ಜ್ಞಾನೋಕ್ತಿ 29:1-27

  • ಹದ್ದುಬಸ್ತಲ್ಲಿ ಇಡದಿದ್ದ ಹುಡುಗ ಅವಮಾನ ತರ್ತಾನೆ (15)

  • ಮಾರ್ಗದರ್ಶನ ಇಲ್ಲದಿದ್ರೆ ಜನ ಮನಸ್ಸು ಬಂದ ಹಾಗೆ ನಡಿತಾರೆ (18)

  • ಕೋಪ ತೋರಿಸುವವನು ಜಗಳ ಹುಟ್ಟಿಸ್ತಾನೆ (22)

  • ದೀನತೆ ಇರುವವನು ಗೌರವ ಪಡಿತಾನೆ (23)

  • ಮನುಷ್ಯನ ಭಯ ಉರ್ಲು (25)

29  ಎಷ್ಟೇ ತಿದ್ದಿದ್ರೂ ಹಠಮಾರಿತನ ಬಿಡದವನು+ಹಠಾತ್ತನೆ ಮುರಿದು ಬೀಳ್ತಾನೆ, ಚೇತರಿಸ್ಕೊಳ್ಳೋಕೆ ಆಗದಷ್ಟರ ಮಟ್ಟಿಗೆ ಬಿದ್ದುಹೋಗ್ತಾನೆ.+   ತುಂಬ ನೀತಿವಂತರಿದ್ರೆ ಜನ ಖುಷಿ ಪಡ್ತಾರೆ,ಕೆಟ್ಟವನು ಆಳುವಾಗ ಜನ ನರಳ್ತಾರೆ.+   ವಿವೇಕವನ್ನ ಪ್ರೀತಿಸೋ ವ್ಯಕ್ತಿ ತನ್ನ ಅಪ್ಪನ ಮನಸ್ಸನ್ನ ಸಂತೋಷ ಪಡಿಸ್ತಾನೆ,+ವೇಶ್ಯೆಯರ ಸಹವಾಸ ಮಾಡೋನು ಆಸ್ತಿ ಹಾಳು ಮಾಡ್ಕೊಳ್ತಾನೆ.+   ರಾಜ ನ್ಯಾಯದಿಂದ ಆಳಿದ್ರೆ ಇಡೀ ದೇಶದಲ್ಲಿ ಶಾಂತಿ ಇರುತ್ತೆ,+ಆದ್ರೆ ಲಂಚ ತಗೊಳ್ಳೋನು ನಾಶ ತರ್ತಾನೆ.   ಪಕ್ಕದ ಮನೆಯವನನ್ನ ಹೊಗಳಿ ಅಟ್ಟಕ್ಕೇರಿಸೋ ವ್ಯಕ್ತಿಅವನ ಕಾಲ ಕೆಳಗೆ ಬಲೆ ಬೀಸ್ತಾನೆ.+   ಕೆಟ್ಟವನು ತನ್ನ ತಪ್ಪಿಂದಾನೇ ಬಲೆಗೆ ಬೀಳ್ತಾನೆ,+ನೀತಿವಂತ ಸಂತೋಷದಿಂದ ಕುಣಿದು ಕುಪ್ಪಳಿಸ್ತಾನೆ.+   ನೀತಿವಂತ ಬಡವರ ಹಕ್ಕುಗಳ ಬಗ್ಗೆ ಆಸಕ್ತಿ ವಹಿಸ್ತಾನೆ,+ಆದ್ರೆ ಕೆಟ್ಟವನು ಅದ್ರ ಬಗ್ಗೆ ತಲೆಕೆಡಿಸ್ಕೊಳ್ಳಲ್ಲ.+   ಬಡಾಯಿ ಕೊಚ್ಕೊಳ್ಳೋನು ಪಟ್ಟಣದಲ್ಲಿ ಕಿಚ್ಚೆಬ್ಬಿಸ್ತಾನೆ,+ಆದ್ರೆ ವಿವೇಕಿ ಕೋಪವನ್ನ ಆರಿಸ್ತಾನೆ.