ಒಂಚೂರು ತಾಳು
ಡೌನ್‌ಲೋಡ್:
1. ಹೊಸಲೋಕವ ನೀ ಕಾಣು
ಬಲು ಸುಂದರ ನೋಡು
ಚಳಿಗಾಳಿ ತಂಪು ನೀರೂ
ಗಿಡತುಂಬ ಹಣ್ಣಿನ್ ಗೊಂಚಲು
ಇಂದು ನಿನ್ಗೆ ನೋವಿದ್ರು
ಇಂಥ ಪರ್ದೈಸ್ ಕಾದಿರು
ಅಲ್ಲಿ ಇಲ್ಲ ಕಣ್ಣೀರು
ತಾಳು ನೀನು ಒಂಚೂರು
2. ಕೊನೆಗು ಬಂದಾಯ್ತು ನೋಡು
ಕೊನೆಯಿಲ್ದ ಜೀವನ
ಮರೆಯಾಯ್ತು ಸುಕ್ಕು ಸುಸ್ತು
ಪಡೆದಾಗ ಹೋದ ಯೌವನ
ಉಲ್ಲಾಸದ ಸಿಂಚನ
ನಗುತ್ತಾ ಶುರು ದಿನ
ಇಲ್ಲ ದೂರ ಆ ತಾಣ
ತಾಳು ನೀನು ಒಂಚೂರು
(BRIDGE)
ಹಕ್ಕಿಜೊತೆ ನಾ ಹಾಡುವೆ
ಯೆಹೋವನೇ ನಿನ್ಗೆ ಸ್ತುತಿ
ಬಂಗಾರದ ಈ ಬಾಳಿಗೆ
ಎಂದೆಂದಿಗು ನಿನ್ಗೆ ಋಣಿ
3. ಮೃತರೆಲ್ಲಾ ಎದ್ದು ಬಂದ್ರು
ಖಾಲಿಯಾಯ್ತು ಸ್ಮಶಾನ
ಜೀವ ಹೋದ ಹೂಗಳೆಲ್ಲಾ
ಮತ್ತೆ ಬಂದಾಗೆಂಥ ಸಂಭ್ರಮ
ನಾನುನೂ ಕಾಯುತ್ತಿದ್ದೆ
ಅಪ್ಪಲು ನನ್ ಚಿನ್ನೂನ
ಆಗ ಕಂಡೆ ನನ್ ಕಂದ
ಬಂದ್ಲೂ ಮತ್ತೆ ಜೀವಂತ
(BRIDGE)
ಯೆಹೋವನೇ ಸಮಾಧಿಯು
ನಿನ್ ಶಕ್ತಿಗೆ ಸೋತ್ಹೋಗಿದೆ
ಸಂತೋಷದ ಕಣ್ಣೀರಲ್ಲೇ
ನಾ ಹಾಡುವೆ ನಿಂಗೆ ಸ್ತುತಿ
4. ಬೇಡ ನಿನ್ಗೆ ಶಂಕೆ
ಯಾಹು ಕೊಟ್ಟ ಮಾತಿದು
ಅವನಲ್ಲಿ ಇಲ್ಲ ಸುಳ್ಳು
ಇದು ಖಾತರಿ ನೀ ಕಾದಿರು
ಇದ್ರೆ ಇಂಥಹ ನಿರೀಕ್ಷೆ
ಮತ್ತೆ ಯಾಕೆ ನಿರಾಶೆ
ಇನ್ನೂ ಬೇಡ ಹತಾಶೆ
ತಾಳು ನೀನು ಒಂಚೂರು