ಜೀವನ ಕಥೆ
ಯೆಹೋವ ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊಂಡ
ನನಗೆ 10 ವರ್ಷ ಇದ್ದಾಗ ಒಂದು ದಿನ ರಾತ್ರಿ ನಕ್ಷತ್ರ ಮಿಂಚೋದನ್ನ ನೋಡಿದೆ. ತಕ್ಷಣ ನಾನು ಮಂಡಿಯೂರಿ ಪ್ರಾರ್ಥನೆ ಮಾಡೋಕೆ ಶುರು ಮಾಡಿದೆ. ಇದೇ ನಾನು ಮಾಡಿದ ಮೊದಲನೇ ಪ್ರಾರ್ಥನೆ. ಇತ್ತೀಚಿಗಷ್ಟೇ ನಾನು ಯೆಹೋವನ ಬಗ್ಗೆ ಕಲ್ತಿದ್ದು. ಆದ್ರೂ ಆತನ ಹತ್ರ ನನ್ನ ಯೋಚನೆಗಳ ಬಗ್ಗೆ, ಭಾವನೆಗಳ ಬಗ್ಗೆ ಹೇಳ್ಕೊಂಡೆ. ‘ಪ್ರಾರ್ಥನೆ ಕೇಳೋ’ ಯೆಹೋವನ ಜೊತೆ ನನ್ನ ಸ್ನೇಹ ಶುರುವಾಗಿದ್ದು ಆಗ್ಲೇನೇ. (ಕೀರ್ತ. 65:2) ಇತ್ತೀಚಿಗಷ್ಟೇ ಆತನ ಬಗ್ಗೆ ಗೊತ್ತಾಗಿದ್ರೂ ನಾನು ಆತನಿಗೆ ಯಾಕೆ ಪ್ರಾರ್ಥನೆ ಮಾಡಿದೆ ಅಂತ ಹೇಳ್ತೀನಿ ಬನ್ನಿ.
ಜೀವನ ಬದಲಾಯಿಸಿದ ಭೇಟಿ
ನಾನು ಡಿಸೆಂಬರ್ 22, 1929ರಲ್ಲಿ ಬೆಲ್ಜಿಯಂ ದೇಶದ, ಬಾಸ್ಟೋಗ್ನೆ ಪಟ್ಟಣದ ಹತ್ತಿರ ಇರೋ ನೋವಿಲ್ ಅನ್ನೋ ಹಳ್ಳಿಯಲ್ಲಿ ಹುಟ್ಟಿದೆ. ಈ ಹಳ್ಳಿ ಆರ್ಡೆನ್ನೆಸ್ ಕಾಡಿನ ಹತ್ತಿರ ಇತ್ತು. ನಮ್ಮ ಹಳ್ಳಿ ಎಷ್ಟು ಚಿಕ್ಕದಾಗಿತ್ತು ಅಂದ್ರೆ ಅಲ್ಲಿ ಬರೀ 9 ಹೊಲಗಳು ಇತ್ತು. ನಾವು ಚಿಕ್ಕವರಿದ್ದಾಗ ಕಳೆದ ಸಮಯ ತುಂಬ ಚೆನ್ನಾಗಿತ್ತು. ನಾನು ನನ್ನ ತಮ್ಮ ರೇಮಂಡ್ ಹಾಲು ಕರೀತಿದ್ವಿ. ಅಪ್ಪಅಮ್ಮಗೆ ಹೊಲದಲ್ಲಿ ಸಹಾಯ ಮಾಡ್ತಿದ್ವಿ. ನಮ್ದೊಂದು ಚಿಕ್ಕ ಹಳ್ಳಿ ಆಗಿರೋದ್ರಿಂದ ಎಲ್ಲರೂ ಒಗ್ಗಟ್ಟಿಂದ ಇರ್ತಿದ್ವಿ, ಒಬ್ಬರಿಗೊಬ್ರು ಸಹಾಯ ಮಾಡ್ತಿದ್ವಿ.
ನಮ್ಮಪ್ಪ ಎಮಿಲ್ ಮತ್ತು ಅಮ್ಮ ಆಲಿಸ್ ಪಕ್ಕಾ ಕ್ಯಾಥೋಲಿಕರಾಗಿದ್ರು. ಪ್ರತಿ ಭಾನುವಾರ ತಪ್ಪದೇ ಚರ್ಚಿಗೆ ಹೋಗ್ತಿದ್ರು. ಆದರೆ 1939ರಲ್ಲಿ ಇಂಗ್ಲೆಂಡ್‌ನಿಂದ ಬಂದ ಪಯನೀಯರರು ನಮ್ಮೂರಿಗೆ ಬಂದ್ರು. ಅಪ್ಪಾಗೆ ಕನ್ಸೊಲೇಶನ್ ಪತ್ರಿಕೆಯನ್ನ ಕೊಟ್ರು. (ಈಗ ಎಚ್ಚರ! ಪತ್ರಿಕೆ ಅಂತ ಕರೀತಾರೆ.) ಈ ಪತ್ರಿಕೆಯಲ್ಲಿ ಇರೋದು ನಿಜ ಅಂತ ಅಪ್ಪ ತಕ್ಷಣ ಅರ್ಥ ಮಾಡ್ಕೊಂಡ್ರು. ಆಮೇಲೆ ಬೈಬಲ್ ಓದೋಕೆ ಶುರು ಮಾಡಿದ್ರು. ಅವರು ಚರ್ಚಿಗೆ ಹೋಗೋದನ್ನ ನಿಲ್ಲಿಸಿದಾಗ ಅಲ್ಲಿವರೆಗೂ ಚೆನ್ನಾಗಿದ್ದ ಅಕ್ಕಪಕ್ಕದವರು ದಿಢೀರಂತ ಶತ್ರುಗಳಾದ್ರು. ಕ್ಯಾಥೋಲಿಕ್ ಆಗಿರೋಕೆ ಅಪ್ಪಗೆ ತುಂಬ ಒತ್ತಡ ಹಾಕಿದ್ರು. ಇದರ ಮಧ್ಯೆ ತುಂಬ ವಾಗ್ವಾದನೂ ಆಯ್ತು.
