ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಚಯ ಮತ್ತು ಮುಖ್ಯಾಂಶಗಳು

ಪರಿಚಯ ಮತ್ತು ಮುಖ್ಯಾಂಶಗಳು

ಗಲಿಲಾಯ ಸಮುದ್ರದ ತೀರದಲ್ಲಿ ಕಪೆರ್ನೌಮ್‌ ಅನ್ನೋ ಪಟ್ಟಣ ಇತ್ತು. ಅದ್ರ ಹತ್ರ ಇದ್ದ ಬೆಟ್ಟದ ಮೇಲೆ ಯೇಸು ಒಂದು ಭಾಷಣ ಕೊಟ್ಟನು. ಅದ್ರಲ್ಲಿ ಜನ್ರಿಗೆ ಸಂತೋಷವಾಗಿ ಬದುಕೋಕೆ ಬೇಕಾದ ಒಳ್ಳೇ ಸಲಹೆಗಳಿತ್ತು. ಸಾಮಾನ್ಯವಾಗಿ ಜನ್ರು ಅದನ್ನ ಬೆಟ್ಟದ ಭಾಷಣ ಅಂತ ಕರೀತಾರೆ. ಆ ಭಾಷಣ ನಮಗೆ ಮತ್ತಾಯ ಪುಸ್ತಕದ 5-7ನೇ ಅಧ್ಯಾಯದಲ್ಲಿ ಸಿಗುತ್ತೆ. ಯೇಸು ಕೊಟ್ಟ ಆ ಸಲಹೆಗಳನ್ನ ಪಾಲಿಸಿ ನೀವೂ ಜೀವನದಲ್ಲಿ ಖುಷಿಯಾಗಿರಬೇಕು ಅಂತ ಆ ಇಡೀ ಭಾಷಣವನ್ನ ಈ ಕಿರುಹೊತ್ತಗೆಯಲ್ಲಿ ಕೊಡಲಾಗಿದೆ.

  • ಅಧ್ಯಾಯ 5

    • ಬೆಟ್ಟದ ಮೇಲೆ ಯೇಸು ಕಲಿಸೋಕೆ ಶುರುಮಾಡಿದನು (1, 2)

    • ಖುಷಿ ತರೋ 9 ವಿಷ್ಯಗಳು (3-12)

    • ಉಪ್ಪು, ಬೆಳಕು (13-16)

    • ಯೇಸು ನಿಯಮ ಪುಸ್ತಕದ ಮಾತುಗಳನ್ನ ನೆರವೇರಿಸೋಕೆ ಬಂದಿದ್ದಾನೆ (17-20)

    • ಕೋಪ (21-26), ಲೈಂಗಿಕ ಅನೈತಿಕತೆ (27-30), ವಿಚ್ಛೇದನ (31, 32), ಆಣೆ (33-37), ಸೇಡು (38-42), ಶತ್ರುಗಳ ಮೇಲೆ ಪ್ರೀತಿ (43-48) ಅನ್ನೋ ವಿಷ್ಯಗಳ ಬಗ್ಗೆ ಬುದ್ಧಿವಾದ

  • ಅಧ್ಯಾಯ 6

    • ಒಳ್ಳೇ ಕೆಲಸಗಳನ್ನ ಮಾಡಿ ಡಂಗುರ ಸಾರಬೇಡಿ (1-4)

    • ಹೇಗೆ ಪ್ರಾರ್ಥನೆ ಮಾಡಬೇಕು (5-15)

      • ಮಾದರಿ ಪ್ರಾರ್ಥನೆ (9-13)

    • ಉಪವಾಸ (16-18)

    • ಭೂಮಿಯಲ್ಲಿ, ಸ್ವರ್ಗದಲ್ಲಿ ಇರೋ ಆಸ್ತಿಪಾಸ್ತಿ (19-24)

    • ಚಿಂತೆ ಮಾಡೋದನ್ನ ಬಿಟ್ಟುಬಿಡಿ (25-34)

      • ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ (33)

  • ಅಧ್ಯಾಯ 7

    • ತಪ್ಪು ಹುಡುಕೋದನ್ನ ನಿಲ್ಲಿಸಿ (1-6)

    • ಕೇಳ್ತಾ ಇರಿ, ಹುಡುಕ್ತಾ ಇರಿ, ತಟ್ಟುತ್ತಾ ಇರಿ (7-11)

    • ಸುವರ್ಣ ನಿಯಮ (12)

    • ಇಕ್ಕಟ್ಟಾದ ಬಾಗಿಲು (13, 14)

    • ಅವರು ಮಾಡೋ ಕೆಲಸಗಳಿಂದಾನೇ ಅವ್ರನ್ನ ಕಂಡುಹಿಡಿಬಹುದು (15-23)

    • ಬಂಡೆ ಮೇಲಿರೋ ಮನೆ, ಮರಳಿನ ಮೇಲಿರೋ ಮನೆ (24-27)

    • ಯೇಸು ಕಲಿಸೋ ರೀತಿ ನೋಡಿ ಜನ್ರು ಆಶ್ಚರ್ಯಪಟ್ರು (28, 29)