ಜ್ಞಾನೋಕ್ತಿ 20:1-30
20 ದ್ರಾಕ್ಷಾಮದ್ಯ ಅವಮಾನಕ್ಕೆ ನಡಿಸುತ್ತೆ,+ ಮದ್ಯ ನಿಯಂತ್ರಣ ತಪ್ಪಿಸುತ್ತೆ.+
ಬುದ್ಧಿ ಇಲ್ಲದವನು ಅದ್ರಿಂದ ಅಡ್ಡದಾರಿ ಹಿಡಿತಾನೆ.+
2 ರಾಜ ಜನ್ರಲ್ಲಿ ಸಿಂಹ ಗರ್ಜನೆ ತರ ಭಯ ಹುಟ್ಟಿಸ್ತಾನೆ.+
ಅವನ ಕೋಪ ಕೆರಳಿಸೋರು ತಮ್ಮ ಜೀವಾನೇ ಪಣಕ್ಕಿಡ್ತಾರೆ.+
3 ಜಗಳದಿಂದ ದೂರ ಇರೋದು ಒಬ್ಬನಿಗೆ ಗೌರವ ತರುತ್ತೆ,+ಆದ್ರೆ ಮೂರ್ಖ ಅದ್ರಲ್ಲೇ ತಲೆಹಾಕ್ತಾನೆ.+
4 ಚಳಿಗಾಲದಲ್ಲಿ ನೇಗಿಲು ಹಿಡಿಯದ ಸೋಮಾರಿ,ಕೊಯ್ಲು ಬಂದಾಗ ಭಿಕ್ಷೆ ಬೇಡ್ತಾನೆ.*+
5 ಮನುಷ್ಯನ ಮನಸ್ಸಲ್ಲಿರೋ ಯೋಚ್ನೆಗಳು* ಬಾವಿ ನೀರಿನ ತರ,ಬುದ್ಧಿವಂತ ಅದನ್ನ ಸೇದ್ತಾನೆ.
6 ತುಂಬ ಜನ ಅವ್ರಲ್ಲಿ ಪ್ರೀತಿ ಇದೆ ಅಂತ ಹೇಳ್ತಾರೆ,ಆದ್ರೆ ನಂಬಿಗಸ್ತ ಜನ್ರು ಸಿಗೋದು ತುಂಬ ಅಪರೂಪ.
7 ನೀತಿವಂತ ನಿಯತ್ತಾಗಿ ನಡೀತಾನೆ.+
ಅವನ ಮುಂದಿನ ಪೀಳಿಗೆ* ಖುಷಿಯಾಗಿ ಇರುತ್ತೆ.+
8 ರಾಜ ನ್ಯಾಯ ತೀರಿಸೋಕೆ ಸಿಂಹಾಸನದ ಮೇಲೆ ಕೂತಾಗ,+ಒಂದೇ ನೋಟದಲ್ಲಿ ಎಲ್ಲ ಕೆಟ್ಟತನವನ್ನ ಜರಡಿ ಹಿಡಿದು ತೆಗೆದುಹಾಕ್ತಾನೆ.+
9 ಯಾರು ತಾನೇ “ನನ್ನ ಮನಸ್ಸು ಶುದ್ಧವಾಗಿದೆ,+ನನ್ನಲ್ಲಿ ಈಗ ಯಾವ ತಪ್ಪೂ ಇಲ್ಲ” ಅಂತ ಹೇಳಕ್ಕಾಗುತ್ತೆ?+
10 ಮೋಸದ ತಕ್ಕಡಿ, ತಪ್ಪಾದ ಅಳತೆ*ಎರಡೂ ಯೆಹೋವನಿಗೆ ಅಸಹ್ಯ.+
11 ಒಬ್ಬ ಚಿಕ್ಕ ಹುಡುಗನ ವರ್ತನೆ ಶುದ್ಧವಾಗಿ, ಸರಿಯಾಗಿ ಇದ್ಯಾ ಇಲ್ವಾ ಅಂತಅವನು ಮಾಡೋ ಕೆಲಸಗಳಿಂದ ಗೊತ್ತಾಗಿಬಿಡುತ್ತೆ.+
12 ಕೇಳಿಸ್ಕೊಳ್ಳೋ ಕಿವಿ, ನೋಡೋ ಕಣ್ಣುಎರಡನ್ನೂ ಮಾಡಿದ್ದು ಯೆಹೋವನೇ.+
13 ನಿದ್ದೆಯನ್ನ ಪ್ರೀತಿಸಬೇಡ, ಬಡತನ ಅಟ್ಟಿಸ್ಕೊಂಡು ಬರುತ್ತೆ.+
ನಿನ್ನ ಕಣ್ಣು ತೆರಿ, ಆಗ ತಿಂದು ತೃಪ್ತನಾಗ್ತೀಯ.+
14 ಕೊಂಡ್ಕೊಳ್ಳೋನು “ಇದು ಚೆನ್ನಾಗಿಲ್ಲ, ಅದು ಚೆನ್ನಾಗಿಲ್ಲ!” ಅಂತಾನೆ.