ಅಪ್ಪನ ಮೇಲೆ ಅಕ್ಕಪಕ್ಕದ ಮನೆಯವರು ಒತ್ತಡ ಹಾಕ್ತಿರೋದನ್ನ ನೋಡಿ ನನಗೆ ತುಂಬ ಬೇಜಾರಾಯ್ತು. ಆಗಲೇ ನಾನು ಮೊದಲನೇ ಸಲ ಪ್ರಾರ್ಥನೆ ಮಾಡಿದ್ದು. ಹೋಗ್ತಾ ಹೋಗ್ತಾ ಅಕ್ಕಪಕ್ಕದ ಮನೆಯವರು ಒತ್ತಡ ಹಾಕೋದನ್ನ ಕಮ್ಮಿ ಮಾಡಿಬಿಟ್ರು. ಆಗ ನಂಗೆ ತುಂಬ ಖುಷಿ ಆಯ್ತು. ಯೆಹೋವ “ಪ್ರಾರ್ಥನೆ ಕೇಳುವ” ದೇವರು ಅಂತ ಅರ್ಥ ಮಾಡ್ಕೊಂಡೆ.
ಎರಡನೇ ಮಹಾಯುದ್ಧದ ಸಮಯದಲ್ಲಿ
ನಾಜಿ ಜರ್ಮನಿಯ ಸೈನ್ಯ ಮೇ 10, 1940ರಲ್ಲಿ ಬೆಲ್ಜಿಯಂ ಮೇಲೆ ಆಕ್ರಮಣ ಮಾಡ್ತು. ಇದ್ರಿಂದ ಅಲ್ಲಿದ್ದ ತುಂಬ ಜನ ದೇಶ ಬಿಟ್ಟು ಹೋಗಬೇಕಾಯ್ತು. ನಮ್ಮ ಕುಟುಂಬನೂ ದಕ್ಷಿಣ ಫ್ರಾನ್ಸಿಗೆ ಹೋಗಬೇಕಾಯ್ತು. ಹೀಗೆ ಹೋಗ್ತಾ ಇದ್ದ ಸಮಯದಲ್ಲಿ ಕೆಲವೊಂದು ಜಾಗದಲ್ಲಿ ಫ್ರೆಂಚ್ ಮತ್ತು ಜರ್ಮನ್ ಸೈನ್ಯ ಯುದ್ಧ ಮಾಡ್ತಾ ಇತ್ತು. ಅದ್ರಿಂದ ನಮಗೆ ತುಂಬ ಕಷ್ಟ ಆಗ್ತಿತ್ತು.
ಆಮೇಲೆ ನಾವು ಹೊಲಕ್ಕೆ ವಾಪಸ್ ಬಂದಾಗ ನಮ್ಮ ಎಲ್ಲ ವಸ್ತುಗಳನ್ನ ಲೂಟಿ ಮಾಡ್ಕೊಂಡು ಹೋಗಿದ್ರು. ನಮ್ಮ ನಾಯಿ ಬೋಬಿ ಮಾತ್ರ ಅಲ್ಲಿತ್ತು. ಇದನ್ನೆಲ್ಲಾ ನೋಡಿದಾಗ, ‘ಯುದ್ಧ ಯಾಕೆ ನಡೀತಾ
ಇದೆ? ನಾವ್ಯಾಕೆ ಇಷ್ಟು ಕಷ್ಟ ಪಡಬೇಕು?’ ಅಂತೆಲ್ಲ ಯೋಚನೆ ಮಾಡಿದೆ.ಆ ಸಮಯದಲ್ಲಿ ಹಿರಿಯನಾಗಿದ್ದ, ಪಯನೀಯರ್ ಆಗಿ ಸೇವೆ ಮಾಡ್ತಿದ್ದ ಸಹೋದರ ಎಮಿಲ್ ಶ್ರಾಣ್ಟ್ಸ್ a ನಮ್ಮನ್ನ ಬಂದು ಭೇಟಿ ಮಾಡಿದ್ರು. ನಮಗೆ ತುಂಬ ಪ್ರೋತ್ಸಾಹ ಮಾಡಿದ್ರು, ನಮಗೆ ಇಷ್ಟೊಂದು ಕಷ್ಟ ಯಾಕಿದೆ ಅಂತ ಬೈಬಲಿನಿಂದ ನಮಗೆ ವಿವರಿಸಿದ್ರು. ಜೀವನದ ಬಗ್ಗೆ ನಾನು ಕೇಳಿದ ಬೇರೆ ಪ್ರಶ್ನೆಗಳಿಗೂ ಅವರು ಬೈಬಲಿನಿಂದಾನೇ ಉತ್ತರ ಕೊಟ್ರು. ಹೀಗೆ ಯೆಹೋವನ ಜೊತೆ ನಂಗಿರೋ ಸ್ನೇಹ ಸಂಬಂಧ ಇನ್ನೂ ಜಾಸ್ತಿ ಆಯ್ತು ಮತ್ತು ಯೆಹೋವ ನಿಜವಾಗ್ಲೂ ಪ್ರೀತಿ ಇರೋ ದೇವರು ಅಂತ ಅರ್ಥ ಮಾಡ್ಕೊಂಡೆ.
ಯುದ್ಧ ಮುಗಿಯೋ ಮುಂಚೆನೇ ತುಂಬ ಸಹೋದರ ಸಹೋದರಿಯರನ್ನ ಭೇಟಿ ಮಾಡೋ ಅವಕಾಶ ನಮ್ಮ ಕುಟುಂಬಕ್ಕೆ ಸಿಕ್ತು. 1943 ಆಗಸ್ಟ್‌ನಲ್ಲಿ ಸಹೋದರ ಜೋಸ್ ನಿಕೋಲಸ್ ನಮ್ಮ ಹೊಲಕ್ಕೆ ಬಂದು ಒಂದು ಭಾಷಣ ಕೊಟ್ರು. ಆಮೇಲೆ “ಯಾರಿಗೆಲ್ಲ ದೀಕ್ಷಾಸ್ನಾನ ತೊಗೊಳೋಕೆ ಇಷ್ಟ ಇದೆ” ಅಂತ ಕೇಳಿದ್ರು. ಆಗ ಅಪ್ಪ ಮತ್ತು ನಾನು ಕೈ ಎತ್ತಿದ್ವಿ. ನಮ್ಮ ಹೊಲದ ಹತ್ತಿರ ಇರೋ ಒಂದು ಚಿಕ್ಕ ನದಿಯಲ್ಲಿ ನಮಗೆ ದೀಕ್ಷಾಸ್ನಾನ ಆಯ್ತು.
