ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

4 | ಬೈಬಲ್‌ನಲ್ಲಿರೋ ಸಲಹೆಗಳು

4 | ಬೈಬಲ್‌ನಲ್ಲಿರೋ ಸಲಹೆಗಳು

ಬೈಬಲ್‌ ಹೀಗೆ ಹೇಳುತ್ತೆ: ‘ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳು ಸಹಾಯ ಮಾಡುತ್ತೆ.’—2 ತಿಮೊತಿ 3:16.

ಇದರ ಅರ್ಥ ಏನು

ಬೈಬಲ್‌ ಒಂದು ವೈದ್ಯಕೀಯ ಪುಸ್ತಕ ಅಲ್ಲ. ಹಾಗಿದ್ರು ಅದ್ರಲ್ಲಿರೋ ಸಲಹೆಗಳು ತುಂಬ ಪ್ರಯೋಜನ ತರುತ್ತೆ. ವಿಶೇಷವಾಗಿ ಮಾನಸಿಕ ಆರೋಗ್ಯದ ಸಮಸ್ಯೆಯನ್ನ ಎದುರಿಸ್ತಿರುವವರಿಗೆ ಇವು ತುಂಬ ಸಹಾಯ ಮಾಡುತ್ತೆ. ಕೆಲವು ಉದಾಹರಣೆಗಳನ್ನ ನೋಡೋಣ.

ಇದು ಹೇಗೆ ಸಹಾಯ ಮಾಡುತ್ತೆ

“ಆರೋಗ್ಯವಾಗಿ ಇರೋರಿಗೆ ವೈದ್ಯ ಬೇಕಾಗಿಲ್ಲ, ರೋಗಿಗಳಿಗೆ ಬೇಕು.”—ಮತ್ತಾಯ 9:12.

ಕೆಲವು ಸಲ ವೈದ್ಯರ ಸಹಾಯ ಪಡೆಯೋದು ಒಳ್ಳೇದು ಅಂತ ಬೈಬಲ್‌ ಕೂಡ ಒಪ್ಪುತ್ತೆ. ಹೀಗೆ ಸರಿಯಾದ ಮೂಲಗಳಿಂದ ಮತ್ತು ಒಳ್ಳೇ ಡಾಕ್ಟರ್‌ನ ಸಹಾಯ ಪಡೆದಿರೋದ್ರಿಂದ ಅನೇಕ ಜನ್ರು ತಮ್ಮ ಮಾನಸಿಕ ಆರೋಗ್ಯದ ಸಮಸ್ಯೆ ಬಗ್ಗೆ ಸರಿಯಾದ ಮಾಹಿತಿಯನ್ನ ಪಡೆದಿದ್ದಾರೆ.

‘ವ್ಯಾಯಾಮದಿಂದ ಪ್ರಯೋಜನ ಇದೆ.’ —1 ತಿಮೊತಿ 4:8.

ನಮ್ಮ ಆರೋಗ್ಯನ ಚೆನ್ನಾಗಿ ನೋಡ್ಕೊಳ್ಳೋಕೆ ಸಮಯ ಕೊಡಬೇಕು ಮತ್ತು ಪ್ರಯತ್ನ ಹಾಕಬೇಕು. ಇದ್ರಿಂದ ನಮ್ಮ ಮಾನಸಿಕ ಆರೋಗ್ಯನೂ ಚೆನ್ನಾಗಿರುತ್ತೆ. ಅದಕ್ಕೆ ವ್ಯಾಯಾಮ ಮಾಡಬೇಕು, ಪೌಷ್ಠಿಕ ಆಹಾರ ತಿನ್ನಬೇಕು ಮತ್ತು ಸಾಕಷ್ಟು ನಿದ್ರೆ ಮಾಡಬೇಕು.

