ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 48

ಗೀತೆ 97 ವಾಕ್ಯವೇ ಜೀವಕ್ಕೆ ಆಧಾರ

ಜೀವ ಕೊಡೋ ಅದ್ಭುತ ರೊಟ್ಟಿ

ಜೀವ ಕೊಡೋ ಅದ್ಭುತ ರೊಟ್ಟಿ

“ಶಾಶ್ವತ ಜೀವ ಕೊಡೋ ರೊಟ್ಟಿ ನಾನೇ. ನನ್ನ ಹತ್ರ ಬರುವವನಿಗೆ ಹಸಿವೇ ಆಗಲ್ಲ.”ಯೋಹಾ. 6:35.

ಈ ಲೇಖನದಲ್ಲಿ ಏನಿದೆ?

ಯೋಹಾನ 6​ನೇ ಅಧ್ಯಾಯದಲ್ಲಿ ಯೇಸು ಬರೀ ಐದು ರೊಟ್ಟಿ ಮತ್ತು ಎರಡು ಮೀನಿಂದ ಸಾವಿರಾರು ಜನರಿಗೆ ಊಟ ಕೊಟ್ಟನು ಅಂತಿದೆ. ಈ ಅದ್ಭುತದಿಂದ ನಾವೇನು ಪಾಠ ಕಲಿತೀವಿ ಅಂತ ನೋಡೋಣ.

1. ಬೈಬಲಲ್ಲಿ ರೊಟ್ಟಿ ಬಗ್ಗೆ ಏನು ಹೇಳಿದೆ?

 ಬೈಬಲ್‌ ಕಾಲದಲ್ಲಿ ತುಂಬ ಜನ ದಿನಾ ರೊಟ್ಟಿ ತಿನ್ನುತ್ತಾ ಇದ್ರು. (ಆದಿ. 14:18; ಲೂಕ 4:4) ಅಷ್ಟೇ ಅಲ್ಲ ಬೈಬಲ್‌ನಲ್ಲಿ ಊಟವನ್ನ ಸೂಚಿಸೋಕೆ ಎಷ್ಟೋ ಕಡೆ ರೊಟ್ಟಿ ಅಂತಾನೇ ಹೇಳಿದೆ. (ಮತ್ತಾ. 6:11) ಯೇಸು ರೊಟ್ಟಿಯನ್ನ ಬಳಸಿ ಹೆಸ್ರುವಾಸಿಯಾಗಿರೋ ಎರಡು ದೊಡ್ಡ ಅದ್ಭುತಗಳನ್ನ ಮಾಡಿದ್ದಾನೆ. (ಮತ್ತಾ. 16:9, 10) ಅದ್ರಲ್ಲಿ ಒಂದು, ಯೋಹಾನ 6​ನೇ ಅಧ್ಯಾಯದಲ್ಲಿದೆ. ಅದನ್ನ ನಾವೀಗ ಚರ್ಚೆ ಮಾಡೋಣ ಮತ್ತು ನಾವು ಯಾವ ಪಾಠಗಳನ್ನ ಕಲೀಬಹುದು ಅಂತ ನೋಡೋಣ.

2. ಸಾವಿರಾರು ಜನ ಊಟಕ್ಕಾಗಿ ಚಿಂತೆ ಮಾಡೋ ಪರಿಸ್ಥಿತಿ ಯಾಕೆ ಬಂತು?

2 ಯೇಸುವಿನ ಅಪೊಸ್ತಲರು ಸಿಹಿಸುದ್ದಿ ಸಾರಿದ ಮೇಲೆ ಸುಸ್ತಾಗಿದ್ರು. ಅದಕ್ಕೆ ಅವರು ಸ್ವಲ್ಪ ವಿಶ್ರಾಂತಿ ಮಾಡಲಿ ಅಂತ ಯೇಸು ಅವ್ರನ್ನ ಕರ್ಕೊಂಡು ಗಲಿಲಾಯ ಸಮುದ್ರದಲ್ಲಿ ದೋಣಿ ಹತ್ತಿ ಹೋದನು. (ಮಾರ್ಕ 6:7, 30-32; ಲೂಕ 9:10) ಅವರು ಬೇತ್ಸಾಯಿದ ಊರಿನಲ್ಲಿ ಯಾರೂ ಇಲ್ಲದಿರೋ ಒಂದು ಜಾಗಕ್ಕೆ ಬಂದ್ರು. ಆದ್ರೆ ಸ್ವಲ್ಪದ್ರಲ್ಲೇ ಸಾವಿರಾರು ಜನ ಯೇಸುನ ಹುಡ್ಕೊಂಡು ಅಲ್ಲಿಗೂ ಬಂದುಬಿಟ್ರು. ಆದ್ರೆ ಯೇಸು ಅವ್ರನ್ನ ನೋಡಿನೂ ನೋಡದಂಗೆ ಇರಲಿಲ್ಲ. ಸಮಯ ಮಾಡ್ಕೊಂಡು ದೇವರ ಆಳ್ವಿಕೆ ಬಗ್ಗೆ ಅವ್ರಿಗೆ ಕಲಿಸಿದನು, ಕಾಯಿಲೆ ಬಿದ್ದವ್ರನ್ನೆಲ್ಲಾ ವಾಸಿಮಾಡಿದನು. ಇದನ್ನೆಲ್ಲಾ ಮಾಡೋ ಹೊತ್ತಿಗೆ ಸಂಜೆ ಆಗೋಯ್ತು. ‘ಈ ಜನ್ರೆಲ್ಲಾ, ತಿನ್ನೋಕೆ ಏನಪ್ಪಾ ಮಾಡ್ತಾರೆ’ ಅಂತ ಶಿಷ್ಯರಿಗೆ ತುಂಬ ಚಿಂತೆ ಆಯ್ತು. ಕೆಲವು ಜನ್ರ ಹತ್ರ ತಿನ್ನೋಕೆ ಅಲ್ಪ ಸ್ವಲ್ಪ ಇತ್ತು. ಆದ್ರೆ ಇನ್ನೂ ಕೆಲವ್ರ ಹತ್ರ ಏನೇನೂ ಇರಲಿಲ್ಲ. ಅವರು ಹಳ್ಳಿಗಳಿಗೆ ಹೋಗಿ ದುಡ್ಡು ಕೊಟ್ಟು ಊಟ ತಗೋಬೇಕಿತ್ತು. (ಮತ್ತಾ. 14:15; ಯೋಹಾ. 6:4, 5) ಈಗ ಇವ್ರಿಗೆ ಸಹಾಯ ಮಾಡೋಕೆ ಯೇಸು ಏನು ಮಾಡ್ತಾನೆ?