ಡಿಸೆಂಬರ್ 1944ರಲ್ಲಿ ಜರ್ಮನಿಯ ಸೈನ್ಯ ಪಶ್ಚಿಮ ಯೂರೋಪಿನ ಮೇಲೆ ಕೊನೆ ಸಾರಿ ಆಕ್ರಮಣ ಮಾಡ್ತು. (ಈ ಯುದ್ಧದ ಹೆಸ್ರು ಬ್ಯಾಟಲ್ ಆಫ್ ದಿ ಬಲ್ಜ್.) ನಾವಿದ್ದ ಜಾಗದ ಹತ್ರದಲ್ಲಿ ಯುದ್ಧ ನಡಿತಾ ಇದ್ದಿದ್ರಿಂದ ಸುಮಾರು ಒಂದು ತಿಂಗಳು ತನಕ ನಾವು ಬೇಸ್ಮೆಂಟ್‌ನಲ್ಲೇ ಬಚ್ಚಿಟ್ಕೊಬೇಕಾಯ್ತು. ಒಂದಿನ ನಾನು ಪ್ರಾಣಿಗಳಿಗೆ ಮೇವು ಹಾಕೋಕೆ ಹೊರಗೆ ಬಂದಾಗ ನಮ್ಮ ಹೊಲದ ಹತ್ತಿರ ಒಂದು ಬಾಂಬ್ ಬಿತ್ತು. ಆಗ ನಮ್ಮ ಕೊಟ್ಟಿಗೆಯ ಛಾವಣಿ ಹಾರಿ ಹೋಯ್ತು. ತಕ್ಷಣ ಕೊಟ್ಟಿಗೆಯಲ್ಲಿದ್ದ ಒಬ್ಬ ಅಮೆರಿಕದ ಸೈನಿಕ “ಕೆಳಗೆ ಮಲ್ಕೋ!” ಅಂತ ಕಿರಿಚಿದ. ನಾನು ಅವನ ಹತ್ರ ಓಡಿ ಹೋಗಿ ಅವನ ಪಕ್ಕ ಮಲಗಿಬಿಟ್ಟೆ, ಅವನು ತನ್ನ ಹೆಲ್ಮೆಟನ್ನ ತೆಗೆದು ನನ್ನನ್ನ ಕಾಪಾಡೋಕೆ ನನ್ನ ತಲೆ ಮೇಲಿಟ್ಟ.
ಯೆಹೋವನಿಗೆ ಹತ್ರ ಆದಾಗ ಸಿಕ್ಕ ಒಳ್ಳೆ ಅನುಭವಗಳು
ಯುದ್ಧ ಆದ್ಮೇಲೆ ಉತ್ತರದ ಕಡೆ ಇರೋ ಲೀಜ್ ಅನ್ನೋ ಸಭೆಗೆ ಹೋಗೋಕೆ ನಾವು ತೀರ್ಮಾನ ಮಾಡಿದ್ವಿ. ಇದು ಸುಮಾರು 90 ಕಿ.ಮೀ. ದೂರದಲ್ಲಿತ್ತು. ಸ್ವಲ್ಪ ಸಮಯ ಆದ್ಮೇಲೆ ಬಾಸ್ಟೋಗ್ನೆಯಲ್ಲಿ ಒಂದು ಚಿಕ್ಕ ಗ್ರೂಪ್ ಶುರು ಮಾಡೋಕಾಯ್ತು. ನಾನು ತೆರಿಗೆ ಆಡಳಿತ ಕಛೇರಿಯಲ್ಲಿ ಕೆಲಸ ಮಾಡೋಕೆ ಶುರು ಮಾಡಿದೆ ಮತ್ತು ನನಗೆ ಲಾ (ಕಾನೂನು) ಓದೋಕೆ ಅವಕಾಶ ಸಿಕ್ತು. ಆಮೇಲೆ ನಾನು ಸರ್ಕಾರಿ ಆಫೀಸಿನಲ್ಲಿ ಕೆಲಸ ಮಾಡೋಕೆ ಶುರು ಮಾಡಿದೆ. 1951ರಲ್ಲಿ ಬಾಸ್ಟೋಗ್ನೆಯಲ್ಲಿ ಒಂದು ಚಿಕ್ಕ ಸರ್ಕಿಟ್ ಸಮ್ಮೇಳನವನ್ನ ಮಾಡಿದ್ವಿ. ಸುಮಾರು ನೂರು ಜನ ಬಂದಿದ್ರು. ಅದ್ರಲ್ಲಿ ತುಂಬ ಹುರುಪಿನಿಂದ ಪಯನೀಯರ್ ಸೇವೆ ಮಾಡ್ತಿರೋ ಎಲೀ ರಾಯ್ಟರ್ ಅನ್ನೋ ಸಹೋದರಿನೂ ಬಂದಿದ್ರು. ಇವರು 50 ಕಿ.ಮೀ. ಸೈಕಲ್ ತುಳ್ಕೊಂಡು ಸಮ್ಮೇಳನಕ್ಕೆ ಬಂದಿದ್ರು. ನಾವು ಒಬ್ಬರನ್ನೊಬ್ರು ಇಷ್ಟಪಟ್ವಿ. ಆಮೇಲೆ ಎಂಗೇಜ್ಮೆಂಟ್ ಆಯ್ತು. ಅಮೆರಿಕಾದಲ್ಲಿ ನಡಿಯೋ ಗಿಲ್ಯಡ್ ಶಾಲೆಗೆ
ಹೋಗೋಕೆ ಎಲೀಗೆ ಅವಕಾಶ ಸಿಕ್ಕಿತ್ತು. ಆದರೆ ಯಾಕೆ ಹೋಗಕಾಗಲ್ಲ ಅಂತ ಮುಖ್ಯ ಕಾರ್ಯಾಲಯಕ್ಕೆ ಒಂದು ಪತ್ರ ಬರೆದ್ಳು. ಆಗ ಮುಂದಾಳತ್ವ ವಹಿಸ್ತಿದ್ದ ಸಹೋದರ ನಾರ್ ಅವರಿಗೆ ಮುಂದೊಂದು ದಿನ ನಿಮ್ಮ ಗಂಡನ ಜೊತೆ ಈ ಶಾಲೆಗೆ ಹಾಜರಾಗಬಹುದು ಅಂತ ಪ್ರೀತಿಯಿಂದ ಹೇಳಿದ್ರು. ಫೆಬ್ರವರಿ 1953ರಲ್ಲಿ ಮದುವೆ ಆದ್ವಿ.