ಪಶ್ಚಾತ್ತಾಪ
ಎಲ್ಲಾ ಮನುಷ್ಯರೂ ತಮ್ಮ ತಪ್ಪಿಗೆ ಪಶ್ಚಾತ್ತಾಪಪಟ್ಟು ದೇವರ ಹತ್ರ ಕ್ಷಮೆ ಕೇಳಬೇಕು ಯಾಕೆ?
ಇದನ್ನೂ ನೋಡಿ: ಅಕಾ 26:20
-
ಬೈಬಲ್ ಉದಾಹರಣೆಗಳು:
-
ಲೂಕ 18:9-14—ನಮ್ಮ ತಪ್ಪುಗಳನ್ನ ದೇವರ ಹತ್ರ ಒಪ್ಕೊಂಡು ಸಹಾಯ ಮಾಡಪ್ಪಾ ಅಂತ ಬೇಡ್ಕೊಬೇಕು ಅನ್ನೋದನ್ನ ಯೇಸು ಉದಾಹರಣೆ ಕೊಟ್ಟು ವಿವರಿಸಿದ್ದಾನೆ
-
ರೋಮ 7:15-25—ಪೌಲ ಅಪೊಸ್ತಲನಾಗಿದ್ದ, ದೇವರ ಮೇಲೆ ಅವನಿಗೆ ತುಂಬ ನಂಬಿಕೆ ಇತ್ತು. ಆದ್ರೂ ಕೆಟ್ಟ ಆಸೆಗಳ ವಿರುದ್ಧ ಹೋರಾಡಬೇಕಾಗಿರೋದನ್ನ ನೆನಸ್ಕೊಂಡಾಗ ಅವನಿಗೆ ಬೇಜಾರಾಗ್ತಿತ್ತು
-
ಪಶ್ಚಾತ್ತಾಪ ಪಡೋ ಜನರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?
ಯೆಹೆ 33:11; ರೋಮ 2:4; 2ಪೇತ್ರ 3:9
-
ಬೈಬಲ್ ಉದಾಹರಣೆಗಳು:
-
ಲೂಕ 15:1-10—ಒಬ್ಬ ಪಾಪಿ ಪಶ್ಚಾತ್ತಾಪ ಪಟ್ಟಾಗ ಯೆಹೋವ ದೇವರಿಗೆ ಮತ್ತು ದೇವದೂತರಿಗೆ ತುಂಬ ಸಂತೋಷ ಆಗುತ್ತೆ ಅಂತ ಯೇಸು ಉದಾಹರಣೆಗಳನ್ನ ಕೊಟ್ಟು ವಿವರಿಸಿದನು
-
ಲೂಕ 19:1-10—ತೆರಿಗೆ ವಸೂಲಿ ಮಾಡ್ತಿದ್ದ ಜಕ್ಕಾಯ ಜನ್ರಿಂದ ಜಾಸ್ತಿ ದುಡ್ಡು ಕೀಳ್ತಿದ್ದ, ಆದ್ರೆ ಅವನು ಪಶ್ಚಾತ್ತಾಪ ಪಟ್ಟಾಗ ಯೇಸು ಅವನನ್ನ ಕ್ಷಮಿಸಿದನು
-
ನಾವು ನಿಜವಾಗ್ಲೂ ಪಶ್ಚಾತ್ತಾಪ ಪಟ್ಟಿದ್ದೀವಿ ಅಂತ ಹೇಗೆ ತೋರಿಸಬಹುದು?
ಯೆಹೆ 18:21-23; ಅಕಾ 3:19; ಎಫೆ 4:17, 22-24; ಕೊಲೊ 3:5-10
ಇದನ್ನೂ ನೋಡಿ: 1ಪೇತ್ರ 4:1-3
ಮನಸಾರೆ ಪಶ್ಚಾತ್ತಾಪ ಪಡೋ ವ್ಯಕ್ತಿ ಸರಿಯಾದ ಜ್ಞಾನ ಪಡ್ಕೊಳ್ಳೋದು ತುಂಬ ಮುಖ್ಯ ಯಾಕೆ?