ಅದ್ಭುತವಾಗಿ ಕೊಟ್ಟ ರೊಟ್ಟಿ

3. ಯಾರು ಊಟ ಕೊಡಬೇಕು ಅಂತ ಯೇಸು ಹೇಳಿದನು? ( ಚಿತ್ರ ನೋಡಿ.)

3 ಜನರು ಊಟಕ್ಕಾಗಿ ಎಲ್ಲೂ “ಹೋಗೋದು ಬೇಡ. ನೀವೇ ಏನಾದ್ರೂ ತಿನ್ನೋಕೆ ಕೊಡಿ” ಅಂತ ಯೇಸು ಅಪೊಸ್ತಲರಿಗೆ ಹೇಳಿದನು. (ಮತ್ತಾ. 14:16) ಆದ್ರೆ ಇದೆಲ್ಲಾ ಆಗೋ ಮಾತಾ? ಯಾಕಂದ್ರೆ ಅಲ್ಲಿ ಗಂಡಸ್ರೇ 5,000 ಜನ ಇದ್ರು. ಇನ್ನೂ ಹೆಂಗಸ್ರನ್ನ ಮಕ್ಕಳನ್ನೆಲ್ಲಾ ಲೆಕ್ಕ ಹಾಕಿದ್ರೆ ಹೆಚ್ಚುಕಮ್ಮಿ 15,000 ಜನ ಆಗ್ತಿದ್ರು. (ಮತ್ತಾ. 14:21) ಆಗ ಯೇಸುವಿನ ಶಿಷ್ಯ ಅಂದ್ರೆಯ “ಇಲ್ಲಿ ಒಬ್ಬ ಚಿಕ್ಕ ಹುಡುಗನ ಹತ್ರ ಐದು ಬಾರ್ಲಿ ರೊಟ್ಟಿ, ಎರಡು ಚಿಕ್ಕ ಮೀನು ಇದೆ. ಆದ್ರೆ ಇಷ್ಟು ಜನ್ರಿಗೆ ಅದು ಸಾಕಾಗುತ್ತಾ?” ಅಂತ ಕೇಳಿದ. (ಯೋಹಾ. 6:9) ಬಾರ್ಲಿ ರೊಟ್ಟಿಗಳನ್ನ ಜನ ಸಾಮಾನ್ಯವಾಗಿ ತಿನ್ನುತ್ತಾ ಇದ್ರು, ಅದ್ರಲ್ಲೂ ಬಡವರು ಅದನ್ನ ತಿನ್ನುತ್ತಾ ಇದ್ರು. ಅದ್ರಲ್ಲೂ ಅಲ್ಲಿ ಇದ್ದಿದ್ದು ಎರಡು ಚಿಕ್ಕಚಿಕ್ಕ ಮೀನು. ಅದು ಒಣ ಮೀನಾಗಿರಬಹುದು. ಚಿಕ್ಕ ಹುಡುಗನ ಹತ್ರ ಇದ್ದ ಆ ರೊಟ್ಟಿ ಮತ್ತು ಮೀನು ಎಷ್ಟು ಜನ್ರ ಬಾಯಿಗಾಗ್ತಿತ್ತು ಹೇಳಿ?

ಯೇಸು ಜನ್ರಿಗೆ ಯೆಹೋವ ದೇವರ ಬಗ್ಗೆ ಕಲಿಸಿದ ಮೇಲೆ ಪ್ರೀತಿಯಿಂದ ಅವ್ರಿಗೆ ಬೇಕಾಗಿದ್ದ ಆಹಾರನೂ ಕೊಟ್ಟನು (ಪ್ಯಾರ 3 ನೋಡಿ)


4. (ಎ) ಯೇಸು ಏನು ಮಾಡಿದ ಅಂತ ಯೋಹಾನ 6:11-13 ಹೇಳುತ್ತೆ? (ಬಿ) ಯೇಸುಯಿಂದ ನಾವೇನು ಕಲಿಬಹುದು? (ಚಿತ್ರಗಳನ್ನ ನೋಡಿ.)

4 ಆ ಜನ್ರಿಗೆಲ್ಲಾ ಊಟ ಕೊಡಬೇಕು ಅಂತ ಯೇಸುಗೆ ತುಂಬ ಮನಸ್ಸಿತ್ತು. ಅದಕ್ಕೆ ಅವ್ರನ್ನೆಲ್ಲಾ ಹುಲ್ಲಿನ ಮೇಲೆ ಗುಂಪು ಗುಂಪಾಗಿ ಕೂತ್ಕೊಳೋಕೆ ಹೇಳಿದನು. (ಮಾರ್ಕ 6:39, 40; ಯೋಹಾನ 6:11-13 ಓದಿ.) ಆಮೇಲೆ ರೊಟ್ಟಿ ಮತ್ತು ಮೀನನ್ನ ತಗೊಂಡು ಪ್ರಾರ್ಥನೆಲಿ ದೇವರಿಗೆ ಧನ್ಯವಾದ ಹೇಳಿದನು. ಇವತ್ತು ನಾವು ತಿನ್ನುತ್ತಿರೋ ಪ್ರತಿಯೊಂದು ತುತ್ತು ಕೊಡ್ತಿರೋದು ಯೆಹೋವನೇ! ಅದಕ್ಕೆ ನಾವು ಕೂಡ ಊಟಕ್ಕೆ ಮುಂಚೆ ಪ್ರಾರ್ಥನೆ ಮಾಡಿ ಧನ್ಯವಾದ ಹೇಳೋಕೆ ಯಾವತ್ತೂ ಮರೀಬಾರದು. ನಾವು ಒಬ್ಬರೇ ಇರಲಿ, ಗುಂಪಲ್ಲೇ ಇರಲಿ ಪ್ರಾರ್ಥನೆ ಮಾಡೋಕೆ ಯಾವತ್ತೂ ನಾಚಿಕೆಪಡಬಾರದು. ಯೇಸು ಅದ್ಭುತ ಮಾಡಿ ಸಾವಿರಾರು ಜನ್ರಿಗೆ ರೊಟ್ಟಿ ಮತ್ತು ಮೀನನ್ನ ಹಂಚಿದ. ಅವ್ರೆಲ್ರೂ ಹೊಟ್ಟೆ ತುಂಬ ತಿಂದ್ರು, ಊಟ ಇನ್ನೂ ಉಳೀತು. ಉಳಿದಿದ್ದನ್ನ ಯೇಸು ಬಿಸಾಕಲಿಲ್ಲ, ಬೇಕಾಗುತ್ತೆ ಅಂತ ಕೂಡಿಸಿಟ್ಟನು. ಆಹಾರವನ್ನ, ವಸ್ತುಗಳನ್ನ ವೇಸ್ಟ್‌ ಮಾಡಬಾರದು ಅಂತ ಯೇಸು ನಮಗೆ ಎಷ್ಟು ಚೆನ್ನಾಗಿ ತೋರಿಸ್ಕೊಟ್ಟಿದ್ದಾನೆ ಅಲ್ವಾ? ನೀವು ಹೆತ್ತವರಾಗಿದ್ರೆ ನಿಮ್ಮ ಮಕ್ಕಳ ಜೊತೆ ಈ ಕಥೆ ಓದಿ. ಹೀಗೆ ಮಾಡಿದ್ರೆ, ಊಟ ಮಾಡೋ ಮುಂಚೆ ಪ್ರಾರ್ಥನೆ ಮಾಡೋದು, ಬೇರೆಯವ್ರಿಗೆ ಅತಿಥಿಸತ್ಕಾರ ತೋರಿಸೋದು, ನಮ್ಮ ಹತ್ರ ಇರೋದನ್ನ ಬೇರೆಯವ್ರಿಗೆ ಹಂಚ್ಕೊಳ್ಳೋದು ಯಾಕೆ ಮುಖ್ಯ ಅಂತ ಅವ್ರಿಗೆ ಕಲಿಸೋಕಾಗುತ್ತೆ.

