ಕೀರ್ತನೆ 19:1-14
ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.
19 ಆಕಾಶ ದೇವರ ಮಹಿಮೆಯನ್ನ ಸಾರಿ ಹೇಳುತ್ತೆ,+ಗಗನ ಆತನ ಸೃಷ್ಟಿಯನ್ನ ವಿವರಿಸುತ್ತೆ.+
2 ಪ್ರತಿದಿನ ಅವುಗಳ ಬಾಯಿಂದ ಆತನನ್ನ ಹೊಗಳೋ ಮಾತುಗಳು ಉಕ್ಕಿಹರಿಯುತ್ತೆ,ಪ್ರತಿರಾತ್ರಿ ಅವು ಜ್ಞಾನವನ್ನ ತೋರಿಸುತ್ತೆ.
3 ಮಾತಿಲ್ಲ, ಪದಗಳಿಲ್ಲ,ಅವುಗಳ ಧ್ವನಿನೂ ಕೇಳಿಸಲ್ಲ.
4 ಆದ್ರೂ ಇಡೀ ಭೂಮಿಯಲ್ಲಿ ಅವುಗಳ ಶಬ್ದ ಪ್ರತಿಧ್ವನಿಸುತ್ತೆ,ಭೂಮಿಯ* ಮೂಲೆಮೂಲೆಗೂ ಅವುಗಳ ಸಂದೇಶ ತಲುಪುತ್ತೆ.+
ಆತನು ಆಕಾಶದಲ್ಲಿ ಸೂರ್ಯನಿಗಾಗಿ ಡೇರೆ ಹಾಕಿದ್ದಾನೆ,
5 ಸೂರ್ಯ ತನ್ನ ಕೋಣೆಯಿಂದ ಹೊರಗೆ ಬರೋ ಮದುಮಗನ ತರ ಇದ್ದಾನೆ.
ತನ್ನ ದಾರಿಯಲ್ಲಿ ಬೀಗುತ್ತಾ ಓಡೋ ವೀರ ಸೈನಿಕನ ತರ ಇದ್ದಾನೆ.
6 ಸೂರ್ಯ ಆಕಾಶದ ಒಂದು ತುದಿಯಿಂದ,ಇನ್ನೊಂದು ತುದಿಗೆ ಸುತ್ತುತ್ತಾನೆ.+
ಅವನ ಶಾಖ ತಲುಪದ ಸ್ಥಳ ಒಂದೂ ಇಲ್ಲ.
7 ಯೆಹೋವನ ನಿಯಮ ಪುಸ್ತಕದಲ್ಲಿ ಕುಂದುಕೊರತೆ ಇಲ್ಲ,+ ಅದು ನವಚೈತನ್ಯ ಕೊಡುತ್ತೆ.+
ಯೆಹೋವನ ಎಚ್ಚರಿಕೆಗಳಲ್ಲಿ ಭರವಸೆ ಇಡಬಹುದು.+ ಅವು ಅನುಭವ ಇಲ್ಲದವನನ್ನೂ ವಿವೇಕಿಯಾಗಿ ಮಾಡುತ್ತೆ.+
8 ಯೆಹೋವನಿಂದ ಬರೋ ಅಪ್ಪಣೆಗಳು ನ್ಯಾಯವಾಗಿವೆ, ಅವು ಹೃದಯಕ್ಕೆ ಖುಷಿ ಕೊಡುತ್ತೆ.+
ಯೆಹೋವನ ಆಜ್ಞೆಗಳು ಶುದ್ಧ, ಅವು ಕಣ್ಣಿಗೆ ಹೊಳಪು ನೀಡುತ್ತೆ.+
9 ಯೆಹೋವನ ಭಯ+ ಪವಿತ್ರ. ಅದು ಯಾವಾಗ್ಲೂ ಇರುತ್ತೆ.
ಯೆಹೋವನ ತೀರ್ಪುಗಳು ಸತ್ಯ, ಅವೆಲ್ಲ ನ್ಯಾಯವಾಗಿರುತ್ತೆ.+
10 ಅವುಗಳ ಮುಂದೆ ಚಿನ್ನ ಏನೇನೂ ಅಲ್ಲ,ಅಪ್ಪಟ* ಚಿನ್ನಕ್ಕಿಂತ ಅವು ಮಿಗಿಲು,+ಅವು ಜೇನುಗೂಡಿನಿಂದ ತೊಟ್ಟಿಕ್ಕೋ ಜೇನಿಗಿಂತ ಸಿಹಿ.+
11 ನಿನ್ನ ಸೇವಕನಿಗೆ ಅದ್ರಿಂದ ಎಚ್ಚರಿಕೆ ಸಿಗುತ್ತೆ,+ಅವನ್ನ ಪಾಲಿಸಿದ್ರೆ ದೊಡ್ಡ ಬಹುಮಾನ ಸಿಗುತ್ತೆ.+
12 ತಮ್ಮ ಸ್ವಂತ ತಪ್ಪನ್ನ ಯಾರು ಅರ್ಥಮಾಡ್ಕೊಳ್ತಾರೆ?+
ಗೊತ್ತಿಲ್ಲದೆ ನಾನು ಮಾಡೋ ಪಾಪಗಳನ್ನ ಕ್ಷಮಿಸಿ ನನಗೆ ನಿರ್ದೋಷಿ ಅಂತ ತೀರ್ಪು ಕೊಡು.
13 ಅಹಂಕಾರದ ಕೆಲಸಗಳನ್ನ ಮಾಡದ ಹಾಗೆ ನಿನ್ನ ಸೇವಕನನ್ನ ತಡಿ,+ಅವು ನನ್ನ ಮೇಲೆ ದಬ್ಬಾಳಿಕೆ ಮಾಡೋಕೆ ಬಿಡಬೇಡ.+
ಆಗ ದೊಡ್ಡ ಪಾಪಗಳನ್ನ* ಮಾಡಲ್ಲ,+ನನ್ನ ಮೇಲೆ ಯಾವ ಆರೋಪನೂ ಇರಲ್ಲ.
14 ಯೆಹೋವನೇ, ನನ್ನ ಬಂಡೆಯೇ,+ ನನ್ನನ್ನ ಬಿಡಿಸುವವನೇ,+ನನ್ನ ಮಾತು ಮತ್ತು ನನ್ನ ಹೃದಯದ ಧ್ಯಾನ ನಿನ್ನನ್ನ ಮೆಚ್ಚಿಸಲಿ.+