+   ವಿವೇಕಿ ಮೂರ್ಖನ ಜೊತೆ ಜಗಳಕ್ಕೆ ಇಳಿದ್ರೆಮೂರ್ಖ ಕಿರ್ಚಾಡ್ತಾನೆ, ಗೇಲಿ ಮಾಡ್ತಾನೆ, ಆಗ ವಿವೇಕಿಯ ನೆಮ್ಮದಿ ಹಾಳಾಗುತ್ತೆ.+ 10  ಕೊಲೆಗಾರರು ತಪ್ಪು ಮಾಡದವ್ರನ್ನ ದ್ವೇಷಿಸ್ತಾರೆ,+ಪ್ರಾಮಾಣಿಕರ ಪ್ರಾಣ ತೆಗಿಯೋಕೆ ಕಾದು ಕೂತಿರ್ತಾರೆ.* 11  ಮೂರ್ಖ ತನ್ನ ಕೋಪವನ್ನೆಲ್ಲ* ತೋರಿಸ್ತಾನೆ,+ಆದ್ರೆ ವಿವೇಕಿ ಸಮಸ್ಯೆ ಕೊನೆ ಆಗೋ ತನಕ ಶಾಂತವಾಗಿ ಇರ್ತಾನೆ.+ 12  ಅಧಿಕಾರಿ ಸುಳ್ಳುಗಳನ್ನ ನಂಬಿದ್ರೆ,ಸೇವಕರೆಲ್ಲ ಕೆಟ್ಟವ್ರಾಗ್ತಾರೆ.+ 13  ಬಡವನಲ್ಲೂ ದಬ್ಬಾಳಿಕೆ ಮಾಡುವವನಲ್ಲೂ ಒಂದು ವಿಷ್ಯ ಸಾಮಾನ್ಯ,ಅವರಿಬ್ರ ಕಣ್ಣುಗಳಿಗೂ ಕಾಂತಿ ನೀಡಿದವನು ಯೆಹೋವನೇ.* 14  ರಾಜ ಬಡವ್ರಿಗೆ ನ್ಯಾಯವಾಗಿ ತೀರ್ಪು ಕೊಟ್ರೆ,+ಅವನ ಸಿಂಹಾಸನಕ್ಕೆ ಯಾವತ್ತೂ ಏನೂ ಆಗಲ್ಲ.+ 15  ಏಟು,* ತಿದ್ದುಪಾಟು ವಿವೇಕವನ್ನ ಕೊಡುತ್ತೆ,+ಆದ್ರೆ ಹದ್ದುಬಸ್ತಲ್ಲಿ ಇಡದಿದ್ದ ಹುಡುಗ ತನ್ನ ಅಮ್ಮನನ್ನ ಅವಮಾನಕ್ಕೆ ಗುರಿಮಾಡ್ತಾನೆ. 16  ಕೆಟ್ಟವರು ಜಾಸ್ತಿ ಆದಾಗ ಅಪರಾಧಗಳೂ ಜಾಸ್ತಿ ಆಗುತ್ತೆ,ಆದ್ರೆ ಅವರ ನಾಶವನ್ನ ನೀತಿವಂತರು ಕಣ್ಣಾರೆ ನೋಡ್ತಾರೆ.+ 17  ನಿನ್ನ ಮಗನಿಗೆ ಶಿಸ್ತು ಕೊಡು, ಅವನು ನಿನಗೆ ಚೈತನ್ಯ ಕೊಡ್ತಾನೆ,ನಿನಗೆ ತುಂಬ ಸಂತೋಷ ತರ್ತಾನೆ.+ 18  ದೇವರ ಮಾರ್ಗದರ್ಶನ* ಇಲ್ಲದಿದ್ರೆ ಜನ ಮನಸ್ಸು ಬಂದ ಹಾಗೆ ನಡಿತಾರೆ,+ಆದ್ರೆ ನಿಯಮ* ಪಾಲಿಸೋರು ಸಂತೋಷವಾಗಿ ಇರ್ತಾರೆ.+ 19  ಮಾತುಗಳಿಂದ ಒಬ್ಬ ಸೇವಕನನ್ನ ತಿದ್ದೋಕೆ ಆಗಲ್ಲ,ಯಾಕಂದ್ರೆ ವಿಷ್ಯಗಳು ಅರ್ಥವಾದ್ರೂ ಅವನು ಪಾಲಿಸಲ್ಲ.