ಅದೇ ವರ್ಷ ನಾನು ಮತ್ತು ಎಲೀ ಹೊಸ ಲೋಕ ಸಮಾಜ ಅನ್ನೋ ಸಮ್ಮೇಳನಕ್ಕೆ ಹೋದ್ವಿ. ಅದು ನ್ಯೂಯಾರ್ಕ್‌ನ ಯಾಂಕೀ ಸ್ಟೇಡಿಯಂನಲ್ಲಿ ನಡೀತು. ಅಲ್ಲಿ ನಮಗೆ ಒಬ್ಬ ಸಹೋದರ ಭೇಟಿಯಾದ್ರು. ಅವರು ನಮಗೆ ಅಮೆರಿಕಾಗೆ ಬಂದು ಉಳ್ಕೊಂಡ್ರೆ ಒಂದು ಒಳ್ಳೆ ಕೆಲಸ ಕೊಡ್ತೀನಿ ಅಂತ ಹೇಳಿದ್ರು. ನಾನು ಮತ್ತು ಎಲೀ ಇದರ ಬಗ್ಗೆ ತುಂಬ ಪ್ರಾರ್ಥನೆ ಮಾಡಿದ್ವಿ. ನಾವು ಆ ಕೆಲಸ ತಗೊಳ್ಳೋದು ಬೇಡ, ಬೆಲ್ಜಿಯಂನಲ್ಲಿರೋ ಬಾಸ್ಟೋಗ್ನೆಗೆ ವಾಪಸ್ ಹೋಗೋಣ. ಅಲ್ಲಿ ಹತ್ತು ಪ್ರಚಾರಕರು ಇರೋ ಚಿಕ್ಕ ಗುಂಪಿಗೆ ಸಹಾಯ ಮಾಡೋಣ ಅಂತ ತೀರ್ಮಾನ ಮಾಡಿದ್ವಿ. ಮುಂದಿನ ವರ್ಷ ನಮಗೆ ಒಂದು ಮಗು ಆಯ್ತು. ನಾವು ಆ ಮಗುಗೆ ಸರ್ಗೆ ಅಂತ ಹೆಸರಿಟ್ವಿ. ಆದರೆ ದುಃಖದ ವಿಷಯ ಏನಂದ್ರೆ ಏಳು ತಿಂಗಳು ಆದ್ಮೇಲೆ ಆ ಮಗುಗೆ ಕಾಯಿಲೆ ಬಂದು ತೀರಿ ಹೋಯ್ತು. ಆಗ ನಮಗೆ ತುಂಬ ನೋವು ಆಯ್ತು. ಮನಸ್ಸಲ್ಲಿ ಇರೋದನ್ನೆಲ್ಲ ಯೆಹೋವ ದೇವರ ಹತ್ರ ಹೇಳ್ಕೊಂಡ್ವಿ. ಯೆಹೋವ ಆ ಮಗುಗೆ ಹೊಸ ಲೋಕದಲ್ಲಿ ಖಂಡಿತ ಮತ್ತೆ ಜೀವ ಕೊಡ್ತಾನೆ ಅನ್ನೋ ವಿಷಯದ ಬಗ್ಗೆ ಯೋಚನೆ ಮಾಡಿದ್ವಿ. ಇದ್ರಿಂದ ನಮಗೆ ತುಂಬ ಬಲ ಸಿಕ್ತು. ಆ ದುಃಖದಿಂದ ಹೊರಗೆ ಬರೋಕಾಯ್ತು.
ಪೂರ್ಣ ಸಮಯದ ಸೇವೆ
1961 ಅಕ್ಟೋಬರ್‌ನಲ್ಲಿ ನನಗೆ ಒಂದು ಪಾರ್ಟ್ ಟೈಮ್ ಕೆಲಸ ಸಿಕ್ತು. ಹಾಗಾಗಿ ಪಯನೀಯರ್ ಸೇವೆ ಮಾಡೋ ಅವಕಾಶ ನನಗಿತ್ತು. ಅದೇ ದಿನ ಬೆಲ್ಜಿಯಂ ಬ್ರಾಂಚ್ ಸೇವಕನಿಂದ ನನಗೆ ಕಾಲ್ ಬಂತು. ಅವರು ನನಗೆ, ನೀವು ಸರ್ಕಿಟ್ ಸೇವಕರಾಗಿ ಕೆಲಸ ಮಾಡೋಕೆ ಆಗುತ್ತಾ ಅಂತ ಕೇಳಿದ್ರು. (ಈಗ ಸರ್ಕಿಟ್ ಸೇವಕರನ್ನ ಸರ್ಕಿಟ್ ಮೇಲ್ವಿಚಾರಕರು ಅಂತ ಕರಿತಾರೆ.) ಅದಕ್ಕೆ ನಾನು, “ಅದನ್ನ ಮಾಡೋದಕ್ಕಿಂತ ಮುಂಚೆ ಸ್ವಲ್ಪ ಸಮಯ ಪಯನೀಯರಾಗಿ ಸೇವೆ ಮಾಡಬಹುದಾ?” ಅಂತ ಕೇಳಿದೆ. ಅವರು ಅದಕ್ಕೆ ಒಪ್ಕೊಂಡ್ರು. ನಾವು ಮುಂದಿನ ಎಂಟು ತಿಂಗಳು ಪಯನೀಯರ್ ಸೇವೆ ಮಾಡಿದ್ವಿ. ಆಮೇಲೆ 1962 ಸೆಪ್ಟಂಬರ್‌ನಲ್ಲಿ ಸರ್ಕಿಟ್ ಕೆಲಸನ ಶುರು ಮಾಡಿದ್ವಿ.
ನಾವು ಎರಡು ವರ್ಷ ಸರ್ಕಿಟ್ ಸೇವೆ ಮಾಡಿದ ಮೇಲೆ ನಮ್ಮನ್ನ ಬೆತೆಲಿಗೆ ಕರೆದ್ರು. ಅದು ಬೆಲ್ಜಿಯಂನ ರಾಜಧಾನಿಯಾಗಿದ್ದ ಬ್ರುಸೆಲ್‌ನಲ್ಲಿತ್ತು. ಅಲ್ಲಿ ನಾವು 1964 ಅಕ್ಟೋಬರ್‌ನಿಂದ ಸೇವೆ ಮಾಡೋಕೆ ಶುರು ಮಾಡಿದ್ವಿ. ಈ ಬೆತೆಲ್ ಸೇವೆ ನಮಗೆ ತುಂಬ ಆಶೀರ್ವಾದಗಳನ್ನ ತಂತು. ಸ್ವಲ್ಪ ಸಮಯ ಆದ್ಮೇಲೆ 1965ರಲ್ಲಿ ಸಹೋದರ ನಾರ್ ಬೆತೆಲಿಗೆ ಭೇಟಿ ಕೊಟ್ರು. ಅವರು ನನ್ನನ್ನ ಬ್ರಾಂಚ್ ಸೇವಕನಾಗಿ ನೇಮಿಸಿದ್ರು. ಆಗ ನನಗೆ ತುಂಬ ಆಶ್ಚರ್ಯ ಆಯ್ತು. ಆಮೇಲೆ ಎಲೀ ಮತ್ತು ನಾನು 41ನೇ ಗಿಲ್ಯಡ್ ಶಾಲೆಗೆ ಹಾಜರಾದ್ವಿ. ಸಹೋದರ ನಾರ್ 13 ವರ್ಷಗಳ ಹಿಂದೆ ಹೇಳಿದ ಮಾತು ಈಗ ನಿಜ ಆಯ್ತು. ಗಿಲ್ಯಡ್ ಶಾಲೆ ಆದ್ಮೇಲೆ ನಾವು ಬೆಲ್ಜಿಯಂ ಬೆತೆಲಿಗೆ ವಾಪಸ್ ಬಂದ್ವಿ.
