ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಶ್ವ-ವೀಕ್ಷಣೆ

ವಿಶ್ವ-ವೀಕ್ಷಣೆ

ಅಮೆರಿಕ

ಪೊಲೀಸರು ಕಾರ್‌ಗಳನ್ನು ಬೆನ್ನಟ್ಟಿ ಹೋಗುವಾಗ ಆಗಬಹುದಾದ ಅಪಾಯಗಳನ್ನು ತಡೆಯಲು ತಂತ್ರಜ್ಞಾನ ಬಳಸುತ್ತಿದ್ದಾರೆ. ಉದಾಹರಣೆಗೆ, ಅಪರಾಧಿಯ ಕಾರ್‌ ಎಲ್ಲಿ ಹೋಗುತ್ತಿದೆ ಎಂದು ಜಿಪಿಎಸ್‌ ಸಹಾಯದಿಂದ ಸುಳಿವು ಕೊಡುವ ಸಾಧನ ಒಂದಿದೆ. ಇದನ್ನು ಉಡಾಯಿಸುವ ಒಂದು ಯಂತ್ರವನ್ನು ಪೊಲೀಸರ ಕಾರ್‌ಗಳಿಗೆ ಅಳವಡಿಸಲಾಗುತ್ತದೆ. ಉಡಾಯಿಸುವಾಗ ಈ ಸಾಧನ ಅಪರಾಧಿಯ ಕಾರ್‌ಗೆ ಅಂಟಿಕೊಳ್ಳುತ್ತದೆ. ಆಗ ಪೊಲೀಸರು ಆ ಕಾರನ್ನು ಹಿಡಿಯಲು ಅತಿಯಾದ ವೇಗದಲ್ಲಿ ಬೆನ್ನಟ್ಟಬೇಕಾಗಿಲ್ಲ.

ಭಾರತ

ವರದಕ್ಷಿಣೆಯ ಕಾರಣ ಪ್ರತಿ ಗಂಟೆಗೆ ಒಬ್ಬ ಮಹಿಳೆಯನ್ನು ಕೊಲ್ಲಲಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ವರದಕ್ಷಿಣೆಯನ್ನು ಕೊಡುವುದು ಅಥವಾ ತೆಗೆದುಕೊಳ್ಳುವುದು ಕಾನೂನಿನ ಪ್ರಕಾರ ತಪ್ಪು. ಆದರೂ ಹೆಣ್ಣಿನ ಕಡೆಯವರು ಕೊಟ್ಟ ವರದಕ್ಷಿಣೆ ಕಡಿಮೆಯಾಯಿತು ಎಂದು ವರ ಅಥವಾ ಅವನ ಕುಟುಂಬದವರಿಗೆ ಅನಿಸಿದ್ದರಿಂದ 2012ರಲ್ಲಿ 8,200ಷ್ಟು ಮಹಿಳೆಯರ ಕೊಲೆ ಆಗಿದೆ.

ಸ್ವಿಟ್ಜರ್ಲೆಂಡ್

ಆಲ್ಪೈನ್‌ ಹಕ್ಕಿಗಳು ಮೊಟ್ಟೆ ಇಡುವ ಜಾಗಕ್ಕೆ ಬಂದಾಗ ಅದರಲ್ಲಿ ಮೂರು ಹಕ್ಕಿಗಳಿಗೆ ಚಿಕ್ಕ ಸಂವೇದಕ ಸಾಧನಗಳನ್ನು ಜೋಡಿಸಲಾಯಿತು. ಇದರಿಂದ ತಿಳಿದುಬಂದ ವಿಷಯ ಏನೆಂದರೆ, ಆಫ್ರಿಕ ದೇಶಕ್ಕೆ ವಲಸೆ ಹೋಗುವಾಗ ಈ ಹಕ್ಕಿಗಳು 200ಕ್ಕೂ ಹೆಚ್ಚು ದಿನ ಎಲ್ಲೂ ನಿಲ್ಲದೆ ಹಾರಿದವು. ಇದಕ್ಕೂ ಮುಂಚೆ ಇಷ್ಟು ದೂರ ಬಿಡುವಿಲ್ಲದೆ ವಲಸೆ ಹೋಗಿರುವುದು ಜಲಚರಗಳು ಮಾತ್ರ ಎಂದು ವರದಿಸಲಾಗಿತ್ತು.

ಹಾರ್ನ್‌ ಆಫ್‌ ಆಫ್ರಿಕ

ಏಪ್ರಿಲ್‌ 2005ರಿಂದ ಡಿಸೆಂಬರ್‌ 2012ರ ಮಧ್ಯದಲ್ಲಿ ಹಾರ್ನ್‌ ಆಫ್‌ ಆಫ್ರಿಕದ ಕರಾವಳಿ ಪ್ರದೇಶದ ಹತ್ತಿರ ಇರುವ ಸಮುದ್ರದಲ್ಲಿ ಕಡಲುಗಳ್ಳರು 179 ಹಡಗುಗಳನ್ನು ಅಪಹರಿಸಿದರು. ವರ್ಲ್ಡ್ ಬ್ಯಾಂಕ್‍ನ ಅಧ್ಯಯನ ತಿಳಿಸುವಂತೆ ಈ ಅಪರಾಧದಲ್ಲಿ ಒಳಗೂಡಿದ್ದ ಕಡಲುಗಳ್ಳರಿಗೆ 413 ಮಿಲಿಯನ್‌ ಡಾಲರ್‌ (ಸುಮಾರು 2,500 ಕೋಟಿ ರೂಪಾಯಿ) ಕೊಟ್ಟು ಹಡಗುಗಳನ್ನು ಬಿಡಿಸಲಾಯಿತು. (g14-E 10)