ನಿಮ್ಮನ್ನೇ ಕೇಳ್ಕೊಳ್ಳಿ: ‘ಯೇಸು ತರಾನೇ ನಾನು ಊಟಕ್ಕೆ ಮುಂಚೆ ಪ್ರಾರ್ಥನೆ ಮಾಡ್ತೀನಾ?’ (ಪ್ಯಾರ 4 ನೋಡಿ)


5. (ಎ) ಅವತ್ತು ಯೇಸು ಮಾಡಿದ್ದನ್ನೆಲ್ಲಾ ನೋಡಿ ಜನ ಏನು ಮಾಡಬೇಕು ಅಂತ ಅಂದ್ಕೊಂಡ್ರು? (ಬಿ) ಆದ್ರೆ ಯೇಸು ಏನು ಮಾಡಿದನು?

5 ದೇವರು ‘ನಿಮಗೋಸ್ಕರ ಒಬ್ಬ ಪ್ರವಾದಿನ ಕಳಿಸ್ತೀನಿ’ ಅಂತ ಮೋಶೆ ಮೂಲಕ ಹೇಳಿದ ಮಾತು ಆ ಗುಂಪಲ್ಲಿದ್ದ ಜನ್ರಿಗೆ ಗೊತ್ತಿತ್ತು. ಆ ಪ್ರವಾದಿ ಯೇಸುನೇ ಇರಬಹುದಾ ಅಂತ ಅವ್ರಿಗೆ ಅನಿಸ್ತು. (ಧರ್ಮೋ. 18:15-18) ಯಾಕಂದ್ರೆ ಯೇಸು ಅವ್ರಿಗೆ ಕಲಿಸಿದ್ದನ್ನ ಮತ್ತು ಅದ್ಭುತ ಮಾಡಿದ್ದನ್ನ ನೋಡಿ ಅವರು ಅವನನ್ನ ಮೆಚ್ಕೊಂಡಿದ್ರು. ‘ಒಂದುವೇಳೆ ಯೇಸುನೇ ಆ ಪ್ರವಾದಿ ಆಗಿದ್ರೆ ಅವನೊಬ್ಬ ಒಳ್ಳೆ ರಾಜನಾಗ್ತಾನೆ, ನಮ್ಮನ್ನೆಲ್ಲಾ ಚೆನ್ನಾಗಿ ನೋಡ್ಕೊಳ್ತಾನೆ ಮತ್ತು ದೇಶದಲ್ಲಿ ಯಾರಿಗೂ ಊಟದ ಕೊರತೆನೇ ಇರಲ್ಲ’ ಅಂತ ಅಂದ್ಕೊಂಡ್ರು. ಹಾಗಾಗಿ ಇಷ್ಟೆಲ್ಲಾ ಮಾಡೋ ಯೇಸುನ ‘ರಾಜನಾಗಿ ಮಾಡ್ಬಿಟ್ರೆ’ ಚೆನ್ನಾಗಿರುತ್ತೆ ಅಂತ ತೀರ್ಮಾನ ಮಾಡಿದ್ರು. (ಯೋಹಾ. 6:14, 15) ಒಂದುವೇಳೆ ಯೇಸು ರಾಜನಾಗೋಕೆ ಒಪ್ಕೊಂಡಿದ್ರೆ ರೋಮನ್ನರ ಆಳ್ವಿಕೆಯ ಕೆಳಗಿದ್ದ ಯೆಹೂದ್ಯರ ರಾಜಕೀಯದಲ್ಲಿ ಸೇರ್ಕೊಂಡ ಹಾಗಾಗ್ತಿತ್ತು. ಯೇಸು ರಾಜನಾಗೋಕೆ ಒಪ್ಕೊಂಡ್ನಾ? ಇಲ್ಲ. ಬದ್ಲಿಗೆ ಆ ಜನ್ರಿಂದ ತಪ್ಪಿಸ್ಕೊಳ್ಳೋಕೆ ‘ಬೆಟ್ಟಕ್ಕೆ ಹೋದನು.’ ಯಾರು ಎಷ್ಟೇ ಒತ್ತಾಯ ಮಾಡಿದ್ರೂ ಯೇಸು ರಾಜಕೀಯ ವಿಷ್ಯದಲ್ಲಿ ತಲೆನೇ ಹಾಕಲಿಲ್ಲ. ನಾವು ಇದೇ ತರ ಇರಬೇಕಲ್ವಾ?

6. ಯೇಸುವಿನ ಮಾದರಿಯನ್ನ ನಾವು ಹೇಗೆ ಪಾಲಿಸಬಹುದು? (ಚಿತ್ರ ನೋಡಿ.)