“ಹರ್ಷಹೃದಯ ಒಳ್ಳೇ ಮದ್ದು, ಕುಗ್ಗಿದ ಮನಸ್ಸು ಒಬ್ಬನ ಶಕ್ತಿಯನ್ನೆಲ್ಲಾ ಹೀರಿಹಾಕುತ್ತೆ.” —ಜ್ಞಾನೋಕ್ತಿ 17:22.

ಮನಸ್ಸಿಗೆ ಖುಷಿ ಕೊಡೋ ಬೈಬಲ್‌ ಉದಾಹರಣೆಗಳನ್ನ ಓದೋದು ಮತ್ತು ಚಿಕ್ಕಚಿಕ್ಕ ಗುರಿಗಳನ್ನ ಇಡೋದು ನಮಗೆ ಖುಷಿ ತರುತ್ತೆ. ಜೀವನದಲ್ಲಾಗೋ ಒಳ್ಳೇ ವಿಷ್ಯಗಳಿಗೆ ಗಮನ ಕೊಡಿ. ಮುಂದೆ ಎಲ್ಲ ಸರಿಯಾಗುತ್ತೆ ಅಂತ ನಂಬಿ. ಆಗ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನ ನಿಭಾಯಿಸೋಕೆ ಸುಲಭ ಆಗುತ್ತೆ.

“ವಿನಮ್ರರ ಹತ್ರ ವಿವೇಕ ಇರುತ್ತೆ.”​—ಜ್ಞಾನೋಕ್ತಿ 11:2.

ಕೆಲವು ಸಲ ಎಲ್ಲ ಕೆಲಸಗಳನ್ನ ನಿಮ್ಮಿಂದ ಮಾಡೋಕಾಗದೇ ಇರಬಹುದು. ಆಗ ಸಹಾಯ ಪಡೆಯಿರಿ. ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಸಹಾಯ ಮಾಡೋ ಆಸೆ ಇದ್ರೂ ಹೇಗೆ ಸಹಾಯ ಮಾಡಬೇಕು ಅಂತ ಗೊತ್ತಿಲ್ಲದೇ ಇರಬಹುದು. ಹಾಗಾಗಿ ನಿಮಗೆ ಯಾವ ಸಹಾಯ ಬೇಕು ಅಂತ ಅವ್ರ ಹತ್ರ ಹೇಳಿ. ಹಾಗಂತ ಅವ್ರೇ ಎಲ್ಲನೂ ಮಾಡಬೇಕು ಅಂತ ಅಂದ್ಕೊಬೇಡಿ. ಅವರು ಏನೇ ಮಾಡಿದ್ರೂ ಅದಕ್ಕೆ ಥ್ಯಾಂಕ್ಸ್‌ ಹೇಳಿ.

ಮಾನಸಿಕ ಆರೋಗ್ಯದ ಸಮಸ್ಯೆ ಇರೋರಿಗೆ ಬೈಬಲಿನ ಸಲಹೆಗಳು ಹೇಗೆ ಸಹಾಯ ಮಾಡ್ತಿದೆ?

“ನನ್ನ ಆರೋಗ್ಯದಲ್ಲಿ ಏನೋ ಸಮಸ್ಯೆ ಇದೆ ಅಂತ ನನಗೆ ಅನಿಸ್ತಿತ್ತು. ಹಾಗಾಗಿ ಡಾಕ್ಟರ್‌ ಹತ್ರ ಹೋದೆ. ಅವರು ಸಮಸ್ಯೆ ಏನು ಅಂತ ಕಂಡುಹಿಡಿದ್ರು. ಹೀಗೆ ನನ್ನ ಮಾನಸಿಕ ಆರೋಗ್ಯದ ಬಗ್ಗೆ ತಿಳ್ಕೊಂಡಿದ್ರಿಂದ ಅದನ್ನ ನಿಭಾಯಿಸೋಕೆ ವೈದ್ಯಕೀಯ ಸಹಾಯವನ್ನೂ ನಾನು ಪಡೆದೆ. ಹೀಗೆ ಮಾಡಿದ್ರಿಂದ ನನ್ನ ಆರೋಗ್ಯ ಸ್ವಲ್ಪಮಟ್ಟಿಗೆ ಚೆನ್ನಾಗಿದೆ.”—ನವ್ಯಾ, a ಇವ್ರಿಗೆ ಬೈಪೋಲಾರ್‌ ಡಿಸಾರ್ಡರ್‌ ಇದೆ.