ರೋಮ 12:2; ಕೊಲೊ 3:9, 10; 2ತಿಮೊ 2:25
-
ಬೈಬಲ್ ಉದಾಹರಣೆಗಳು:
-
ಅಕಾ 17:29-31—‘ಅಥೆನ್ಸಿನ ಜನರು ಗೊತ್ತಿಲ್ಲದೆ ಮೂರ್ತಿಪೂಜೆ ಮಾಡ್ತಿದ್ದಾರೆ, ಆದ್ರೆ ಅವರು ತಿದ್ಕೊಂಡು ಬದಲಾಗಬೇಕು’ ಅಂತ ಪೌಲ ಹೇಳಿದ
-
1ತಿಮೊ 1:12-15—ಯೇಸು ಬಗ್ಗೆ ಸರಿಯಾಗಿ ತಿಳ್ಕೊಳ್ಳೋ ಮುಂಚೆ ಪೌಲ ಗೊತ್ತಿಲ್ಲದೆ ದೊಡ್ಡ ದೊಡ್ಡ ತಪ್ಪುಗಳನ್ನ ಮಾಡಿದ
-
ಪಶ್ಚಾತ್ತಾಪ ಪಡೋದು ತುಂಬ ಮುಖ್ಯನಾ?
ನಾವು ಪದೇ ಪದೇ ತಪ್ಪು ಮಾಡಿದ್ರೂ ಮನಸಾರೆ ಪಶ್ಚಾತ್ತಾಪ ಪಟ್ರೆ ಯೆಹೋವ ಕ್ಷಮಿಸ್ತಾನೆ ಅಂತ ನಂಬಬಹುದು. ಯಾಕೆ?
ತಪ್ಪು ಒಪ್ಕೊಂಡು ತಿದ್ಕೊಳ್ಳೋ ಜನ್ರನ್ನ ಯೆಹೋವ ಹೇಗೆ ನೋಡ್ತಾನೆ?
ಕೀರ್ತ 32:5; ಜ್ಞಾನೋ 28:13; 1ಯೋಹಾ 1:9
ಇದನ್ನೂ ನೋಡಿ: “ಕರುಣೆ”
ಪಶ್ಚಾತ್ತಾಪ ಪಡೋದು ಅಂದ್ರೆ ‘ತಪ್ಪು ಮಾಡಿಬಿಟ್ಟೆ, ಕ್ಷಮಿಸಿಬಿಡಿ’ ಅಂತ ಹೇಳೋದು ಮತ್ತು ಬೇಜಾರ್ ಮಾಡ್ಕೊಳ್ಳೋದಷ್ಟೇ ಅಲ್ಲ ಅಂತ ನಮಗೆ ಹೇಗೆ ಗೊತ್ತು?
2ಪೂರ್ವ 7:14; ಜ್ಞಾನೋ 28:13; ಯೆಹೆ 18:30, 31; 33:14-16; ಮತ್ತಾ 3:8; ಅಕಾ 3:19; 26:20
-
ಬೈಬಲ್ ಉದಾಹರಣೆಗಳು:
-
2ಪೂರ್ವ 33:1-6, 10-16—ತುಂಬ ವರ್ಷಗಳಿಂದ ಕೆಟ್ಟವನಾಗಿದ್ದ ಮನಸ್ಸೆ ಮನಸಾರೆ ಪಶ್ಚಾತ್ತಾಪ ಪಟ್ಟ, ತನ್ನನ್ನೇ ತಗ್ಗಿಸ್ಕೊಂಡ, ಪ್ರಾರ್ಥನೆ ಮಾಡ್ತಾನೇ ಇದ್ದ, ತಪ್ಪು ಮಾಡೋದನ್ನ ಬಿಟ್ಟುಬಿಟ್ಟ
-
ಕೀರ್ತ 32:1-6; 51:1-4, 17—ದಾವೀದ ಪಾಪ ಮಾಡಿ ದೇವರ ಮನಸ್ಸಿಗೆ ತುಂಬ ನೋವು ಮಾಡಿಬಿಟ್ಟೆ ಅಂತ ಪಶ್ಚಾತ್ತಾಪ ಪಟ್ಟ, ತಪ್ಪನ್ನ ಒಪ್ಕೊಂಡ, ಪ್ರಾರ್ಥನೆ ಮಾಡಿದ
-
ನಮಗೆ ನೋವು ಮಾಡಿದವರು ಪಶ್ಚಾತ್ತಾಪ ಪಟ್ಟಾಗ ನಾವು ಅವ್ರನ್ನ ಯಾಕೆ ಕ್ಷಮಿಸಬೇಕು?
ಮತ್ತಾ 6:14, 15; 18:21, 22; ಲೂಕ 17:3, 4
ಇದನ್ನೂ ನೋಡಿ: “ಕ್ಷಮಿಸೋದು”