6 ನಮ್ಮನ್ನ ಯಾರೂ ಅದ್ಭುತವಾಗಿ ರೊಟ್ಟಿ ಮಾಡಿ ಅಂತಾನೋ ಕಾಯಿಲೆ ವಾಸಿ ಮಾಡಿ ಅಂತಾನೋ ಕೇಳಲ್ಲ ಅಥವಾ ಯಾರೂ ನಮ್ಮನ್ನ ರಾಜ ಆಗೋಕೂ ಹೇಳಲ್ಲ. ಆದ್ರೆ ‘ನಮಗೆ ವೋಟ್‌ ಹಾಕಿ’ ಅಂತ ಒತ್ತಾಯ ಮಾಡಬಹುದು ಅಥವಾ ‘ಈ ಪಾರ್ಟಿಗೆ ಸಪೋರ್ಟ್‌ ಮಾಡಿ, ಇವರು ನಮ್ಮನ್ನ ಚೆನ್ನಾಗಿ ನೋಡ್ಕೊಳ್ತಾರೆ’ ಅಂತ ಪುಸಲಾಯಿಸಬಹುದು. ಇಂಥ ಪರಿಸ್ಥಿತಿಯಲ್ಲಿ ನಾವು ಹೇಗೆ ನಡ್ಕೊಬೇಕು ಅನ್ನೋದ್ರಲ್ಲಿ ಯೇಸು ಒಳ್ಳೆ ಮಾದರಿ ಅಲ್ವಾ? ಯೇಸು ಯಾವುದೇ ರಾಜಕೀಯ ವಿಷ್ಯದಲ್ಲಿ ತಲೆಹಾಕೋಕೆ ಒಪ್ಪಲೇ ಇಲ್ಲ. ಅದಕ್ಕೆ ಆತನು “ನನ್ನ ಆಳ್ವಿಕೆ ಈ ಲೋಕದ ಸರಕಾರಗಳ ತರ ಅಲ್ಲ” ಅಂತ ಹೇಳಿದ. (ಯೋಹಾ. 17:14; 18:36) ಯೇಸುವಿನ ಶಿಷ್ಯರಾಗಿ ನಾವು ಕೂಡ ಯೇಸು ತರಾನೇ ನಡ್ಕೊಬೇಕು, ಯೇಸು ತರಾನೇ ಯೋಚ್ನೆ ಮಾಡಬೇಕು. ಅದಕ್ಕೆ ನಾವು ದೇವರ ಆಳ್ವಿಕೆಗೆ ಮಾತ್ರ ಬೆಂಬಲ ಕೊಡ್ತೀವಿ, ಅದ್ರ ಬಗ್ಗೆನೇ ಸಾರ್ತೀವಿ ಮತ್ತು ಅದು ಬೇಗ ಬರಲಿ ಅಂತ ಪ್ರಾರ್ಥನೆ ಮಾಡ್ತೀವಿ. (ಮತ್ತಾ. 6:10) ಈಗ ಯೇಸು ಮಾಡಿದ ಆ ಅದ್ಭುತದ ಬಗ್ಗೆ ಮತ್ತೆ ಯೋಚ್ನೆ ಮಾಡೋಣ. ಅದ್ರಿಂದ ಇನ್ನೂ ಏನೆಲ್ಲಾ ಪಾಠಗಳನ್ನ ಕಲೀಬಹುದು ಅಂತ ನೋಡೋಣ.

ಯೇಸು ರೋಮನ್ನರ ಮತ್ತು ಯೆಹೂದ್ಯರ ರಾಜಕೀಯ ವಿಷ್ಯಗಳಲ್ಲಿ ತಲೆ ಹಾಕ್ಲಿಲ್ಲ. ಹೀಗೆ ನಮಗೆ ಒಳ್ಳೇ ಮಾದರಿ ಇಟ್ಟಿದ್ದಾನೆ (ಪ್ಯಾರ 6 ನೋಡಿ)


‘ರೊಟ್ಟಿಯ ಅರ್ಥ’

7. (ಎ) ಸಮುದ್ರದಲ್ಲಿ ಯೇಸು ಯಾವ ಅದ್ಭುತ ಮಾಡಿದನು? (ಬಿ) ಅದನ್ನ ನೋಡಿ ಶಿಷ್ಯರು ಏನಂದ್ರು? (ಯೋಹಾನ 6:16-20)

7 ಯೇಸು ಜನ್ರಿಗೆ ಊಟ ಕೊಟ್ಟ ಮೇಲೆ ಶಿಷ್ಯರೆಲ್ಲಾ ಕಪೆರ್ನೌಮ್‌ ಕಡೆ ಹೊರಡ್ತಾರೆ. ರಾಜನಾಗಿ ಮಾಡಬೇಕು ಅಂತಿದ್ದ ಜನ್ರಿಂದ ತಪ್ಪಿಸ್ಕೊಳ್ಳೋಕೆ ಯೇಸು ಬೆಟ್ಟಕ್ಕೆ ಹೋಗ್ತಾನೆ. (ಯೋಹಾನ 6:16-20 ಓದಿ.) ಶಿಷ್ಯರು ಸಮುದ್ರದಲ್ಲಿ ಹೋಗ್ತಿರುವಾಗ ಜೋರಾಗಿ ಬಿರುಗಾಳಿ ಬೀಸೋಕೆ ಶುರುವಾಗುತ್ತೆ. ಇದ್ರಿಂದ ದೊಡ್ಡ ದೊಡ್ಡ ಅಲೆಗಳು ಬರುತ್ತೆ, ಶಿಷ್ಯರು ತುಂಬ ಭಯಪಡ್ತಾರೆ. ಆದ್ರೆ ದೂರದಲ್ಲಿ ಯೇಸು ನೀರಿನ ಮೇಲೆ ನಡ್ಕೊಂಡು ಬರೋದನ್ನ ಅವರು ನೋಡ್ತಾರೆ. ಯೇಸು ಪೇತ್ರನಿಗೆ, ‘ನೀನೂ ನೀರಿನ ಮೇಲೆ ನಡ್ಕೊಂಡು ಬಾ’ ಅಂತ ಹೇಳ್ತಾನೆ. (ಮತ್ತಾ. 14:22-31) ಆಮೇಲೆ ಯೇಸು ಶಿಷ್ಯರಿದ್ದ ದೋಣಿಯನ್ನ ಹತ್ತುತ್ತಾನೆ. ಆಗ ಬಿರುಗಾಳಿ ಬೀಸೋದು ನಿಂತು ಹೋಗುತ್ತೆ. ಇದನ್ನ ನೋಡಿ ಶಿಷ್ಯರು ಆಶ್ಚರ್ಯದಿಂದ “ನೀನು ನಿಜವಾಗ್ಲೂ ದೇವರ ಮಗ” ಅಂತ ಹೇಳ್ತಾರೆ. a (ಮತ್ತಾ. 14:33) ಯೇಸು ರೊಟ್ಟಿಯ ಅದ್ಭುತ ಮಾಡಿದ್ದೂ ಪವಿತ್ರಶಕ್ತಿಯಿಂದಾನೇ. ಶಿಷ್ಯರು ಈ ಮಾತನ್ನ ಆಗ ಹೇಳದೇ ಸಮುದ್ರದಲ್ಲಿ ಅದ್ಭುತ ಮಾಡಿದಾಗ ಹೇಳ್ತಿದ್ದಾರೆ. ಅದಕ್ಕೆ ಮಾರ್ಕ “ಇದನ್ನ ನೋಡಿ [ಅಪೊಸ್ತಲರಿಗೆ] ತುಂಬ ಆಶ್ಚರ್ಯ ಆಯ್ತು. ರೊಟ್ಟಿಯ ಅದ್ಭುತ ಮಾಡಿದ ಯೇಸುಗೆ ಇಂಥ ಅದ್ಭುತನೂ ಮಾಡೋಕಾಗುತ್ತೆ ಅಂತ ಅವರು ಅರ್ಥ ಮಾಡ್ಕೊಳ್ಳಲಿಲ್ಲ. ಅವ್ರ ಮನಸ್ಸು ಆಗಲೂ ಮಂಕಾಗಿತ್ತು” ಅಂತ ಹೇಳಿದ. (ಮಾರ್ಕ 6:50-52) ಯೇಸು ಮಾಡಿದ ಒಂದೊಂದು ಅದ್ಭುತಾನೂ ದೇವರ ಶಕ್ತಿಯಿಂದಾನೇ ಅಂತ ಅವರು ಅರ್ಥ ಮಾಡ್ಕೊಳ್ಳೋಕೆ ತಪ್ಪಿಹೋದ್ರು. ಅದಕ್ಕೆ ಯೇಸು ಮತ್ತೆ ರೊಟ್ಟಿಯ ಅದ್ಭುತದ ಬಗ್ಗೆ ಮಾತಾಡ್ತಾ ನಮಗೆ ಕೆಲವು ಪಾಠಗಳನ್ನ ಕಲಿಸಿದ್ದಾನೆ.