ನಮ್ಮ ಕಾನೂನಿನ ಹಕ್ಕನ್ನ ಕಾಪಾಡೋದು
ನಾನು ಲಾ ಓದಿದ್ರಿಂದ ಒಂದು ಒಳ್ಳೆ ಅವಕಾಶ ಸಿಕ್ತು. ಅದೇನಂದ್ರೆ ಯೂರೋಪಿನಲ್ಲಿ ಮತ್ತು ಬೇರೆ ಕಡೆ ಯೆಹೋವನ ಜನರಿಗಿರೋ ಆರಾಧಿಸೋ ಹಕ್ಕನ್ನ ಕಾಪಾಡೋಕಾಯ್ತು. (ಫಿಲಿ. 1:7) ಹೀಗೆ 55ಕ್ಕಿಂತ ಹೆಚ್ಚು ದೇಶಗಳ ಅಧಿಕಾರಿಗಳನ್ನ ಭೇಟಿ ಮಾಡೋಕಾಯ್ತು. ಕೆಲವು ದೇಶಗಳಲ್ಲಿ ನಮ್ಮ ಕೆಲಸದ ಮೇಲೆ ನಿರ್ಬಂಧ ಹಾಕಲಾಗಿತ್ತು, ಇನ್ನೂ ಕೆಲವೊಂದು ದೇಶಗಳಲ್ಲಿ ನಿಷೇಧ ಇತ್ತು. ನಾನು ಆ ಅಧಿಕಾರಿಗಳನ್ನ ಭೇಟಿ ಮಾಡಿದಾಗ, ಕಾನೂನು ಗೊತ್ತಿರೋನು ಅಂತ ಹೇಳ್ತಿರಲಿಲ್ಲ ಬದಲಿಗೆ ನಾನೊಬ್ಬ “ದೇವರ ಸೇವಕ” ಅಂತ ಹೇಳ್ತಿದ್ದೆ. ನಾನು ಯಾವಾಗ್ಲೂ ಸಹಾಯಕ್ಕಾಗಿ ಯೆಹೋವನ ಹತ್ರ ಪ್ರಾರ್ಥನೆ ಮಾಡ್ತಿದ್ದೆ. ಯಾಕಂದ್ರೆ “ರಾಜನ [ಅಥವಾ ನ್ಯಾಯಾಧೀಶನ] ಹೃದಯ ಯೆಹೋವನ ಕೈಯಲ್ಲಿರೋ ನದಿ, ಅದನ್ನ ಇಷ್ಟಬಂದ ಕಡೆಗೆ ತಿರುಗಿಸ್ತಾನೆ” ಅಂತ ನನಗೆ ಚೆನ್ನಾಗಿ ಗೊತ್ತಿತ್ತು.—ಜ್ಞಾನೋ. 21:1.
ಒಂದು ಸಲ ಯೂರೋಪಿಯನ್ ಪಾರ್ಲಿಮೆಂಟ್ ಸದಸ್ಯನ ಜೊತೆ ಮಾತಾಡಿದ್ದು ನನಗೆ ಈಗಲೂ ನೆನಪಿದೆ. ಅವರನ್ನ ಭೇಟಿ ಮಾಡೋಕೆ ತುಂಬ ಸಲ ಕೇಳ್ಕೊಂಡಿದ್ದೆ. ಕೊನೆಗೂ ಅವರು ಅದಕ್ಕೆ ಒಪ್ಕೊಂಡ್ರು. ರೋಮನ್ನರಿಗೆ 13:4 ತೋರಿಸಿದೆ. ಈ ತರ ಮಾಡಿದ್ರಿಂದ ಏನಾಯ್ತು ಗೊತ್ತಾ? ಅವರ ಜೊತೆ ಮಾತಾಡೋಕೆ ನನಗೆ ಅರ್ಧ ಗಂಟೆ ಟೈಮ್ ಕೊಟ್ರು. ತುಂಬ ಚೆನ್ನಾಗಿ ಅವರ ಹತ್ರ ಮಾತಾಡೋಕೆ ಆಯ್ತು. ಅಷ್ಟೇ ಅಲ್ಲ ನಾವು ಮಾಡ್ತಿರೋ ಕೆಲಸನ ಅವರು ಗೌರವಿಸ್ತಾರೆ ಅಂತನೂ ಹೇಳಿದ್ರು.
