ದೇವರ ಪವಿತ್ರ ಗ್ರಂಥ ಬದಲಾಗಿಲ್ಲ
ಕೆಲವರು ಪವಿತ್ರ ಗ್ರಂಥದಲ್ಲಿರೋ ವಿಷಯ ಬದಲಾಗಿದೆ ಅಂತ ಹೇಳ್ತಾರೆ. ಆದ್ರೆ ಪವಿತ್ರ ಗ್ರಂಥದಲ್ಲಿ ಇರೋ ವಿಷಯ ಬದಲಾಗಲ್ಲ ‘ಸದಾಕಾಲ ಇರುತ್ತೆ’ ಅಂತ ದೇವರು ಯೆಶಾಯ ಪ್ರವಾದಿಯ ಮೂಲಕ ತಿಳಿಸಿದ್ದಾನೆ. (ಯೆಶಾಯ 40:8) ಪವಿತ್ರ ಗ್ರಂಥದಲ್ಲಿ ಇರೋ ಸಂದೇಶ ಮೊದಲಿದ್ದ ಹಾಗೇ ಇದೆ ಬದಲಾಗಿಲ್ಲ ಅಂತ ನಾವು ಹೇಗೆ ಹೇಳಬಹುದು?
ದೇವರಿಗೆ ತನ್ನ ಪವಿತ್ರ ಗ್ರಂಥನ ಕಾಪಾಡೋ ಶಕ್ತಿ ಇದೆ, ಅದನ್ನ ಯಾವತ್ತೂ ಬದಲಾಗೋಕೆ ಬಿಡಲ್ಲ. ಹಿಂದಿನ ಕಾಲದಲ್ಲಿ ಈಗ ಇರೋ ಹಾಗೆ ಪ್ರಿಂಟಿಂಗ್ ಮಷೀನ್ ಇರಲಿಲ್ಲ. ಆಗ ಪವಿತ್ರ ಗ್ರಂಥನ ಕೈಯಲ್ಲೇ ಬರೆದು ಹಲವು ಪ್ರತಿಗಳನ್ನ ಮಾಡುತ್ತಿದ್ರು. ಇದನ್ನ ಎಷ್ಟು ಜಾಗರೂಕತೆಯಿಂದ ಮಾಡುತ್ತಿದ್ರು ಅಂದ್ರೆ ಒಂದೊಂದು ಅಕ್ಷರನೂ ಲೆಕ್ಕ ಹಾಕುತ್ತಿದ್ರು. ಹೀಗೆ ಮಾಡುವಾಗ ಯಾವುದೇ ವಿಷ್ಯ ಬಿಟ್ಟುಹೋಗದೆ ಇರೋ ತರ, ಬದಲಾಗದೇ ಇರೋ ತರ ಅಥವಾ ಹೊಸ ವಿಷಯಗಳು ಸೇರದೇ ಇರೋ ತರ ನೋಡ್ಕೋತಿದ್ರು. ನಕಲು ಮಾಡುವಾಗ ಏನಾದ್ರು ತಪ್ಪಾಗಿದ್ರೆ ತೀರ ಚಿಕ್ಕ-ಪುಟ್ಟ ತಪ್ಪುಗಳು ಆಗಿರಬಹುದು ಅಷ್ಟೇ.
ಈಗ ಇರೋ ಪವಿತ್ರ ಗ್ರಂಥ ಬದಲಾಗಿಲ್ಲ ಅನ್ನೋದಕ್ಕೆ ರುಜುವಾತಿದೆ
ಪವಿತ್ರ ಗ್ರಂಥದ ಪ್ರಾಚೀನ ಸುರುಳಿಯ ಸಾವಿರಾರು ಪ್ರತಿಗಳು ಇವೆ. ಹಾಗಾಗಿ ನಕಲು ಮಾಡಿದವರಲ್ಲಿ ಒಬ್ಬರು ಚಿಕ್ಕ ತಪ್ಪು ಮಾಡಿದ್ರೂನೂ ಬೇರೆಯವರ ಪ್ರತಿಗಳ ಜೊತೆ ಹೋಲಿಸಿ ನೋಡಿ ಯಾವುದು ಸರಿ ಅಂತ ಕಂಡುಹಿಡೀಬಹುದು.—ಹೆಚ್ಚಿನ ಮಾಹಿತಿಗಾಗಿ jw.org ವೆಬ್ಸೈಟ್ನಲ್ಲಿ “ಬೈಬಲಲ್ಲಿ ಇರೋ ವಿಷಯ ಬದಲಾಗಿದ್ಯಾ ಅಥವಾ ತಿರುಚಲಾಗಿದ್ಯಾ?” ಲೇಖನ ನೋಡಿ.
ಉದಾಹರಣೆಗೆ ಇಸವಿ 1947 ರಲ್ಲಿ ಮೃತ ಸಮುದ್ರದ ಬಳಿ ಕೆಲವು ಸುರುಳಿಗಳು ಸಿಕ್ಕಿದವು. ಅದರಲ್ಲಿ ಪವಿತ್ರ ಗ್ರಂಥದ ಕೆಲವು ಭಾಗಗಳು ಇದ್ವು. ಇವು ಸುಮಾರು ಎರಡು ಸಾವಿರ ವರ್ಷ ಹಳೇದು. ಪರಿಣಿತರು ಆ ಸುರುಳಿಗಳನ್ನ ಈಗ ಇರೋ ಪವಿತ್ರ ಗ್ರಂಥದ ಜೊತೆ ಹೋಲಿಸಿ ನೋಡಿದಾಗ ಅವ್ರು ಒಂದು ಸತ್ಯ ಕಂಡುಹಿಡುದ್ರು.
ಈಗ ಇರೋ ಪವಿತ್ರ ಗ್ರಂಥದ ವಿಷಯನೂ ಆ ಹಳೇ ಸುರುಳಿಗಳಲ್ಲಿರೋ ವಿಷಯನೂ ಒಂದೇ ಅಂತ ಕಂಡುಹಿಡಿದ್ರು. * ಇದು ದೇವರು ಇಂದಿನವರೆಗೂ ತನ್ನ ಪವಿತ್ರ ಗ್ರಂಥನ ಸುರಕ್ಷಿತವಾಗಿ ಕಾಪಾಡುತ್ತಾ ಬಂದಿದ್ದಾನೆ ಅಂತ ತೋರಿಸುತ್ತೆ.
ಹಾಗಾಗಿ ಪವಿತ್ರ ಗ್ರಂಥ ಬದಲಾಗಿಲ್ಲ, ಅದರಲ್ಲಿ ಇರೋ ಸಂದೇಶ ದೇವರದ್ದು ಅನ್ನೋ ವಿಷಯದ ಮೇಲೆ ನಾವು ದೃಢ ಭರವಸೆ ಇಡಬಹುದು. ಮುಂದಿನ ಲೇಖನದಲ್ಲಿ ಪ್ರವಾದಿಗಳಿಂದ ನಾವು ದೇವರ ಬಗ್ಗೆ ಏನು ಕಲಿಬಹುದು ಅಂತ ನೋಡೋಣ.
^ ಪ್ಯಾರ. 7 ಗೇಜ಼ ವರ್ಮಿಸ್ ಅವರು ಬರೆದಿರೋ ದ ಕಂಪ್ಲೀಟ್ ಡೆಡ್ ಸೀ ಸ್ಕ್ರಾಲ್ಸ್ ಪುಸ್ತಕದ ಪುಟ 16.