8-9. ಜನ್ರ ಗುಂಪು ಯಾಕೆ ಯೇಸುನ ಹುಡುಕೊಂಡು ಹೋಯ್ತು? (ಯೋಹಾನ 6:26, 27)

8 ಅದ್ಭುತವಾಗಿ ರೊಟ್ಟಿ ತಿಂದ ಆ ಜನ್ರ ಗುಂಪಿಗೆ ತಮ್ಮ ಹೊಟ್ಟೆ ತುಂಬಿಸ್ಕೊಳ್ಳೋದೇ ಮುಖ್ಯ ಆಗಿತ್ತು. ಅದು ನಮಗೆ ಹೇಗೆ ಗೊತ್ತು? ಮಾರನೇ ದಿನ ಆ ಜನ ಯೇಸುನ ಮತ್ತು ಆತನ ಶಿಷ್ಯರನ್ನ ಹುಡ್ಕೊಂಡು ಆ ಜಾಗಕ್ಕೆ ಬರ್ತಾರೆ. ಆದ್ರೆ ಯೇಸು ಅಲ್ಲಿ ಇಲ್ಲದೇ ಇರೋದನ್ನ ನೋಡಿ ತಿಬೇರಿಯದಿಂದ ಬಂದ ದೋಣಿಗಳನ್ನ ಹತ್ಕೊಂಡು ಕಪೆರ್ನೌಮಿಗೆ ಹೋಗ್ತಾರೆ. (ಯೋಹಾ. 6:22-24) ಅವರು ಯೇಸುನ ಹುಡ್ಕೊಂಡು ಹೋಗಿದ್ದು ಯೇಸು ಬಗ್ಗೆ ಇನ್ನೂ ಜಾಸ್ತಿ ಕಲಿಯಕಂತನಾ? ಇಲ್ಲ. ತಿನ್ನೋಕೆ ಇವತ್ತು ಕೂಡ ಯೇಸು ಏನಾದ್ರೂ ಕೊಡ್ತಾನಾ ಅಂತ ಹುಡುಕೊಂಡು ಹೋದ್ರು.

9 ಕೊನೆಗೂ ಆ ಜನ್ರು ಯೇಸುನ ಕಪೆರ್ನೌಮಲ್ಲಿ ನೋಡ್ತಾರೆ. ಯೇಸು ಆ ಜನ್ರ ಗುಂಪನ್ನ ನೋಡಿ ಅವರು ಯಾಕೆ ಬಂದಿದ್ದಾರೆ ಅಂತ ಅರ್ಥ ಮಾಡ್ಕೊಂಡ. ಅದಕ್ಕೆ ಆತನು ನೇರವಾಗಿ ಅವ್ರಿಗೆ “ಹೊಟ್ಟೆ ತುಂಬ ರೊಟ್ಟಿ ತಿಂದಿದ್ದಕ್ಕೇ ಹುಡುಕ್ತಾ ಇದ್ದೀರ. ಹಾಳಾಗಿ ಹೋಗೋ ಆಹಾರಕ್ಕಾಗಿ ದುಡಿಬೇಡಿ, ಶಾಶ್ವತ ಜೀವ ಕೊಡೋ ಹಾಳಾಗದ ಆಹಾರಕ್ಕಾಗಿ ದುಡಿರಿ” ಅಂತ ಹೇಳ್ತಾನೆ. (ಯೋಹಾನ 6:26, 27 ಓದಿ.) ಅಂಥ ಆಹಾರನ ತನ್ನ ತಂದೆ ಕೊಡ್ತಾರೆ ಅಂತ ಯೇಸು ಹೇಳಿದ. ಶಾಶ್ವತ ಜೀವ ಕೊಡೋ ಆಹಾರ ಇದೆ ಅಂತ ಕೇಳಿ ಆ ಜನ್ರ ಗುಂಪಿಗೆ ಖಂಡಿತ ಆಶ್ಚರ್ಯ ಆಗಿರುತ್ತೆ. ಯಾವುದು ಆ ಆಹಾರ? ಅದನ್ನ ಅವರು ಹೇಗೆ ಪಡ್ಕೊಬಹುದಿತ್ತು?

10. ಶಾಶ್ವತ ಜೀವ ಸಿಗಬೇಕಂದ್ರೆ ಜನ್ರು ಏನು ಮಾಡಬೇಕು?