ಆಮೇಲೆ ಅವನು ಮಾಡಿದ ವ್ಯಾಪಾರದ ಬಗ್ಗೆ ಕೊಚ್ಕೊಳ್ತಾನೆ.+
15 ಬಂಗಾರ, ಹವಳ* ತುಂಬ ಅಮೂಲ್ಯ,ಜ್ಞಾನ ತುಂಬಿರೋ ತುಟಿಗಳು ಅದಕ್ಕಿಂತ ಅಮೂಲ್ಯ.+
16 ಅಪರಿಚಿತನಿಗೆ ಜಾಮೀನು ಕೊಡುವವನ ಬಟ್ಟೆ ಕಿತ್ಕೊ.+
ಅವನು ನಡತೆಗೆಟ್ಟ* ಹೆಂಗಸಿಗಾಗಿ ವಸ್ತುಗಳನ್ನ ಒತ್ತೆ ಇಟ್ರೆ ವಾಪಸ್ ಕೊಡಬೇಡ.+
17 ಮೋಸದಿಂದ ಗಳಿಸಿದ ರೊಟ್ಟಿ ಮನುಷ್ಯನಿಗೆ ರುಚಿ ಅನಿಸುತ್ತೆ,ಆದ್ರೆ ಆಮೇಲೆ ಅವನ ಬಾಯಿ ತುಂಬ ಮರಳು ತುಂಬ್ಕೊಳ್ಳುತ್ತೆ.+
18 ಸಲಹೆ ಪಡೆದ್ರೆ ಯೋಜನೆಗಳು ಯಶಸ್ವಿ ಆಗುತ್ತೆ,+ನಿಪುಣರ ನಿರ್ದೇಶನದ* ಪ್ರಕಾರ ಯುದ್ಧ ಮಾಡು.+
19 ಚಾಡಿ ಹೇಳಿ ಹೆಸ್ರು ಹಾಳು ಮಾಡೋನು ಗುಟ್ಟು ರಟ್ಟು ಮಾಡ್ತಾನೆ,+ಹರಟೆಯನ್ನ ಪ್ರೀತಿಸುವವನ* ಜೊತೆ ಸೇರಬೇಡ.
20 ಮಗ ಅಪ್ಪಅಮ್ಮನ ಮೇಲೆ ಶಾಪ ಹಾಕಿದ್ರೆಕತ್ತಲೆ ಆಗುವಾಗ ದೀಪ ಆರಿಹೋಗುತ್ತೆ.+
21 ದುರಾಸೆಯಿಂದ ಗಳಿಸಿದ ಆಸ್ತಿಕೊನೆಗೆ ಆಶೀರ್ವಾದ ತರಲ್ಲ.+
22 “ಸೇಡಿಗೆ ಸೇಡು ತೀರಿಸ್ತೀನಿ!” ಅಂತ ಹೇಳಬೇಡ.+
ಯೆಹೋವನ ಮೇಲೆ ನಿರೀಕ್ಷೆ ಇಡು,+ ಆತನೇ ನಿನ್ನನ್ನ ಕಾಪಾಡ್ತಾನೆ.+
23 ತಪ್ಪಾದ ತೂಕದ ಕಲ್ಲು* ಯೆಹೋವನಿಗೆ ಅಸಹ್ಯ,ಮೋಸದ ಅಳತೆ ಸರಿಯಲ್ಲ.
