ಕೀರ್ತನೆ 112:1-10

  • ನೀತಿವಂತ ಯೆಹೋವನಿಗೆ ಭಯಪಡ್ತಾನೆ

    • ಧಾರಾಳವಾಗಿ ಸಾಲ ಕೊಡೋನಿಗೆ ಅಭಿವೃದ್ಧಿ (5)

    • “ನೀತಿವಂತರನ್ನ ಸದಾಕಾಲಕ್ಕೂ ನೆನಪಿಸ್ಕೊಳ್ತಾರೆ” (6)

    • ಧಾರಾಳ ವ್ಯಕ್ತಿ ಬಡವರಿಗೆ ಕೊಡ್ತಾನೆ (9)

112  ಯಾಹುವನ್ನ ಸ್ತುತಿಸಿ!*+ א [ಆಲೆಫ್‌] ಯೆಹೋವನಿಗೆ ಭಯಪಡೋನು ಭಾಗ್ಯವಂತ.+ ב [ಬೆತ್‌] ದೇವರ ಆಜ್ಞೆಗಳಂದ್ರೆ ಅವನಿಗೆ ತುಂಬ ಖುಷಿ.+ ג [ಗಿಮೆಲ್‌]   ಅವನ ವಂಶದವರು ಭೂಮಿ ಮೇಲೆ ಶಕ್ತಿಶಾಲಿ ಆಗ್ತಾರೆ. ד [ಡಾಲತ್‌] ನೀತಿವಂತನ ಪೀಳಿಗೆಗೆ ಆಶೀರ್ವಾದ ಸಿಗುತ್ತೆ.+ ה [ಹೆ]   ಅವನ ಮನೆಯಲ್ಲಿ ಸಿರಿಸಂಪತ್ತು ಇರುತ್ತೆ. ו [ವಾವ್‌] ಅವನ ನೀತಿ ಶಾಶ್ವತವಾಗಿ ಇರುತ್ತೆ. ז [ಜಯಿನ್‌]   ಪ್ರಾಮಾಣಿಕರಿಗೆ ಅವನು ಕತ್ತಲಲ್ಲಿ ಹೊಳಿಯೋ ಬೆಳಕಾಗಿದ್ದಾನೆ.+ ח [ಹೆತ್‌] ಅವನು ದಯಾಮಯಿ,* ಕರುಣಾಮಯಿ,+ ನೀತಿವಂತ. ט [ಟೆತ್‌]   ಧಾರಾಳವಾಗಿ* ಸಾಲಕೊಡೋನಿಗೆ ಒಳ್ಳೇದಾಗುತ್ತೆ.+ י [ಯೋದ್‌] ಅವನು ಎಲ್ಲ ಕೆಲಸಗಳನ್ನ ನ್ಯಾಯವಾಗಿ ಮಾಡ್ತಾನೆ. כ [ಕಾಫ್‌]   ಅವನು ಯಾವತ್ತೂ ಕದಲಲ್ಲ.+ ל [ಲಾಮೆದ್‌] ನೀತಿವಂತರನ್ನ ಯಾವಾಗ್ಲೂ ನೆನಪಿಸಿಕೊಳ್ತಾರೆ.+ מ [ಮೆಮ್‌]   ಅವನು ಕೆಟ್ಟಸುದ್ದಿಗೆ ಭಯಪಡಲ್ಲ.+ נ [ನೂನ್‌] ಅವನ ಹೃದಯ ಸ್ಥಿರವಾಗಿರುತ್ತೆ, ಅದು ಯೆಹೋವನಲ್ಲಿ ಭರವಸೆ ಇಟ್ಟಿರುತ್ತೆ.+ ס [ಸಾಮೆಕ್‌]   ಅವನ ಹೃದಯ ನಡುಗಲ್ಲ, ಅವನು ಹೆದ್ರಲ್ಲ.+ ע [ಅಯಿನ್‌] ಕೊನೆಗೆ ಶತ್ರುಗಳ ವಿರುದ್ಧ ಅವನು ಗೆಲ್ತಾನೆ.+ פ [ಪೇ]   ಅವನು ಉದಾರವಾಗಿ* ಹಂಚಿದ್ದಾನೆ, ಅವನು ಬಡವ್ರಿಗೆ ಕೊಟ್ಟಿದ್ದಾನೆ.+ צ [ಸಾದೆ] ಅವನ ನೀತಿ ಸದಾಕಾಲಕ್ಕೂ ಮುಂದುವರಿಯುತ್ತೆ.+ ק [ಕೊಫ್‌] ಅವನ ಬಲ* ಗೌರವ ಜಾಸ್ತಿ ಆಗ್ತಾ ಹೋಗುತ್ತೆ. ר [ರೆಶ್‌] 10  ಇದನ್ನ ನೋಡಿ ಕೆಟ್ಟವನು ನೆಮ್ಮದಿ ಕಳ್ಕೊತಾನೆ. ש [ಶಿನ್‌] ಅವನು ಹಲ್ಲು ಕಡಿತಾನೆ, ಕಣ್ಮರೆ ಆಗ್ತಾನೆ. ת [ಟಾವ್‌] ಕೆಟ್ಟವನ ಆಸೆಗಳು ಮಣ್ಣುಪಾಲಾಗುತ್ತೆ.+

ಪಾದಟಿಪ್ಪಣಿ

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
ಅಥವಾ “ಕನಿಕರ ತೋರಿಸ್ತಾನೆ.”
ಅಕ್ಷ. “ದಯೆಯಿಂದ.”
ಅಕ್ಷ. “ವಿಸ್ತಾರವಾಗಿ.”
ಅಕ್ಷ. “ಕೊಂಬು.”