10 ಶಾಶ್ವತ ಜೀವ ಸುಮ್ನೆ ಸಿಗಲ್ಲ! ಅದನ್ನ ಪಡ್ಕೊಬೇಕಂದ್ರೆ ಏನಾದ್ರೂ ಮಾಡಬೇಕಾಗುತ್ತೆ ಅಂತ ಆ ಜನ ಅರ್ಥ ಮಾಡ್ಕೊಂಡ್ರು. ನಿಯಮ ಪುಸ್ತಕದಲ್ಲಿ ಇರೋ ವಿಷ್ಯಗಳನ್ನ ಮಾಡಿದ್ರೆ ಸಾಕಾಗಬಹುದು ಅಂತ ಅವರು ಅಂದ್ಕೊಂಡಿರಬಹುದು. ಆದ್ರೆ ಯೇಸು ಅವ್ರಿಗೆ “ದೇವರಿಗೆ ಇಷ್ಟ ಆಗಬೇಕಂದ್ರೆ ನೀವು ಆತನು ಕಳಿಸಿರೋ ವ್ಯಕ್ತಿಯನ್ನ ನಂಬಬೇಕು” ಅಂತ ಹೇಳಿದನು. (ಯೋಹಾ. 6:28, 29) ‘ಶಾಶ್ವತ ಜೀವ ಪಡ್ಕೊಬೇಕಂದ್ರೆ’ ದೇವರು ಕಳಿಸಿರೋ ವ್ಯಕ್ತಿಯಲ್ಲಿ ನಂಬಿಕೆ ಇಡಬೇಕು ಅಂತ ಯೇಸು ಈ ಮುಂಚೆನೂ ಹೇಳಿದ್ದನು. (ಯೋಹಾ. 3:16-18, 36) ಶಾಶ್ವತ ಜೀವ ಪಡ್ಕೊಳ್ಳೋಕೆ ಇನ್ನೂ ಏನು ಮಾಡಬೇಕು ಅಂತ ಆಮೇಲೆನೂ ಹೇಳಿದನು.—ಯೋಹಾ. 17:3.

11. ಹೊಟ್ಟೆ ತುಂಬಿಸ್ಕೊಳ್ಳೋದ್ರ ಬಗ್ಗೆನೇ ಆ ಜನ್ರು ಯೋಚಿಸ್ತಿದ್ರು ಅಂತ ನಮಗೆ ಹೇಗೆ ಗೊತ್ತಾಗುತ್ತೆ? (ಕೀರ್ತನೆ 78:24, 25)

11 ಶಾಶ್ವತ ಜೀವ ಪಡ್ಕೊಬೇಕಂದ್ರೆ ತನ್ನ ಮೇಲೆ ನಂಬಿಕೆ ಇಡಬೇಕು ಅಂತ ಯೇಸು ಕಲಿಸಿದ್ದನ್ನ ಅವರು ಒಪ್ಕೊಳ್ಳಲಿಲ್ಲ. ಅದ್ರ ಬದ್ಲು “ನಾವು ನೋಡಿ ನಂಬೋ ತರ ನೀನು ಯಾವ ಅದ್ಭುತ ಮಾಡ್ತಿಯಾ?” ಅಂತ ಯೇಸುನ ಕೇಳಿದ್ರು. (ಯೋಹಾ. 6:30) ಅದಕ್ಕೇ ಹಿಂದೆ ಮೋಶೆ ಕಾಲದಲ್ಲಿ ತಮ್ಮ ಪೂರ್ವಜರಿಗೆ ದಿನಾ ಅದ್ಭುತವಾಗಿ ಮನ್ನ ಸಿಕ್ಕಿದ್ರ ಬಗ್ಗೆ ಅವರು ನೆನಪಿಸಿದ್ರು. (ನೆಹೆ. 9:15; ಕೀರ್ತನೆ 78:24, 25 ಓದಿ.) ಅದೇ ತರ ಯೇಸುನೂ ತಿನ್ನೋಕೆ ದಿನಾ ರೊಟ್ಟಿ ಕೊಟ್ರೆ ಚೆನ್ನಾಗಿ ಇರುತ್ತೆ ಅಂತ ಅವ್ರ ಮನಸ್ಸಲ್ಲಿತ್ತು. ಆದ್ರೆ ನನ್ನ ಅಪ್ಪ “ಸ್ವರ್ಗದಿಂದ ನಿಮಗೆ ನಿಜವಾದ ರೊಟ್ಟಿ” ಕೊಡ್ತಾನೆ ಅಂತ ಯೇಸು ಹೇಳಿದನು. (ಯೋಹಾ. 6:32) ಮನ್ನಕ್ಕಿಂತ ಶ್ರೇಷ್ಠವಾಗಿರೋ ಈ ರೊಟ್ಟಿ ಯಾವುದು ಅಂತ ಒಬ್ರೂ ಕೇಳಲಿಲ್ಲ. ಇದ್ರಿಂದಾನೇ ಗೊತ್ತಾಗುತ್ತೆ ಆ ಜನ್ರು ಬರೀ ಹೊಟ್ಟೆ ತುಂಬಿಸ್ಕೊಳ್ಳೋದ್ರ ಬಗ್ಗೆನೇ ಯೋಚಿಸ್ತಿದ್ರೂ ಅಂತ. ಅದಕ್ಕೇ ಅವರು ಯೇಸು ಕಲಿಸಿದ ಸತ್ಯಗಳನ್ನ ಕಿವಿಗೇ ಹಾಕೊಳ್ಳಲಿಲ್ಲ. ಇವ್ರಿಂದ ನಾವೇನು ಕಲಿಬಹುದು?

ನಮಗೆ ಯಾವುದು ಮುಖ್ಯ!

12. (ಎ) ಯೇಸುಗೆ ಯಾವುದು ಮುಖ್ಯ ಆಗಿತ್ತು? (ಬಿ) ಅದನ್ನ ಆತನು ಹೇಗೆ ತೋರಿಸ್ಕೊಟ್ಟ?

12 ಯೋಹಾನ 6​ನೇ ಅಧ್ಯಾಯದಿಂದ ನಾವು ಒಂದು ಮುಖ್ಯ ಪಾಠ ಕಲಿಬಹುದು. ಅದೇನಂದ್ರೆ ದೇವರ ಮಾತನ್ನ ಕೇಳೋದು ಆತನ ಜೊತೆ ಒಳ್ಳೆ ಸಂಬಂಧನ ಕಾಪಾಡ್ಕೊಳ್ಳೋದು ನಮಗೆ ಯಾವಾಗ್ಲೂ ಮುಖ್ಯ ಆಗಿರಬೇಕು. ಯೇಸುಗೂ ಇದು ತುಂಬ ಮುಖ್ಯ ಆಗಿತ್ತು. ಅದಕ್ಕೆ ಸೈತಾನ ಪರೀಕ್ಷೆ ಮಾಡಿದಾಗ್ಲೂ ಇದನ್ನೇ ಹೇಳಿದನು. (ಮತ್ತಾ. 4:3, 4) ಅಷ್ಟೇ ಅಲ್ಲ ಬೆಟ್ಟದ ಭಾಷಣದಲ್ಲೂ ಯೆಹೋವನ ಜೊತೆ ಒಳ್ಳೇ ಸಂಬಂಧ ಕಾಪಾಡ್ಕೊಳ್ಳೋದು ಎಷ್ಟು ಮುಖ್ಯ ಅಂತ ಕಲಿಸಿದನು. (ಮತ್ತಾ. 5:3) ಹಾಗಾಗಿ ನಮ್ಮನ್ನ ನಾವೇ ಹೀಗೆ ಕೇಳ್ಕೊಬೇಕು: ನನ್ನ ಜೀವನ ರೀತಿ ಏನು ತೋರಿಸ್ತಿದೆ? ನನಗೆ ನನ್ನ ಆಸೆಗಳು ಮುಖ್ಯ ಅಂತಾನಾ? ಅಥವಾ ದೇವರ ಜೊತೆಗಿರೋ ಸಂಬಂಧ ಮುಖ್ಯ ಅಂತಾನಾ?