24 ಮನುಷ್ಯ ಎಲ್ಲಿ ಹೆಜ್ಜೆ ಇಡಬೇಕಂತ ಯೆಹೋವ ದಾರಿ ತೋರಿಸ್ತಾನೆ.+
ಇಲ್ಲದಿದ್ರೆ ಎಲ್ಲಿಗೆ ಹೋಗೋದು ಅಂತ ಅವನಿಗೆ ಹೇಗೆ ಗೊತ್ತಾಗುತ್ತೆ?
25 ಆತುರಪಟ್ಟು ಹರಕೆ ಮಾಡಿ+ಆಮೇಲೆ ಅದ್ರ ಬಗ್ಗೆ ಯೋಚಿಸಿದ್ರೆ ಉರ್ಲಾಗಿರುತ್ತೆ.+
26 ಹೊಟ್ಟನ್ನ ಧಾನ್ಯದಿಂದ ಬೇರೆ ಮಾಡೋ ಹಾಗೆ+ವಿವೇಕಿಯಾಗಿರೋ ರಾಜ ಕೆಟ್ಟವರನ್ನ ಜರಡಿ ಹಿಡಿದು ಬೇರೆ ಮಾಡ್ತಾನೆ.+
27 ಮನುಷ್ಯನ ಉಸಿರು ಯೆಹೋವನ ದೀಪ,ಅದು ಅಂತರಾಳವನ್ನ ಶೋಧಿಸುತ್ತೆ.
28 ಶಾಶ್ವತ ಪ್ರೀತಿ, ನಂಬಿಗಸ್ತಿಕೆ ರಾಜನನ್ನ ಕಾದು ಕಾಪಾಡುತ್ತೆ,+ಶಾಶ್ವತ ಪ್ರೀತಿಯಿಂದ ತನ್ನ ಸಿಂಹಾಸನವನ್ನ ಉಳಿಸ್ಕೊಳ್ತಾನೆ.+
29 ಯುವಕರ ಬಲಾನೇ ಅವ್ರ ಗೌರವ,+ವೃದ್ಧರ ಬಿಳಿ ಕೂದಲೇ ಅವ್ರಿಗೆ ಅಲಂಕಾರ.+
30 ಏಟು, ಗಾಯ ಕೆಟ್ಟದನ್ನ ತೆಗಿಯುತ್ತೆ,*+ಹೊಡೆತ ಒಬ್ಬನ ಅಂತರಾಳವನ್ನ ಶುದ್ಧಮಾಡುತ್ತೆ.
ಪಾದಟಿಪ್ಪಣಿ
^ ಬಹುಶಃ, “ಕೊಯ್ಲಿನ ಸಮಯದಲ್ಲಿ ಹುಡುಕ್ತಾನೆ, ಆದ್ರೆ ಏನೂ ಸಿಗಲ್ಲ.”
^ ಅಥವಾ “ಉದ್ದೇಶಗಳು.” ಅಕ್ಷ. “ಸಲಹೆ.”
^ ಅಕ್ಷ. “ಗಂಡು ಮಕ್ಕಳು.”
^ ಅಥವಾ “ಎರಡು ರೀತಿಯ ತೂಕದ ಕಲ್ಲು, ಎರಡು ರೀತಿಯ ಅಳತೆ ಪಾತ್ರೆಗಳು.”
^ ಅಥವಾ “ವಿದೇಶಿ.”
^ ಅಥವಾ “ವಿವೇಕದಿಂದ ಕೂಡಿರೋ ಮಾರ್ಗದರ್ಶನದ.”
^ ಅಥವಾ “ತುಟಿಗಳಿಂದ ಮೋಡಿ ಮಾಡುವವನ.”
^ ಅಥವಾ “ಎರಡು ರೀತಿಯ ತೂಕದ ಕಲ್ಲು.”
^ ಅಥವಾ “ತಿಕ್ಕಿ ಬೆಳಗಿಸುತ್ತೆ.”