ಆದರೆ ಅವರು ನನಗೆ “ಐದು ನಿಮಿಷ ಅಷ್ಟೇ, ಅದರ ಮೇಲೆ ಒಂದು ನಿಮಿಷನೂ ಕೊಡಲ್ಲ” ಅಂತ ಹೇಳಿದ್ರು. ಆಗ ನಾನು ತಲೆ ಬಗ್ಗಿಸಿ ಪ್ರಾರ್ಥನೆ ಮಾಡೋಕೆ ಶುರು ಮಾಡಿದೆ. ನಾನೇನು ಮಾಡ್ತಾ ಇದ್ದೀನಿ ಅಂತ ಅವರು ನನ್ನ ಹತ್ರ ಕೇಳಿದ್ರು. ಅದಕ್ಕೆ ನಾನು, “ನೀವು ದೇವರ ಸೇವಕರಾಗಿರೋದ್ರಿಂದ ನಾನು ಆತನಿಗೆ ಥ್ಯಾಂಕ್ಸ್ ಹೇಳ್ತಾ ಇದ್ದೆ” ಅಂತ ಹೇಳ್ದೆ. ಆಗ ಅವರು ನನಗೆ “ನೀನೇನು ಹೇಳ್ತಿದ್ದೀಯಾ ಅಂತ ನನಗೆ ಅರ್ಥ ಆಗ್ತಿಲ್ಲ” ಅಂತ ಹೇಳಿದ್ರು. ಅವರು ಪ್ರೊಟೆಸ್ಟೆಂಟ್ ಆಗಿರೋದ್ರಿಂದ ಅವರಿಗೆ ಬೈಬಲ್ ಮೇಲೆ ತುಂಬ ಗೌರವ ಇತ್ತು. ಅದಕ್ಕೆ ನಾನು ಅವರಿಗೆಸುಮಾರು ವರ್ಷಗಳಿಂದ ಯೂರೋಪಿನಲ್ಲಿ ಯೆಹೋವನ ಜನರು ಕಾನೂನು ಹಕ್ಕಿಗೋಸ್ಕರ ಹೋರಾಡಿದ್ದಾರೆ. ಕ್ರೈಸ್ತ ತಾಟಸ್ಥ್ಯದ ಬಗ್ಗೆ, ಮಕ್ಕಳ ಪಾಲನೆಯ ಬಗ್ಗೆ, ತೆರಿಗೆ ಕಟ್ಟೋ ವಿಷ್ಯದಲ್ಲಿ ಈ ತರ ಬೇರೆಬೇರೆ ವಿಷಯಗಳ ಬಗ್ಗೆ ಹೋರಾಟ ನಡೆದಿದೆ. ಈ ಹೋರಾಟದಲ್ಲಿ ಯೆಹೋವ ದೇವರು ನಮಗೆ ಹೇಗೆ ಸಹಾಯ ಮಾಡಿದ್ರು ಮತ್ತು ಆತನ ಸಹಾಯದಿಂದ ಹೇಗೆ ಈ ಕೇಸುಗಳನ್ನ ಗೆಲ್ಲೋಕಾಯ್ತು ಅಂತ ಕಣ್ಣಾರೆ ನೋಡೋಕೆ ಒಂದು ಅವಕಾಶ ಸಿಕ್ತು. ಯೆಹೋವನ ಸಾಕ್ಷಿಗಳು ಮಾನವ ಹಕ್ಕುಗಳ ಯುರೋಪಿಯನ್ ನ್ಯಾಯಾಲಯದಲ್ಲಿ 140ಕ್ಕಿಂತ ಜಾಸ್ತಿ ಕೇಸುಗಳನ್ನ ಗೆದ್ದಿದ್ದಾರೆ.
ಕ್ಯೂಬಾದಲ್ಲಿ ಸೇವೆ ಜಾಸ್ತಿ ಆಯ್ತು
ಆಮೇಲೆ ನನಗೆ ಮುಖ್ಯ ಕಾರ್ಯಾಲಯದಲ್ಲಿದ್ದ ಸಹೋದರ ಫಿಲಿಪ್ ಬ್ರಮ್ಲಿ ಮತ್ತು ಇಟಲಿಯಲ್ಲಿದ್ದ ಸಹೋದರ ವಾಲ್ಟರ್ ಫಾರ್ನೆಟ್ ಜೊತೆ ಕೆಲಸ ಮಾಡೋಕೆ ಒಂದು ಅವಕಾಶ ಸಿಕ್ತು. ಕ್ಯೂಬಾದಲ್ಲಿ ನಮ್ಮ ಕೆಲಸಕ್ಕೆ ನಿರ್ಬಂಧ ಇತ್ತು. ಹಾಗಾಗಿ ಯಾವುದೇ ನಿರ್ಬಂಧ ಇಲ್ಲದೆ ಆರಾಧನೆ ಮಾಡೋಕೆ ಕ್ಯೂಬಾದಲ್ಲಿದ್ದ ಸಹೋದರ ಸಹೋದರರಿಗೆ ನಾವು ಸಹಾಯ ಮಾಡಿದ್ವಿ. ಬೆಲ್ಜಿಯಂನಲ್ಲಿರೋ ಕ್ಯೂಬಾದ ಎಂಬಸ್ಸಿಗೆ ನಾನೊಂದು ಪತ್ರ ಬರೆದೆ. ಆಮೇಲೆ ಅಲ್ಲಿರೋ ಒಬ್ಬ ಅಧಿಕಾರಿಯನ್ನ ನಾವು ಭೇಟಿ ಮಾಡಿದ್ವಿ. ಅವರಿಗೆ ನಮ್ಮ ಬಗ್ಗೆ ತಪ್ಪಭಿಪ್ರಾಯ ಇದ್ದಿದ್ರಿಂದ ನಮ್ಮ ಕೆಲಸಕ್ಕೆ ನಿರ್ಬಂಧ ಹಾಕಿದ್ರು. ಆದರೆ ಮೊದಲನೇ ಭೇಟಿಯಲ್ಲೇ ಅವರಿಗಿದ್ದ ಎಲ್ಲ ತಪ್ಪು ಅಭಿಪ್ರಾಯನ ಸರಿ ಮಾಡೋಕೆ ನಮಗೆ ಆಗಲಿಲ್ಲ.
ನಾವು ಯೆಹೋವನ ಸಹಾಯಕ್ಕಾಗಿ ಪ್ರಾರ್ಥನೆ ಮಾಡಿದ್ವಿ. ಆಮೇಲೆ ಕ್ಯೂಬಾಗೆ 5,000 ಬೈಬಲನ್ನ ಕಳಿಸೋಕೆ ಅನುಮತಿ ತಗೊಂಡ್ವಿ. ಅಲ್ಲಿರೋ ಸಹೋದರ ಸಹೋದರಿಯರಿಗೆ ಆ ಬೈಬಲನ್ನ ಹಂಚಿದ್ವಿ. ಇದೆಲ್ಲ ಆಗ್ತಿರೋದನ್ನ ನೋಡುವಾಗ ಯೆಹೋವ ನಾವು ಮಾಡ್ತಿರೋ ಪ್ರಯತ್ನನ ಆಶೀರ್ವದಿಸ್ತಿದ್ದಾನೆ ಅಂತ ಗೊತ್ತಾಯ್ತು. ಆಮೇಲೆ 27,500 ಬೈಬಲನ್ನ ಕಳಿಸೋಕೆ ಅನುಮತಿ ತಗೊಂಡ್ವಿ. ನಮಗೆ ಅದಕ್ಕೂ ಅನುಮತಿ ಸಿಕ್ತು. ಕ್ಯೂಬಾದಲ್ಲಿದ್ದ ಸಹೋದರ ಸಹೋದರಿಯರ ಹತ್ರ ತಮ್ಮದೇ ಬೈಬಲ್ ಇರೋದನ್ನ ನೋಡಿದಾಗ ನನಗೆ ತುಂಬ ಖುಷಿ ಆಯ್ತು.
