ಕೀರ್ತನೆ 57:1-11

  • ಕೃಪೆ ತೋರಿಸುವಂತೆ ಬಿನ್ನಹ

    • ದೇವರ ರೆಕ್ಕೆಯೊಳಗೆ ಆಶ್ರಯ (1)

    • ಶತ್ರುಗಳು ತಾವು ಬೀಸಿದ ಬಲೆಯಲ್ಲೇ ಬೀಳ್ತಾರೆ (6)

ಗಾಯಕರ ನಿರ್ದೇಶಕನಿಗೆ ಸೂಚನೆ, “ನಾಶವಾಗೋಕೆ ಬಿಡಬೇಡ” ಅನ್ನೋ ರಾಗದಲ್ಲಿ ಹಾಡಬೇಕು. ಮಿಕ್ತಾಮ್‌.* ದಾವೀದನ ಕೀರ್ತನೆ. ಸೌಲನಿಂದ ತಪ್ಪಿಸ್ಕೊಂಡು ದಾವೀದ ಗವಿಗೆ ಓಡಿಹೋದಾಗ ಇದನ್ನ ರಚಿಸಿದ.+ 57  ದೇವರೇ, ನನಗೆ ಕೃಪೆ ತೋರಿಸು, ನನಗೆ ದಯೆ ತೋರಿಸು,ಯಾಕಂದ್ರೆ ನಾನು ನಿನ್ನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ,+ಸಮಸ್ಯೆಗಳೆಲ್ಲ ಬಗೆಹರಿಯೋ ತನಕ ನಾನು ನಿನ್ನ ರೆಕ್ಕೆ ನೆರಳಲ್ಲೇ ಆಶ್ರಯ ಪಡೀತೀನಿ.+   ಸರ್ವೋನ್ನತ ದೇವರನ್ನ ನಾನು ಕೂಗ್ತೀನಿ,ನನ್ನ ಸಮಸ್ಯೆಗಳಿಗೆ ಅಂತ್ಯ ಹಾಡೋ ಸತ್ಯ ದೇವರಿಗೆ ನಾನು ಮೊರೆ ಇಡ್ತೀನಿ.   ಆತನು ಸ್ವರ್ಗದಿಂದ ನನಗೆ ಸಹಾಯ ಮಾಡ್ತಾನೆ, ನನ್ನನ್ನ ರಕ್ಷಿಸ್ತಾನೆ.+ ನನ್ನ ಮೇಲೆ ಆಕ್ರಮಣ ಮಾಡೋನು ಗೆಲ್ಲದೆ ಇರೋ ತರ ನೋಡ್ಕೊಳ್ತಾನೆ. (ಸೆಲಾ) ದೇವರು ತನ್ನ ಶಾಶ್ವತ ಪ್ರೀತಿಯನ್ನ ಮತ್ತು ನಂಬಿಗಸ್ತಿಕೆಯನ್ನ ತೋರಿಸ್ತಾನೆ.+   ನನ್ನ ಸುತ್ತ ಸಿಂಹಗಳು ನಿಂತಿವೆ,+ನನ್ನನ್ನ ನುಂಗಬೇಕು ಅಂತಿರೋರ ಮಧ್ಯ ನಾನು ಮಲಗೋ ಪರಿಸ್ಥಿತಿ ಬಂದಿದೆ,ಅವ್ರ ಹಲ್ಲು ಈಟಿ, ಬಾಣಅವ್ರ ನಾಲಿಗೆ ಚೂಪಾದ ಕತ್ತಿ.+   ದೇವರೇ, ನಿನ್ನ ಮಹಿಮೆ ಭೂಮಿಯಲ್ಲೆಲ್ಲಾ ಇರಲಿ,ಮೇಲೆ ಸ್ವರ್ಗದಲ್ಲೂ ನಿನಗೆ ಘನತೆಯಾಗಲಿ.+   ನನ್ನ ಕಾಲು ಸಿಕ್ಕಿಹಾಕೊಳ್ಳೋ ತರ ಅವರು ಬಲೆನ ಸಿದ್ಧಮಾಡಿದ್ದಾರೆ,+ನಾನು ಕಡುವೇದನೆಯಿಂದ ಬಗ್ಗಿ ಹೋಗಿದ್ದೀನಿ.+ ನನ್ನ ದಾರಿಯಲ್ಲಿ ಅವರು ಗುಂಡಿ ತೋಡಿದ್ರು,ಆದ್ರೆ ಅದರೊಳಗೆ ಅವ್ರೇ ಬಿದ್ದುಹೋದ್ರು.+ (ಸೆಲಾ)   ದೇವರೇ, ನನ್ನ ಹೃದಯ ಸ್ಥಿರವಾಗಿದೆ,+ಹೌದು ನನ್ನ ಹೃದಯ ಸ್ಥಿರವಾಗಿದೆ. ನಾನು ಹಾಡ್ತೀನಿ, ಸಂಗೀತ ರಚಿಸ್ತೀನಿ.   ನನ್ನ ಮನಸ್ಸೇ, ಎದ್ದೇಳು. ತಂತಿವಾದ್ಯವೇ, ಎದ್ದೇಳು. ಸಂಗೀತ ವಾದ್ಯಗಳೇ, ನೀವೂ ಎದ್ದೇಳಿ. ನಾನು ನಸುಕನ್ನ ಎಬ್ಬಿಸ್ತೀನಿ.+   ಯೆಹೋವನೇ ದೇಶಗಳ ಜನ್ರ ಮಧ್ಯ ನಾನು ನಿನ್ನನ್ನ ಹೊಗಳ್ತೀನಿ+ಅವ್ರ ಮಧ್ಯ ನಾನು ನಿನ್ನನ್ನ ಸ್ತುತಿಸ್ತೀನಿ.*+ 10  ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು. ಆ ಪ್ರೀತಿ ಆಕಾಶವನ್ನೂನಿನ್ನ ಸತ್ಯತೆ ಗಗನವನ್ನೂ ಮುಟ್ಟುತ್ತೆ.+ 11  ದೇವರೇ, ನಿನ್ನ ಮಹಿಮೆ ಭೂಮಿಯಲ್ಲೆಲ್ಲಾ ಇರಲಿ,ಮೇಲೆ ಸ್ವರ್ಗದಲ್ಲೂ ನಿನಗೆ ಗೌರವ ಸಿಗಲಿ.+

ಪಾದಟಿಪ್ಪಣಿ

ಅಥವಾ “ಸಂಗೀತ ರಚಿಸ್ತೀನಿ.”