ಆದಿಕಾಂಡ 13:1-18

  • ಅಬ್ರಾಮ ಕಾನಾನಿಗೆ ವಾಪಸ್‌ (1-4)

  • ಅಬ್ರಾಮ ಲೋಟ ಬೇರೆಯಾದ್ರು (5-13)

  • ದೇವರು ಅಬ್ರಾಮನಿಗೆ ಮತ್ತೆ ಮಾತು ಕೊಟ್ಟನು (14-18)

13  ಅಬ್ರಾಮ ಈಜಿಪ್ಟ್‌ ಬಿಟ್ಟು ಹೊರಟ. ತನ್ನ ಹತ್ರ ಇದ್ದ ಎಲ್ಲವನ್ನ ತಗೊಂಡು ತನ್ನ ಹೆಂಡತಿನ, ಲೋಟನನ್ನ ಜೊತೇಲಿ ಕರ್ಕೊಂಡು ನೆಗೆಬ್‌ಗೆ+ ಹೋದ.  ಅಬ್ರಾಮ ತುಂಬ ಶ್ರೀಮಂತನಾಗಿದ್ದ. ಅವನ ಹತ್ರ ತುಂಬ ಪ್ರಾಣಿಗಳು, ಚಿನ್ನಬೆಳ್ಳಿ ಇತ್ತು.+  ಅವನು ನೆಗೆಬಿಂದ ಬೆತೆಲಿಗೆ ಪ್ರಯಾಣಿಸಿದ. ಬೇರೆ ಬೇರೆ ಜಾಗದಲ್ಲಿ ಡೇರೆ ಹಾಕ್ತಾ ಬೆತೆಲ್‌ ಮತ್ತು ಆಯಿ+ ಅನ್ನೋ ಪಟ್ಟಣಗಳ ಮಧ್ಯದಲ್ಲಿದ್ದ ಒಂದು ಜಾಗಕ್ಕೆ ಬಂದ. ಆ ಜಾಗದಲ್ಲೇ ಅವನು ಈ ಹಿಂದೆ ಡೇರೆ ಹಾಕಿ  ಯಜ್ಞವೇದಿ ಕಟ್ಟಿದ್ದ. ಅಲ್ಲಿ ಅಬ್ರಾಮ ಯೆಹೋವನ ಹೆಸರನ್ನ ಸ್ತುತಿಸಿದ.  ಅಬ್ರಾಮನ ಜೊತೆ ಪ್ರಯಾಣಿಸ್ತಿದ್ದ ಲೋಟನ ಹತ್ರಾನೂ ಕುರಿ, ದನ-ಹೋರಿ, ಡೇರೆಗಳು ಇತ್ತು.  ಅವರಿಬ್ರ ಹತ್ರನೂ ತುಂಬ ಆಸ್ತಿ ಇದ್ದ ಕಾರಣ ಎಲ್ರೂ ಒಟ್ಟಿಗೆ ಒಂದೇ ಜಾಗದಲ್ಲಿ ಇರೋಕೆ ಕಷ್ಟ ಆಯ್ತು.  ಅಬ್ರಾಮನ ದನ ಕಾಯೋರಿಗೂ ಲೋಟನ ದನ ಕಾಯೋರಿಗೂ ಜಗಳ ಆಯ್ತು. (ಆಗ ಕಾನಾನ್ಯರು, ಪೆರಿಜೀಯರು ಆ ಪ್ರದೇಶದಲ್ಲಿ ವಾಸ ಮಾಡ್ತಿದ್ರು.)+  ಹಾಗಾಗಿ ಅಬ್ರಾಮ ಲೋಟನಿಗೆ+ “ದಯವಿಟ್ಟು ನನ್ನ ಮಾತು ಕೇಳು, ನಾವಿಬ್ರು ಸಂಬಂಧಿಕರು. ನಿನಗೂ ನನಗೂ, ನಮ್ಮ ದನ ಕಾಯೋರಿಗೂ ಜಗಳ ಆಗಬಾರದು.  ಅದಕ್ಕೇ ನಾವಿಬ್ರೂ ಬೇರೆ ಬೇರೆ ಕಡೆ ಹೋಗೋಣ. ನೋಡು, ಇಡೀ ದೇಶ ನಿನ್ನ ಮುಂದೆ ಇದೆ. ನೀನು ಎಡಗಡೆ ಹೋದ್ರೆ ನಾನು ಬಲಗಡೆ ಹೋಗ್ತೀನಿ. ನೀನು ಬಲಗಡೆ ಹೋದ್ರೆ ನಾನು ಎಡಗಡೆ ಹೋಗ್ತೀನಿ” ಅಂದ. 10  ಆಗ ಲೋಟ ದೂರದ ಚೋಗರ್‌+ ಪಟ್ಟಣದ ತನಕ ಇದ್ದ ಯೋರ್ದನ್‌ ಪ್ರದೇಶದ+ ಕಡೆಗೆ ನೋಡಿದ. ಅದು ತುಂಬ ನೀರು ಇರೋ ಜಾಗ ಆಗಿತ್ತು. (ಯೆಹೋವ ಸೊದೋಮ್‌-ಗೊಮೋರ ಪಟ್ಟಣಗಳನ್ನ ನಾಶ ಮಾಡೋ ಮುಂಚೆ) ಅದು ಯೆಹೋವನ ತೋಟದ*+ ತರ, ಈಜಿಪ್ಟ್‌ ದೇಶದ ತರ ಇತ್ತು. 