ಕಾವಲಿನಬುರುಜು ನಂ. 3 2018 | ದೇವರಿಗೆ ನಿಮ್ಮ ಬಗ್ಗೆ ಚಿಂತೆ ಇದೆಯಾ?
ದೇವರಿಗೆ ನಿಮ್ಮ ಬಗ್ಗೆ ಚಿಂತೆ ಇದೆಯಾ?
ಒಂದು ವಿಪತ್ತು ಸಂಭವಿಸುವಾಗ ಅಥವಾ ಜನರು ನರಳಿ ಸಾಯುವಾಗ, ದೇವರು ಇದನ್ನೆಲ್ಲಾ ನೋಡುತ್ತಾನಾ ಅಥವಾ ಆತನಿಗೆ ಇದರ ಬಗ್ಗೆ ಚಿಂತೆ ಇದೆಯಾ ಎಂಬ ಸಂಶಯ ನಮಗೆ ಬರಬಹುದು. ಆದರೆ ಬೈಬಲ್ ಹೀಗನ್ನುತ್ತದೆ:
“ಯೆಹೋವನ ಕಣ್ಣುಗಳು ನೀತಿವಂತರ ಮೇಲಿವೆ ಮತ್ತು ಆತನ ಕಿವಿಗಳು ಅವರ ಯಾಚನೆಯ ಕಡೆಗಿವೆ; ಆದರೆ ಯೆಹೋವನ ಮುಖವು ಕೆಟ್ಟದ್ದನ್ನು ಮಾಡುವವರ ವಿರುದ್ಧವಾಗಿದೆ.”—1 ಪೇತ್ರ 3:12.
ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ದೇವರು ನಮಗೆ ಹೇಗೆ ಸಹಾಯ ಮಾಡುತ್ತಾನೆ ಮತ್ತು ಆತನು ಎಲ್ಲ ಕಷ್ಟಗಳನ್ನು ತೆಗೆದುಹಾಕಲು ಏನು ಮಾಡಲಿದ್ದಾನೆ ಎಂದು ತಿಳಿಸುತ್ತದೆ.
“ದೇವರು ಎಲ್ಲಿದ್ದ?”
ಒಂದು ದುರಂತ ಸಂಭವಿಸಿದಾಗ ದೇವರಿಗೆ ನನ್ನ ಬಗ್ಗೆ ವೈಯಕ್ತಿಕ ಚಿಂತೆಯಿದೆಯಾ ಎಂಬ ಪ್ರಶ್ನೆ ನಿಮಗೆ ಬಂದಿದೆಯಾ?
ದೇವರು ನಿಮ್ಮನ್ನು ಗಮನಿಸುತ್ತಾನಾ?
ನಮ್ಮ ಬಗ್ಗೆ ದೇವರಿಗೆ ತುಂಬ ಆಸಕ್ತಿ ಇದೆ ಎನ್ನಲು ಯಾವ ಪುರಾವೆಯಿದೆ?
ದೇವರು ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾನಾ?
ನಮ್ಮ ಬಗ್ಗೆ ಮತ್ತು ನಮ್ಮ ವಂಶವಾಹಿಗಳ ರಚನೆಯ ಬಗ್ಗೆ ಆತನಿಗಿರುವ ಈ ಅಪೂರ್ವವಾದ ಜ್ಞಾನ ಆತನು ನಮ್ಮನ್ನು ಚಿಕ್ಕಪುಟ್ಟ ವಿಷಯದಲ್ಲೂ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ ಎಂಬ ಭರವಸೆ ಕೊಡುತ್ತದೆ.
ದೇವರಿಗೆ ಪರಾನುಭೂತಿ ಇದೆಯಾ?
ದೇವರು ನಮ್ಮನ್ನು ಗಮನಿಸುತ್ತಾನೆ, ನಮ್ಮನ್ನೂ ನಮ್ಮ ನೋವನ್ನೂ ಅರ್ಥಮಾಡಿಕೊಳ್ಳುತ್ತಾನೆ ಎಂದು ಬೈಬಲ್ ಆಶ್ವಾಸನೆ ನೀಡುತ್ತದೆ.
ಕಷ್ಟಗಳು—ದೇವರು ಕೊಡುವ ಶಿಕ್ಷೆಯಾ?
ಜನರ ಪಾಪಕ್ಕೆ ಶಿಕ್ಷೆಯಾಗಿ ದೇವರು ಕಾಯಿಲೆ ಮತ್ತು ದುರಂತಗಳು ಬರುವಂತೆ ಮಾಡುತ್ತಾನಾ?
ಕಷ್ಟಗಳಿಗೆ ಯಾರು ಕಾರಣ?
ಮಾನವರ ಕಷ್ಟಗಳಿಗೆ ಇರುವ ಮೂರು ಮುಖ್ಯ ಕಾರಣಗಳನ್ನು ದೇವರ ವಾಕ್ಯವಾದ ಬೈಬಲ್ ತಿಳಿಸುತ್ತದೆ.
ದೇವರು ಎಲ್ಲ ಕಷ್ಟಗಳನ್ನು ಬೇಗನೆ ಕೊನೆಗೊಳಿಸಲಿದ್ದಾನೆ!
ದೇವರು ಬೇಗನೆ ಎಲ್ಲ ಕಷ್ಟ, ಅನ್ಯಾಯಗಳನ್ನು ತೆಗೆದುಹಾಕಲಿದ್ದಾನೆ ಎಂದು ನಂಬಲು ನಮಗೇನು ಆಧಾರವಿದೆ?
ದೇವರು ನಿಮ್ಮ ಬಗ್ಗೆ ಚಿಂತಿಸುವುದರಿಂದ ನಿಮಗಾಗುವ ಪ್ರಯೋಜನ
ಅದ್ಭುತ ಭವಿಷ್ಯ ಕೊಡುತ್ತೇನೆಂದು ದೇವರು ಕೊಟ್ಟ ಮಾತಿನಲ್ಲಿ ನಂಬಿಕೆಯನ್ನಿಡಲು ಬೈಬಲ್ ನಮಗೆ ಸಹಾಯ ಮಾಡುತ್ತದೆ.
ನಿಮ್ಮ ಕಷ್ಟಗಳ ಬಗ್ಗೆ ದೇವರಿಗೆ ಹೇಗನಿಸುತ್ತದೆ?
ದೇವರಿಗೆ ಕಷ್ಟಗಳನ್ನು ನೋಡುವಾಗ ಹೇಗನಿಸುತ್ತದೆ ಎಂದು ತಿಳಿದುಕೊಳ್ಳಲು ಬೈಬಲಿನ ಈ ವಚನಗಳು ಸಹಾಯಮಾಡುತ್ತವೆ.