ಜ್ಞಾನೋಕ್ತಿ 12:1-28
12 ಶಿಸ್ತನ್ನ ಪ್ರೀತಿಸುವವನು ಜ್ಞಾನವನ್ನ ಪ್ರೀತಿಸ್ತಾನೆ,+ತಿದ್ದುವವನನ್ನ ದ್ವೇಷಿಸುವವನು ಮೂರ್ಖ.+
2 ಒಳ್ಳೇ ವ್ಯಕ್ತಿ ಯೆಹೋವನ ಮೆಚ್ಚುಗೆ ಪಡಿತಾನೆ,ಸಂಚು ಮಾಡುವವನನ್ನ ದೂರ ಮಾಡ್ತಾನೆ.+
3 ಕೆಟ್ಟ ಕೆಲಸ ಮಾಡೋ ಯಾವನೂ ಉಳಿಯಲ್ಲ,+ಆದ್ರೆ ನೀತಿವಂತರು ಬೇರು ಸಮೇತ ಕಿತ್ತುಹಾಕೋಕೆ ಆಗದ ಮರದ ಹಾಗೆ ಇರ್ತಾರೆ.
4 ಸಮರ್ಥ ಹೆಂಡತಿ ತನ್ನ ಗಂಡನಿಗೆ ಕಿರೀಟ ಇದ್ದ ಹಾಗೆ,+ಮಾನಕಳೆಯೋ ಹೆಂಡತಿ ಗಂಡನ ಮೂಳೆ ಮುರಿದ ಹಾಗೆ.+
5 ನೀತಿವಂತರ ಆಲೋಚನೆಗಳಲ್ಲಿ ನ್ಯಾಯ ಇರುತ್ತೆ,ಕೆಟ್ಟವರು ಕೊಡೋ ಮಾರ್ಗದರ್ಶನದಲ್ಲಿ ಮೋಸ ಇರುತ್ತೆ.
6 ಕೆಟ್ಟವ್ರ ಮಾತು ಜೀವ ತೆಗಿಯೋ* ಬಲೆ,+ನೀತಿವಂತರ ಬಾಯಿ ರಕ್ಷಣೆ.+
7 ಕೆಟ್ಟವರು ನಾಶ ಆದ್ಮೇಲೆ ಯಾವತ್ತೂ ಕಾಣಿಸಲ್ಲ,ಆದ್ರೆ ನೀತಿವಂತರ ಮನೆ ಯಾವಾಗ್ಲೂ ಇರುತ್ತೆ.+
8 ಒಬ್ಬನ ಮಾತುಗಳಲ್ಲಿ ವಿವೇಚನೆ ಇದ್ರೆ ಜನ ಹೊಗಳ್ತಾರೆ,+ಕೆಟ್ಟ ಹೃದಯ ಇರುವವನನ್ನ ಬೈತಾರೆ.+
9 ಹೊಟ್ಟೆಗೆ ಇಲ್ಲದಿದ್ರೂ* ಜಂಬ ಕೊಚ್ಕೊಳ್ಳೋ ವ್ಯಕ್ತಿಗಿಂತ,ಸೇವಕನಿರೋ ಸಾಧಾರಣ ವ್ಯಕ್ತಿ ಎಷ್ಟೋ ಮೇಲು.+
10 ನೀತಿವಂತ ಸಾಕುಪ್ರಾಣಿಗಳನ್ನ ಚೆನ್ನಾಗಿ ನೋಡ್ಕೊಳ್ತಾನೆ,+ಕೆಟ್ಟವನು ಕರುಣೆ ತೋರಿಸಿದ್ರೂ ಕ್ರೂರವಾಗಿ ಇರುತ್ತೆ.
11 ನೆಲ ಉಳುಮೆ ಮಾಡುವವನಿಗೆ ಹೊಟ್ಟೆ ತುಂಬ ಊಟ ಇರುತ್ತೆ,+ಕೆಲಸಕ್ಕೆ ಬಾರದ ವಿಷ್ಯಗಳ ಹಿಂದೆ ಹೋಗುವವನಿಗೆ ಬುದ್ಧಿಯಿಲ್ಲ.*
12 ಕೆಟ್ಟವನು ಲೂಟಿ ಮಾಡಿದ್ದನ್ನ ನೋಡಿ ಕೆಟ್ಟವನಿಗೆ ಹೊಟ್ಟೆ ಉರಿಯುತ್ತೆ,ನೀತಿವಂತ ಚೆನ್ನಾಗಿ ಬೇರು ಬಿಟ್ಟಿರೋ ಮರದ ಹಾಗೆ, ಹಣ್ಣು ಕೊಡ್ತಾನೆ.
13 ಕೆಟ್ಟವನು ತನ್ನ ಪಾಪದ ಮಾತುಗಳಿಂದಾಗಿ ಸಿಕ್ಕಿಹಾಕೊಳ್ತಾನೆ,+ನೀತಿವಂತ ಕಷ್ಟಗಳಿಂದ ತಪ್ಪಿಸ್ಕೊಳ್ತಾನೆ.
14 ಒಬ್ಬ ವ್ಯಕ್ತಿಗೆ ತನ್ನ ಮಾತುಗಳಿಂದಾಗಿ* ಒಳ್ಳೆದಾಗುತ್ತೆ,+ತನ್ನ ಕೆಲಸಗಳಿಂದ ಆಶೀರ್ವಾದ ಸಿಗುತ್ತೆ.