ಕ್ಯೂಬಾದಲ್ಲಿದ್ದ ನಿರ್ಬಂಧನ ತೆಗೆದುಹಾಕೋಕೆ ನಾನು ತುಂಬ ಸಲ ಕ್ಯೂಬಾಗೆ ಹೋಗಿದ್ದೆ. ಈ ತರ ತುಂಬ ಸಲ ಹೋಗಿದ್ರಿಂದ ಅಲ್ಲಿರೋ ಅಧಿಕಾರಿಗಳ ಜೊತೆ ಒಳ್ಳೆ ಸ್ನೇಹ ಸಂಬಂಧ ಬೆಳೆಸ್ಕೊಳ್ಳೋಕೆ ಆಯ್ತು.
ರುವಾಂಡದಲ್ಲಿರೋ ಸಹೋದರರಿಗೆ ಸಹಾಯ
1994ರಲ್ಲಿ ರುವಾಂಡ ದೇಶದಲ್ಲಿ ಜಾತಿಯ ಹೆಸ್ರಲ್ಲಿ ತುಂಬ ದೊಡ್ಡ ಗಲಾಟೆ ಆಯ್ತು. ಅದ್ರಲ್ಲಿ ಸುಮಾರು ಹತ್ತು ಲಕ್ಷದಷ್ಟು ಟುಟ್ಸಿ ಜನಾಂಗದವರನ್ನ ಕೊಂದು ಹಾಕಿದ್ರು. ದುಃಖದ ವಿಷಯ ಏನಂದ್ರೆ ಕೆಲವು ಸಹೋದರ
ಸಹೋದರಿಯರು ಅದ್ರಲ್ಲಿ ತೀರಿ ಹೋಗಿದ್ರು. ತಕ್ಷಣ ರುವಾಂಡದಲ್ಲಿರೋ ಸಹೋದರರಿಗೆ ಬೇಕಾದ ಸಹಾಯ ಮಾಡೋಕೆ, ಅಗತ್ಯ ವಸ್ತುಗಳನ್ನ ಕೊಡೋಕೆ ಕೆಲವು ಸಹೋದರರನ್ನ ನೇಮಿಸಲಾಯ್ತು.ಆಮೇಲೆ ನಾವು ರುವಾಂಡದ ರಾಜಧಾನಿಯಾಗಿದ್ದ ಕಿಗಾಲಿಗೆ ಬಂದ್ವಿ. ಅಲ್ಲಿರೋ ಭಾಷಾಂತರ ಕಛೇರಿಯ ಮತ್ತು ಪ್ರಕಾಶನಗಳನ್ನ ಇಟ್ಟಿರೋ ಗೋಡೌನಿನಲ್ಲಿ ತುಂಬ ಬುಲೆಟ್‌ಗಳಿಂದ ತೂತಾಗಿರೋ ಗೋಡೆಗಳನ್ನ ನೋಡಿದ್ವಿ. ತುಂಬ ಸಹೋದರ ಸಹೋದರಿಯರನ್ನ ಮಚ್ಚಿಂದ ಸಾಯಿಸಿದ್ದಾರೆ ಅನ್ನೋ ಸುದ್ದಿನೂ ನಮ್ಮ ಕಿವಿಗೆ ಬಿತ್ತು. ಇಂಥ ಸಮಯದಲ್ಲೂ ಸಹೋದರ ಸಹೋದರಿಯರು ಒಬ್ಬರಿಗೊಬ್ರು ಪ್ರೀತಿ ತೋರಿಸಿದ ಮತ್ತು ಸಹಾಯ ಮಾಡಿದ ವಿಷಯ ನಮಗೆ ಗೊತ್ತಾಯ್ತು. ಟುಟ್ಸಿ ಜನಾಂಗದ ಒಬ್ಬ ಸಹೋದರನನ್ನ ಹುಟು ಜನಾಂಗದ ಸಾಕ್ಷಿ ಕುಟುಂಬ ಒಂದು ಗುಂಡಿ ತೋಡಿ 28 ದಿನ ಅವರನ್ನ ಬಚ್ಚಿಟ್ಟು ಕಾಪಾಡಿದ್ರು. ಕಿಗಾಲಿಯಲ್ಲಿ ನಾವೊಂದು ಕೂಟನ ಏರ್ಪಾಡು ಮಾಡಿದ್ವಿ. ಅಲ್ಲಿ 900ಕ್ಕಿಂತ ಹೆಚ್ಚು ಸಹೋದರ ಸಹೋದರಿಯರಿಗೆ ಬೈಬಲಿಂದ ಸಾಂತ್ವನ ಕೊಟ್ವಿ.