13. (ಎ) ನಾವು ಯಾವುದ್ರ ಬಗ್ಗೆ ಪ್ರಾರ್ಥನೆ ಮಾಡೋದು ತಪ್ಪಲ್ಲ? (ಬಿ) ಪೌಲ ನಮಗೆ ಯಾವ ಎಚ್ಚರಿಕೆ ಕೊಟ್ಟಿದ್ದಾನೆ? (1 ಕೊರಿಂಥ 10:6, 7, 11)

13 ಊಟಕ್ಕೆ, ನಮಗೆ ಬೇಕಾದ ವಸ್ತುಗಳನ್ನ ಪಡ್ಕೊಳ್ಳೋಕೆ ಪ್ರಾರ್ಥನೆ ಮಾಡೋದ್ರಲ್ಲಿ ಏನೂ ತಪ್ಪಿಲ್ಲ. (ಲೂಕ 11:3) ಬೈಬಲ್‌ ಸಹ ‘ತಿನ್ನೋದು, ಕುಡಿಯೋದು ಮತ್ತು ಕಷ್ಟಪಟ್ಟು ಕೆಲಸ ಮಾಡೋದ್ರಲ್ಲಿ ಸಂತೋಷ ಪಡಿ’ ಅಂತ ಹೇಳುತ್ತೆ. ಅಷ್ಟೇ ಅಲ್ಲ ಇವುಗಳನ್ನ “ಸತ್ಯ ದೇವರೇ ಕೊಟ್ಟಿದ್ದಾನೆ” ಅಂತಾನೂ ಹೇಳುತ್ತೆ. (ಪ್ರಸಂ. 2:24; 8:15; ಯಾಕೋ. 1:17) ಆದ್ರೆ ಇದೇ ನಮ್ಮ ಜೀವನ ಆಗಿಬಿಡಬಾರದು. ಯೆರೂಸಲೇಮ್‌ ನಾಶ ಆಗೋ ಮುಂಚೆ ಜೀವಿಸಿದ್ದ ಕ್ರೈಸ್ತರಿಗೆ ಪೌಲನೂ ಇದನ್ನೇ ಹೇಳಿದ. ಅವನು ಸಿನಾಯಿ ಬೆಟ್ಟದ ಹತ್ರ ಇಸ್ರಾಯೇಲ್ಯರಿಗೆ ಏನಾಯ್ತು ಅಂತ ನೆನಪಿಸ್ತಾ ಇಸ್ರಾಯೇಲ್ಯರು “ಕೆಟ್ಟದ್ದನ್ನ ಮಾಡೋಕೆ ಇಷ್ಟಪಟ್ರು, ನಾವು ಅವ್ರ ತರ ಮಾಡಬಾರದು” ಅಂತ ಎಚ್ಚರಿಸಿದ. (1 ಕೊರಿಂಥ 10:6, 7, 11 ಓದಿ.) ಇಸ್ರಾಯೇಲ್ಯರಿಗೆ ಯೆಹೋವ ಅದ್ಭುತವಾಗಿ ಆಹಾರ ಕೊಟ್ಟನು. ಆದ್ರೆ ಅವರು ಅತಿಯಾಸೆ ಪಟ್ರು. (ಅರ. 11:4-6, 31-34) ಅಷ್ಟೇ ಅಲ್ಲ ಚಿನ್ನದ ಕರುನ ಮಾಡಿ ತಿಂದು ಕುಡಿದು ಮಜಾ ಮಾಡಿದ್ರು. (ವಿಮೋ. 32:4-6) ಇದು ಯೆಹೋವನಿಗೆ ತುಂಬ ಕೋಪ ಬರಿಸ್ತು. ಹೀಗೆ ಮಾಡಿ ಅವರು ಸಮಸ್ಯೆನ ಮೈಮೇಲೆ ಎಳ್ಕೊಂಡ್ರು. ಪೌಲ ಇಸ್ರಾಯೇಲ್ಯರ ಈ ಅನುಭವ ಹೇಳಿ ಕ್ರಿಸ್ತ ಶಕ 70ರಲ್ಲಾದ ಯೆರೂಸಲೇಮಿನ ನಾಶನಕ್ಕೆ ಮುಂಚೆ ಜೀವಿಸ್ತಿದ್ದ ಕ್ರೈಸ್ತರನ್ನ ಎಚ್ಚರಿಸಿದ. ಈ ಲೋಕನೂ ಇನ್ನೇನು ಸ್ವಲ್ಪ ಸಮಯದಲ್ಲಿ ನಾಶ ಆಗಿಬಿಡುತ್ತೆ. ಹಾಗಾಗಿ ಪೌಲ ಕೊಟ್ಟ ಎಚ್ಚರಿಕೆಯನ್ನ ನಾವು ಗಂಭೀರವಾಗಿ ತಗೊಳ್ಳಬೇಕಲ್ವಾ?

14. ಹೊಸ ಲೋಕದಲ್ಲಿ ಎಲ್ರಿಗೂ ಆಹಾರ ಸಿಗುತ್ತಾ?