+ 20  ದುಡುಕಿ ಮಾತಾಡೋನನ್ನ ನೋಡಿದ್ದೀಯಾ?+ ಅವನಿಗಿಂತ ಮೂರ್ಖನ ಮೇಲೆ ನಂಬಿಕೆ ಇಡೋದು ಒಳ್ಳೇದು.+ 21  ಸೇವಕನನ್ನ ಚಿಕ್ಕಂದಿಂದ ತಲೆಮೇಲೆ ಕೂರಿಸಿಕೊಂಡ್ರೆ,ಕೊನೆಗೆ ಅವನು ಕೃತಜ್ಞತೆ ತೋರಿಸಲ್ಲ. 22  ಕೋಪ ತೋರಿಸುವವನು ಜಗಳ ಹುಟ್ಟಿಸ್ತಾನೆ,+ಮಾತುಮಾತಿಗೂ ಸಿಟ್ಟು ಮಾಡ್ಕೊಳ್ಳೋನು ತುಂಬ ತಪ್ಪುಗಳನ್ನ ಮಾಡ್ತಾನೆ.+ 23  ಒಬ್ಬನ ಅಹಂಕಾರ ಅವನನ್ನ ತಗ್ಗಿಸುತ್ತೆ,+ದೀನತೆ ಇರುವವನು ಗೌರವ ಪಡಿತಾನೆ.+ 24  ಕಳ್ಳನ ಜೊತೆಗಾರ ತನ್ನನ್ನ ತಾನೇ ದ್ವೇಷಿಸ್ಕೊಳ್ತಾನೆ. ಸಾಕ್ಷಿ ಹೇಳೋಕೆ ಅವನನ್ನ ಕರೆದ್ರೆ* ಅವನು ಬಾಯಿ ಬಿಡೋದೇ ಇಲ್ಲ.+ 25  ಮನುಷ್ಯನ ಭಯ ಉರ್ಲು,+ಆದ್ರೆ ಯೆಹೋವನ ಮೇಲೆ ನಂಬಿಕೆ ಇಟ್ರೆ ಸಂರಕ್ಷಣೆ.+ 26  ಅಧಿಕಾರಿಗಳ ಸಹಾಯಕ್ಕಾಗಿ* ಅನೇಕರು ಓಡೋಡಿ ಹೋಗ್ತಾರೆ,ಆದ್ರೆ ಒಬ್ಬನಿಗೆ ನ್ಯಾಯ ಸಿಗೋ ಹಾಗೆ ಮಾಡುವವನು ಯೆಹೋವನೇ.+ 27  ಅನ್ಯಾಯ ಮಾಡುವವನು ನೀತಿವಂತನಿಗೆ ಅಸಹ್ಯ,+ಪ್ರಾಮಾಣಿಕವಾಗಿ ನಡಿಯುವವನು ಕೆಟ್ಟವನಿಗೆ ಅಸಹ್ಯ.+

ಪಾದಟಿಪ್ಪಣಿ

ಬಹುಶಃ, “ತಪ್ಪು ಮಾಡದವನ ಜೀವ ಕಾಪಾಡೋಕೆ ಪ್ರಾಮಾಣಿಕ ದಾರಿ ಹುಡುಕ್ತಾ ಇರ್ತಾನೆ.”
ಅಥವಾ “ತನ್ನ ಭಾವನೆಗಳನ್ನೆಲ್ಲ.”
ಅದು, ಅವರಿಬ್ರಿಗೂ ಜೀವ ಕೊಟ್ಟವನು ಆತನೇ.
ಅಥವಾ “ಶಿಸ್ತು, ಶಿಕ್ಷೆ.”
ಅಥವಾ “ಪ್ರವಾದನಾತ್ಮಕ ದರ್ಶನ, ಪ್ರಕಟನೆ.”
ಅಥವಾ “ದೇವರ ನಿಯಮ.”
ಅಥವಾ “ಶಾಪ ತರೋ ಆಣೆ ಮಾಡಿಸಿದ್ರೂ.”
ಬಹುಶಃ, “ಅನುಗ್ರಹ ಪಡಿಯೋಕೆ.”