯಗಳನ್ನ ನೆನಪಿಸ್ಕೊಳ್ಳಿ
‘ಈಗಷ್ಟೇ ಏನೋ ಓದಿದೆ ಅಲ್ವಾ? ಏನದು, ನೆನಪೇ ಬರ್ತಿಲ್ವೇ!’ ಅಂತ ನಿಮಗೆ ಯಾವಾಗಾದ್ರೂ ಅನಿಸಿದ್ಯಾ? ತುಂಬ ಜನ್ರಿಗೆ ಹಾಗೆ ಅನಿಸಿದೆ! ಹಾಗಾದ್ರೆ, ಓದಿದ್ದನ್ನ ನೆನಪಲ್ಲಿಡೋಕೆ ನಾವೇನು ಮಾಡಬೇಕು? ಮುಖ್ಯ ವಿಷ್ಯಗಳನ್ನ ಮತ್ತೊಮ್ಮೆ ಯೋಚಿಸಬೇಕು.
ಬರೀ ಓದ್ಕೊಂಡು ಹೋಗದೇ, ಮಧ್ಯ ಮಧ್ಯ ನಿಲ್ಲಿಸಿ, ಅದ್ರಲ್ಲಿ ಮುಖ್ಯ ವಿಷ್ಯ ಏನು ಅಂತ ಚೆನ್ನಾಗಿ ಯೋಚಿಸಿ. ಪೌಲ ತನ್ನ ಪತ್ರ ಓದೋರೂ ಇದೇ ತರ ಮಾಡಬೇಕು ಅಂತ ಬಯಸಿದ. ಅದಕ್ಕೇ ತನ್ನ ಪತ್ರದಲ್ಲಿ, “ನಾವು ಹೇಳ್ತಿರೋ ಮುಖ್ಯ ವಿಷ್ಯ ಇದು” ಅಂತ ಬರೆದ. (ಇಬ್ರಿ. 8:1) ಹೀಗೆ ಬರೆದಿದ್ರಿಂದ, ಅವನು ಏನು ಹೇಳ್ತಿದ್ದಾನೆ ಅಂತ ಅವರು ಅರ್ಥ ಮಾಡ್ಕೊಂಡ್ರು ಮತ್ತು ಒಂದು ವಿಷ್ಯಕ್ಕೂ ಇನ್ನೊಂದು ವಿಷ್ಯಕ್ಕೂ ಏನು ಸಂಬಂಧ ಅಂತ ತಿಳ್ಕೊಂಡ್ರು.
ಏನಾದ್ರೂ ಓದಿದ ಮೇಲೆ ಅದ್ರ ಬಗ್ಗೆ ಯೋಚಿಸೋಕೆ ಅಂತಾನೇ ನೀವು ಸ್ವಲ್ಪ ಟೈಮ್ ಮಾಡ್ಕೊಳ್ಳಿ. ಒಂದು ಹತ್ತು ನಿಮಿಷ ಮಾಡ್ಕೊಂಡ್ರೂ ಸಾಕು! ಹೀಗೆ ಯೋಚಿಸುವಾಗ ನಿಮಗೆ ಮುಖ್ಯ ವಿಷ್ಯ ನೆನಪಿಗೆ ಬರ್ತಿಲ್ಲ ಅಂದ್ರೆ, ಉಪ ಶೀರ್ಷಿಕೆ ಏನಿತ್ತು ಅಂತ ನೋಡಿ ಅಥವಾ ಪ್ಯಾರದ ಮೊದಲ ಸಾಲಲ್ಲಿ ಏನಿತ್ತು ಅಂತ ಮತ್ತೊಮ್ಮೆ ಓದಿ. ಓದುವಾಗ ನಿಮಗೇನಾದ್ರೂ ಹೊಸ ವಿಷ್ಯ ಸಿಕ್ಕಿದ್ರೆ ಅದನ್ನ ನಿಮ್ಮ ಸ್ವಂತ ಮಾತಲ್ಲಿ ಹೇಳಿ ನೋಡಿ. ಹೀಗೆ ನೀವು ಮುಖ್ಯ ವಿಷ್ಯಗಳನ್ನ ಮತ್ತೊಮ್ಮೆ ಯೋಚಿಸಿದ್ರೆ ಅದನ್ನ ನೆನಪಲ್ಲಿ ಇಟ್ಕೊಳ್ಳೋಕೆ ಅಷ್ಟೇ ಅಲ್ಲ, ಅದನ್ನ ನಿಮ್ಮ ಜೀವನದಲ್ಲಿ ಹೇಗೆ ಪಾಲಿಸಬಹುದು ಅಂತನೂ ಕಲಿತೀರ!