14 “ಇವತ್ತಿಗೆ ಬೇಕಾಗಿರೋ ಊಟನ ದಯವಿಟ್ಟು ಕೊಡು” ಅಂತ ಹೇಳಿದ ಅದೇ ಪ್ರಾರ್ಥನೆಯಲ್ಲಿ ಯೇಸು “ನಿನ್ನ ಇಷ್ಟ ಸ್ವರ್ಗದಲ್ಲಿ ನೆರವೇರೋ ತರ ಭೂಮಿಯಲ್ಲೂ ನೆರವೇರಲಿ” ಅಂತ ಹೇಳಿದನು. (ಮತ್ತಾ. 6:9-11) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಎಲ್ರ ಕೈಗೂ ಆಹಾರ ಸಿಗಬೇಕು ಅನ್ನೋದು ದೇವರ ಇಷ್ಟ ಅಂತ ನಮಗೆ ಗೊತ್ತಾಗುತ್ತೆ. ಅದಕ್ಕೆ ಯೆಶಾಯ 25:6-8 ದೇವರ ಆಳ್ವಿಕೆಯಲ್ಲಿ ಎಲ್ರಿಗೂ ಬೇಕಾದಷ್ಟು ಆಹಾರ ಸಿಗುತ್ತೆ ಅಂತ ಹೇಳುತ್ತೆ. ಕೀರ್ತನೆ 72:16 “ಭೂಮಿ ಮೇಲೆ ಬೆಳೆ ಸಮೃದ್ಧವಾಗಿ ಇರುತ್ತೆ, ಪರ್ವತ ಶಿಖರಗಳ ಮೇಲೆ ಧಾನ್ಯ ತುಂಬಿತುಳುಕುತ್ತೆ” ಅಂತ ಹೇಳುತ್ತೆ. ಹೊಸ ಲೋಕದಲ್ಲಿ ನಿಮ್ಮ ಕೈಗೆ ಬೇರೆಬೇರೆ ರೀತಿಯ ಬೆಳೆಗಳು ಸಿಗುತ್ತೆ. ಅವುಗಳನ್ನ ಬಳಸಿ ನೀವು ರುಚಿರುಚಿಯಾದ ಅಡುಗೆ ಮಾಡಬಹುದು. ನೀವು ಯಾವ ಅಡುಗೆ ಮಾಡಬೇಕು ಅಂತಿದ್ದೀರಾ? ಜೊತೆಗೆ ಅಲ್ಲಿ ನಿಮ್ಮದೇ ಸ್ವಂತ ದ್ರಾಕ್ಷಿತೋಟನೂ ಇರುತ್ತೆ. ಅದ್ರ ಫಲನ ನೀವು ಪೂರ್ತಿ ಅನುಭವಿಸಬಹುದು. (ಯೆಶಾ. 65:21, 22) ಹೀಗೆ ದೇವರ ಆಳ್ವಿಕೆಯಲ್ಲಿ ಎಲ್ರೂ ಖುಷಿಖುಷಿಯಾಗಿ ಇರ್ತಾರೆ.

15. ಮತ್ತೆ ಜೀವಂತವಾಗಿ ಎದ್ದು ಬರೋರು ಯಾವುದ್ರ ಬಗ್ಗೆ ಕಲಿಬೇಕು? (ಯೋಹಾನ 6:35)

15 ಯೋಹಾನ 6:35 ಓದಿ. ಯೇಸು ಕೊಟ್ಟ ರೊಟ್ಟಿ ಮತ್ತು ಮೀನು ತಿಂದ ಜನ್ರ ಬಗ್ಗೆ ಮತ್ತೆ ಯೋಚ್ನೆ ಮಾಡಿ. ಅವರು ಆಗ ಯೇಸು ಮೇಲೆ ನಂಬಿಕೆ ಇಡಲಿಲ್ಲ ನಿಜ. ಆದ್ರೂ ಅವ್ರಲ್ಲಿ ಕೆಲವರು ಹೊಸ ಲೋಕದಲ್ಲಿ ಮತ್ತೆ ಜೀವಂತವಾಗಿ ಎದ್ದು ಬರಬಹುದು. (ಯೋಹಾ. 5:28, 29) ಅವರು “ಶಾಶ್ವತ ಜೀವ ಕೊಡೋ ರೊಟ್ಟಿ ನಾನೇ. ನನ್ನ ಹತ್ರ ಬರುವವನಿಗೆ ಹಸಿವೇ ಆಗಲ್ಲ” ಅಂತ ಯೇಸು ಹೇಳಿದ ಮಾತಿನ ಮೇಲೆ ಆಗ ನಂಬಿಕೆ ಇಡ್ಲೇಬೇಕು. ಯೇಸು ತನ್ನ ಪ್ರಾಣನ ನಮಗೋಸ್ಕರ ಬಿಡುಗಡೆ ಬೆಲೆಯಾಗಿ ಕೊಟ್ಟ ಅಂತನೂ ಅವರು ನಂಬಬೇಕಾಗುತ್ತೆ. ಅಲ್ಲಿ ಜೀವಂತವಾಗಿ ಎದ್ದು ಬರೋರು ಮತ್ತು ಅಲ್ಲಿ ಹುಟ್ಟೋ ಮಕ್ಕಳು ಯೆಹೋವ ದೇವರ ಬಗ್ಗೆ ಆತನ ಇಷ್ಟದ ಬಗ್ಗೆ ಕಲಿಬೇಕಾಗುತ್ತೆ. ಅವ್ರೆಲ್ರಿಗೂ ಕಲಿಸೋ ಸುಯೋಗ ನಮಗಿದೆ. ಇದ್ರಲ್ಲಿ ನಮಗೆ ಸಿಗೋ ಖುಷಿ ಯಾವ ರುಚಿರುಚಿಯಾದ ಊಟದಲ್ಲೂ ಸಿಗಲ್ಲ!

16. ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?

16 ನಾವು ಇಲ್ಲಿವರೆಗೂ ಯೋಹಾನ 6​ನೇ ಅಧ್ಯಾಯದಲ್ಲಿರೋ ಸ್ವಲ್ಪ ವಿಷ್ಯ ಮಾತ್ರ ನೋಡಿದ್ವಿ. ಆದ್ರೆ ‘ಶಾಶ್ವತ ಜೀವದ’ ಬಗ್ಗೆ ಇನ್ನೂ ತುಂಬ ವಿಷ್ಯಗಳನ್ನ ಯೇಸು ಈ ಅಧ್ಯಾಯದಲ್ಲಿ ಹೇಳಿದ್ದಾನೆ. ಆ ವಿಷ್ಯಗಳಿಗೆ ಆ ಯೆಹೂದ್ಯರು ಗಮನ ಕೊಡಬೇಕಿತ್ತು. ನಾವೂ ಈಗ ಗಮನ ಕೊಡಬೇಕು. ಅದಕ್ಕೆ ಮುಂದಿನ ಲೇಖನದಲ್ಲೂ ಯೋಹಾನ 6​ನೇ ಅಧ್ಯಾಯದಲ್ಲಿರೋ ಉಳಿದ ವಿಷ್ಯಗಳನ್ನ ನೋಡೋಣ.

ಗೀತೆ 18 ವಿಮೋಚನಾ ಬಲಿಗಾಗಿ ಚಿರಋಣಿ!