ಆಮೇಲೆ ನಾವು ಗಡಿ ದಾಟಿ ಜಾಯಿರ್ ದೇಶಕ್ಕೆ ಹೋದ್ವಿ. (ಅದು ಈಗ ಕಾಂಗೋ ಗಣರಾಜ್ಯ.) ಗೋಮಾ ಪಟ್ಟಣ ಹತ್ತಿರ ಇರೋ ನಿರಾಶ್ರಿತರ ಕ್ಯಾಂಪುಗಳಿಗೆ ಹೋಗಿದ್ದ ನಮ್ಮ ಸಹೋದರರನ್ನ ಹುಡುಕೋಕೆ ಹೋದ್ವಿ. ಆದರೆ ಅವರು ನಮಗೆ ಸಿಗಲಿಲ್ಲ. ಅದಕ್ಕೆ ನಾವು ‘ಯೆಹೋವನೇ, ಅವರು ಎಲ್ಲಿದ್ದಾರೆ ನಮಗೆ ತೋರಿಸಿಕೊಡು’ ಅಂತ ಪ್ರಾರ್ಥನೆ ಮಾಡಿದ್ವಿ. ಆಗ ಒಬ್ಬ ವ್ಯಕ್ತಿ ನಮ್ಮ ಎದುರುಗಡೆ ನಡ್ಕೊಂಡು ಬರ್ತಾ ಇದ್ದ. ನಾವು ಅವರ ಹತ್ರ ‘ಸಾಕ್ಷಿಗಳು ಯಾರಾದ್ರೂ ನಿಮಗೆ ಗೊತ್ತಾ?’ ಅಂತ ಕೇಳಿದ್ವಿ. ಅದಕ್ಕೆ ಅವರು, “ಹೌದು ನಾನೊಬ್ಬ ಯೆಹೋವನ ಸಾಕ್ಷಿನೇ, ಬನ್ನಿ ನಿಮ್ಮನ್ನ ವಿಪತ್ತು ಪರಿಹಾರ ಕಮಿಟಿ ಹತ್ರ ಕರ್ಕೊಂಡು ಹೋಗ್ತೀನಿ” ಅಂತ ಹೇಳಿದ. ಕಮಿಟಿಯವರ ಜೊತೆ ಮಾತಾಡಿದಾಗ ನಮಗೆ ತುಂಬ ಖುಷಿ ಆಯ್ತು. ಆಮೇಲೆ ನಾವು ಸುಮಾರು 1,600 ನಿರಾಶ್ರಿತರ ಜೊತೆಗೆ ಮಾತಾಡಿದ್ವಿ ಅವರಿಗೆ ಸಾಂತ್ವನ ಕೊಡೋಕೆ, ಪ್ರೋತ್ಸಾಹ ಕೊಡೋಕೆ ಒಂದು ಅವಕಾಶ ಸಿಕ್ತು. ಆಡಳಿತ ಮಂಡಳಿ ಬರೆದ ಪತ್ರದಲ್ಲಿದ್ದ ವಿಷ್ಯಗಳನ್ನ ನಾವು ಅವರಿಗೆ ಹೇಳಿದ್ವಿ. ಆಗ ಸಹೋದರ ಸಹೋದರರಿಗೆ ಅದನ್ನ ಕೇಳಿಸ್ಕೊಂಡು ತುಂಬ ಖುಷಿ ಆಯ್ತು. ಯಾಕಂದ್ರೆ ಅದರಲ್ಲಿ ಹೀಗಿತ್ತು “ನಾವು ಯಾವಾಗ್ಲೂ ನಿಮಗೋಸ್ಕರ ಪ್ರಾರ್ಥನೆ ಮಾಡ್ತಾನೆ ಇದ್ದೀವಿ. ಯೆಹೋವ ಯಾವತ್ತು ನಿಮ್ಮ ಕೈಬಿಡಲ್ಲ ಅಂತ ನಮಗೆ ಗೊತ್ತು.” ಅವತ್ತು ಆಡಳಿತ ಮಂಡಲಿ ಹೇಳಿದ ಮಾತು ನಿಜ ಆಯ್ತು. ಯಾಕಂದ್ರೆ ಇವತ್ತು ರುವಾಂಡದಲ್ಲಿ 30,000ಕ್ಕಿಂತ ಹೆಚ್ಚು ಸಹೋದರ ಸಹೋದರಿಯರು ಒಟ್ಟಿಗೆ ಸೇರಿ ಖುಷಿಖುಷಿಯಾಗಿ ಯೆಹೋವನನ್ನ ಆರಾಧಿಸ್ತಿದ್ದಾರೆ.
ನಂಬಿಗಸ್ತನಾಗಿರೋಕೆ ದೃಢತೀರ್ಮಾನ
ಸುಮಾರು 58 ವರ್ಷ ನಾನು ಮತ್ತು ನನ್ನ ಪ್ರೀತಿಯ ಹೆಂಡತಿ ಎಲೀ ಖುಷಿಖುಷಿಯಾಗಿದ್ವಿ. ಕೊನೆಗೆ 2011ರಲ್ಲಿ ಅವಳು ತೀರಿಕೊಂಡಳು. ಆಗ ನನ್ನ ಹೃದಯನೇ ಹೊಡೆದು ಹೋಯ್ತು. ಯೆಹೋವನ ಹತ್ರ ಪ್ರಾರ್ಥನೆಯಲ್ಲಿ ನನಗೆ ಅನಿಸಿದ್ದನ್ನ ಹೇಳ್ಕೊಂಡಾಗ ಸಮಾಧಾನ ಆಯ್ತು. ಅಷ್ಟೇ ಅಲ್ಲ ಸಿಹಿಸುದ್ದಿಯನ್ನ ಸಾರ್ತಿದ್ದಾಗಲೂ ನನ್ನ ಮನಸ್ಸಿಗೆ ನೆಮ್ಮದಿ ಸಿಗ್ತಿತ್ತು.
ಈಗ ನನಗೆ 90ಕ್ಕಿಂತ ಜಾಸ್ತಿ ವಯಸ್ಸಾಗಿದೆ. ಆದ್ರೂ ನಾನು ಪ್ರತಿ ವಾರ ತಪ್ಪದೇ ಸೇವೆಗೆ ಹೋಗ್ತೀನಿ. ಅಷ್ಟೇ ಅಲ್ಲ ಬೆಲ್ಜಿಯಂ ಬ್ರಾಂಚ್‌ನಲ್ಲಿ ಲೀಗಲ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡ್ತಾ ಇದ್ದೀನಿ. ಅದು ನನಗೆ ತುಂಬ ಖುಷಿ ತಂದ್ಕೊಟ್ಟಿದೆ. ನನ್ನ ಅನುಭವನ ಇಲ್ಲಿ ಇರೋರ ಹತ್ರ ಹಂಚ್ಕೊಳ್ತೀನಿ ಮತ್ತು ಬೆತೆಲ್ ಕುಟುಂಬದಲ್ಲಿರೋ ಯುವ ಜನರಿಗೆ ಪರಿಪಾಲನಾ ಭೇಟಿ ಮಾಡ್ತೀನಿ.
ಸುಮಾರು 84 ವರ್ಷಗಳ ಹಿಂದೆ ನಾನು ಯೆಹೋವನಿಗೆ ಮೊದಲನೇ ಸಲ ಪ್ರಾರ್ಥನೆ ಮಾಡಿದ್ದೆ. ನಾನು ತಗೊಂಡ ಈ ಮೊದಲನೇ ಹೆಜ್ಜೆ ನನ್ನ ಇಡೀ ಜೀವನವನ್ನ ತುಂಬ ಸುಂದರವಾಗಿ ಮಾಡ್ತು. ಅಷ್ಟೇ ಅಲ್ಲ ಯೆಹೋವನಿಗೆ ಇನ್ನಷ್ಟು ಹತ್ರ ಆಗೋಕೆ ಸಹಾಯ ಮಾಡ್ತು. ನಾನು ಮಾಡಿದ ಪ್ರಾರ್ಥನೆಗಳನ್ನ ಯೆಹೋವ ಕೇಳಿದ್ದಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ.—ಕೀರ್ತ. 66:19. b