11  ಹಾಗಾಗಿ ಲೋಟ ಇಡೀ ಯೋರ್ದನ್‌ ಪ್ರದೇಶ ಆರಿಸ್ಕೊಂಡು ಪೂರ್ವದ ಕಡೆ ಹೋದ. ಹೀಗೆ ಅವರಿಬ್ರು ಬೇರೆ ಬೇರೆ ಆದ್ರು. 12  ಅಬ್ರಾಮ ಕಾನಾನಲ್ಲೇ ವಾಸ ಮಾಡಿದ. ಆದ್ರೆ ಲೋಟ ಯೋರ್ದನ್‌ ಪ್ರದೇಶದ ಪಟ್ಟಣಗಳ ಹತ್ರ ವಾಸ ಮಾಡಿದ.+ ಕೊನೆಗೆ ಅವನು ಸೊದೋಮ್‌ ಪಟ್ಟಣದ ಹತ್ರ ಡೇರೆ ಹಾಕಿದ. 13  ಸೊದೋಮಿನ ಜನ್ರು ತುಂಬ ಕೆಟ್ಟವರಾಗಿದ್ರು, ಯೆಹೋವನ ವಿರುದ್ಧ ದೊಡ್ಡ ಪಾಪಗಳನ್ನ ಮಾಡ್ತಿದ್ರು.+ 14  ಲೋಟ ಅಬ್ರಾಮನನ್ನ ಬಿಟ್ಟು ದೂರ ಹೋದ ಮೇಲೆ ಯೆಹೋವ ಅಬ್ರಾಮನಿಗೆ “ದಯವಿಟ್ಟು ಈ ಜಾಗದಿಂದ ಉತ್ತರ ದಕ್ಷಿಣ ಪೂರ್ವ ಪಶ್ಚಿಮದ ಕಡೆಗೆ ನೋಡು. 15  ಯಾಕಂದ್ರೆ ನೀನು ನೋಡ್ತಿರೋ ಈ ಇಡೀ ದೇಶನ ನಿನಗೆ, ನಿನ್ನ ಸಂತಾನಕ್ಕೆ ನಾನು ಶಾಶ್ವತ ಆಸ್ತಿಯಾಗಿ ಕೊಡ್ತೀನಿ.+ 16  ನಿನ್ನ ಸಂತಾನವನ್ನ ಭೂಮಿಯ ಧೂಳಿನ ಕಣಗಳಷ್ಟು ಹೆಚ್ಚಿಸ್ತೀನಿ. ಹೇಗೆ ಧೂಳಿನ ಕಣಗಳನ್ನ ಲೆಕ್ಕ ಮಾಡೋಕೆ ಆಗಲ್ವೋ ಅದೇ ತರ ನಿನ್ನ ಸಂತಾನನ ಲೆಕ್ಕಮಾಡೋಕೆ ಯಾರಿಂದಾನೂ ಆಗಲ್ಲ.+ 17  ನೀನು ಹೋಗಿ ಈ ದೇಶವನ್ನೆಲ್ಲ ಸುತ್ತಿ ನೋಡು. ಯಾಕಂದ್ರೆ ಈ ದೇಶನ ನಾನು ನಿನಗೆ ಕೊಡ್ತೀನಿ” ಅಂದನು. 18  ಹಾಗಾಗಿ ಅಬ್ರಾಮ ಬೇರೆ ಬೇರೆ ಜಾಗಕ್ಕೆ ಹೋಗಿ ಡೇರೆ ಹಾಕಿ ವಾಸ ಮಾಡಿದ. ನಂತ್ರ ಅವನು ಹೆಬ್ರೋನಲ್ಲಿ+ ಮಮ್ರೆ+ ಅನ್ನೋ ಜಾಗಕ್ಕೆ ಬಂದು ದೊಡ್ಡ ದೊಡ್ಡ ಮರಗಳ ಹತ್ರ ವಾಸ ಮಾಡಿದ. ಅಲ್ಲಿ ಅವನು ಯೆಹೋವನಿಗಾಗಿ ಒಂದು ಯಜ್ಞವೇದಿ ಕಟ್ಟಿದ.+

ಪಾದಟಿಪ್ಪಣಿ

ಅದು, ಏದೆನ್‌ ತೋಟ.