“ನಾನು ದಿನಾ ಬೆಳಗ್ಗೆ ನನ್ನ ಹೆಂಡತಿ ಜೊತೆ ಬೈಬಲ್‌ ಓದ್ತೀನಿ. ಹೀಗೆ ಮಾಡೋದ್ರಿಂದ ದಿನಪೂರ್ತಿ ಒಳ್ಳೇ ವಿಷ್ಯಗಳ ಬಗ್ಗೆ ಯೋಚನೆ ಮಾಡ್ತಾ ಇರೋಕೆ ಆಗುತ್ತೆ. ಆದ್ರೆ ಎಷ್ಟೋ ದಿನಗಳು ನನಗೆ ತುಂಬಾ ಕಷ್ಟ ಆಗುತ್ತೆ. ಆಗ ಕೆಲವು ವಚನಗಳು ನನಗೆ ಸಹಾಯ ಮಾಡುತ್ತೆ.”—ಪೀಟರ್‌, ಇವ್ರಿಗೆ ಖಿನ್ನತೆ ಇದೆ.

“ನನ್ನ ಸಮಸ್ಯೆ ಬಗ್ಗೆ ಬೇರೆಯವ್ರ ಹತ್ರ ಹೇಳೋಕೆ ನನಗೆ ತುಂಬ ಕಷ್ಟ ಆಗ್ತಿತ್ತು. ಯಾಕಂದ್ರೆ ನನಗೆ ತುಂಬ ನಾಚಿಕೆ ಆಗ್ತಿತ್ತು. ಆದ್ರೆ ನನ್ನ ಕ್ಲೋಸ್‌ ಫ್ರೆಂಡ್‌ ನನ್ನನ್ನ ಚೆನ್ನಾಗಿ ಅರ್ಥಮಾಡ್ಕೊಂಡಳು. ನನಗೇನು ಅನಿಸ್ತಿದೆ ಅಂತ ತಿಳಿಯೋಕೆ ತುಂಬ ಪ್ರಯತ್ನಪಟ್ಟಳು. ಈ ಸಮಸ್ಯೆ ಎದುರಿಸ್ತಿರೋದು ನಾನೊಬ್ಬಳೇ ಅಲ್ಲ ಅಂತ ನನಗೆ ಅರ್ಥ ಮಾಡಿಸಿದಳು.”—ಜ್ಯೋತಿ, ಇವ್ರಿಗೆ ತಿನ್ನುವ ಸಮಸ್ಯೆ ಇದೆ.

“ಜಾಸ್ತಿ ಕೆಲಸ ಮಾಡದೆ, ವಿಶ್ರಾಂತಿ ತಗೊಳ್ಳೋಕೆ ಬೈಬಲ್‌ ನನಗೆ ಸಹಾಯ ಮಾಡಿದೆ. ನನ್ನ ಭಾವನೆಗಳನ್ನ ನಿಯಂತ್ರಿಸೋಕೂ ಬೈಬಲ್‌ನಲ್ಲಿರೋ ವಿವೇಕದ ಮಾತುಗಳು ಸಹಾಯ ಮಾಡಿದೆ.”—ತಿಮೊತಿ, ಇವ್ರಿಗೆ ಒ.ಸಿ.ಡಿ ಇದೆ.

a ಕೆಲವು ಹೆಸರುಗಳನ್ನ ಬದಲಾಯಿಸಲಾಗಿದೆ.