15 ಮೂರ್ಖನಿಗೆ ತನ್ನ ದಾರಿ ಸರಿಯಾಗೇ ಇದೆ ಅಂತ ಅನಿಸುತ್ತೆ,+ವಿವೇಕಿ ಸಲಹೆಯನ್ನ* ಸ್ವೀಕರಿಸ್ತಾನೆ.+
16 ಮೂರ್ಖ ಕಿರಿಕಿರಿ ಆದ್ರೆ ತಕ್ಷಣ* ತೋರಿಸಿಬಿಡ್ತಾನೆ,+ಜಾಣ ಅವಮಾನ ಆದ್ರೆ ತಲೆ ಕೆಡಿಸ್ಕೊಳ್ಳಲ್ಲ.
17 ನಂಬಿಗಸ್ತಸಾಕ್ಷಿ ಸತ್ಯಾನೇ ಹೇಳ್ತಾನೆ,ಸುಳ್ಳುಸಾಕ್ಷಿ ಸುಳ್ಳೇ ಹೇಳ್ತಾನೆ.
18 ಯೋಚ್ನೆ ಮಾಡ್ದೆ ಹೇಳೋ ಮಾತುಗಳು ಕತ್ತಿ ತಿವಿದ ಹಾಗಿರುತ್ತೆ,ಬುದ್ದಿವಂತನ ಮಾತು ಮದ್ದಿನಂತೆ ಇರುತ್ತೆ.+
19 ಸತ್ಯವನ್ನ ಹೇಳೋ ತುಟಿಗಳು ಶಾಶ್ವತ,+ಸುಳ್ಳಿನ ನಾಲಿಗೆ ಕ್ಷಣಿಕ.+
20 ಕೆಟ್ಟದಾಗಬೇಕಂತ ನೆನಸೋ ಮನಸ್ಸಲ್ಲಿ ಮೋಸ ತುಂಬಿರುತ್ತೆ,ಶಾಂತಿ ಸಮಾಧಾನವನ್ನ ಹೆಚ್ಚಿಸುವವರು ಖುಷಿಖುಷಿಯಾಗಿ ಇರ್ತಾರೆ.+
21 ನೀತಿವಂತನಿಗೆ ಹಾನಿನೇ ಆಗಲ್ಲ,+ಕೆಟ್ಟವನ ಮೇಲೆ ಕೆಟ್ಟದು ಸುರಿಮಳೆ ತರ ಸುರಿಯುತ್ತೆ.+
22 ಸುಳ್ಳು ಹೇಳೋ ನಾಲಿಗೆ ಯೆಹೋವನಿಗೆ ಅಸಹ್ಯ,+ನಂಬಿಗಸ್ತರನ್ನ ನೋಡಿದ್ರೆ ಆತನಿಗೆ ಖುಷಿ.
23 ಜಾಣ ತನಗೆ ಗೊತ್ತಿರೋದನ್ನೆಲ್ಲ ಹೇಳಿಬಿಡಲ್ಲ,ಮೂರ್ಖನ ಹೃದಯ ತನ್ನ ಮೂರ್ಖತನವನ್ನ ಕಕ್ಕುತ್ತೆ.+
24 ಕಷ್ಟಪಟ್ಟು ಕೆಲಸ ಮಾಡುವವರು ಆಳ್ತಾರೆ,+ಸೋಮಾರಿಗಳು ಗುಲಾಮರಾಗ್ತಾರೆ.+
25 ಚಿಂತೆ ಇದ್ರೆ ಹೃದಯ ಬಾಡುತ್ತೆ,*+ಒಳ್ಳೇ ಮಾತಿಗೆ ಮನಸ್ಸು ಅರಳುತ್ತೆ.+
26 ನೀತಿವಂತ ತನ್ನ ಪ್ರಾಣಿಗಳಿಗಾಗಿ ಹುಲ್ಲುಗಾವಲುಗಳನ್ನ ಜಾಗ್ರತೆಯಿಂದ ಹುಡುಕ್ತಾನೆ,ಕೆಟ್ಟವನ ನಡತೆ ಅವನನ್ನ ದಾರಿತಪ್ಪಿಸುತ್ತೆ.
27 ಮೈಗಳ್ಳ ತನ್ನ ಬೇಟೆ ಹಿಂದೆ ಓಡಲ್ಲ,+ಮೈಬಗ್ಗಿಸಿ ದುಡಿಯುವವನಿಗೆ ಅದೇ ಅಮೂಲ್ಯ ಆಸ್ತಿ.
28 ನೀತಿಯ ದಾರಿ ಜೀವಕ್ಕೆ ನಡಿಸುತ್ತೆ,+ಆ ದಾರಿಯಲ್ಲಿ ಸಾವಿರಲ್ಲ.
ಪಾದಟಿಪ್ಪಣಿ
^ ಅಕ್ಷ. “ರಕ್ತ ಸುರಿಸೋಕೆ ಕಾಯೋ.”
^ ಅಕ್ಷ. “ರೊಟ್ಟಿ ಇಲ್ಲದಿದ್ರೂ.”
^ ಅಕ್ಷ. “ಹೃದಯ ಇಲ್ಲ.”
^ ಅಕ್ಷ. “ಬಾಯಿಂದಾಗಿ.”
^ ಅಥವಾ “ಬುದ್ಧಿವಾದವನ್ನ.”
^ ಅಥವಾ “ಅವತ್ತೇ.”
^ ಅಥವಾ “ಖಿನ್ನತೆಗೆ ನಡಿಸುತ್ತೆ.”