ಬಾ ನೋಡು ಈ ಬೀಡು
ಡೌನ್ಲೋಡ್:
1. ಹೂದೋಟವೇ ನಿನ್ ಕಣ್ಮುಂದೆ
ಕೊಂಡೊಯ್ಯುವೆ ಶಾಂತಿ ಲೋಕಕ್ಕೆ.
ಬಾ ನೋಡು,
ನೀ ನೋಡು,
ಈ ಬೀಡು.
2. ಸಂತೋಷಕ್ಕೆ ಮಿತಿ ಇಲ್ಲದ,
ಸೌಂದರ್ಯಕ್ಕೆ ಸಾಟಿ ಇಲ್ಲದ,
ಈ ನಾಡು,
ಬಾ ನೋಡು,
ನೀ ನೋಡು.
(ಪಲ್ಲವಿ)
ಈ ರಾಜ್ಯ,
ನಮ್ಮ ನಿರೀಕ್ಷೆ ಈ ಸಾಮ್ರಾಜ್ಯ.
ಈ ರಾಜ್ಯ,
ಯೆಹೋವನಾಸೆಯು ಈ ಸಾಮ್ರಾಜ್ಯ.
3. ಜೀವ ಮರಳಿ ಬಂದಾಗಿದೆ,
ನೋವೆಲ್ಲವೂ ಕಣ್ಮರೆಯಾಗಿದೆ.
ಬಾ ನೋಡು,
ನೀ ನೋಡು,
ಈ ನಾಡು.
4. ಇನ್ಮುಂದೆ ಬಾಳು ರೋಮಾಂಚನ,
ಸದಾ ನಗುವು ಇದೆ ಜೀವನ.
ಬಾ ನೋಡು,
ನೀ ನೋಡು,
ಈ ಬೀಡು.
(ಪಲ್ಲವಿ)
ಈ ರಾಜ್ಯ,
ನಮ್ಮ ನಿರೀಕ್ಷೆ ಈ ಸಾಮ್ರಾಜ್ಯ.
ಈ ರಾಜ್ಯ,
ಯೆಹೋವನಾಸೆಯು ಈ ಸಾಮ್ರಾಜ್ಯ.
5. ಯೆಹೋವನ ವಾಕ್ಯ ಮಾರ್ಗವು,
ಆ ವಾಕ್ಯವೇ ದಾರಿ ದೀಪವು.
(ಅನುಪಲ್ಲವಿ)
ಈ ಮಾರ್ಗ,
ನೋಡೀಗ.
ಈ ಸುಯೋಗ,
ಕಣ್ಮುಂದೆ ನೋಡು ಈಗ
ನೀನು.
6. ಎಲ್ಲೆಲ್ಲೂ ಮುಗುಳ್ನಗು,
ಯೆಹೋವನು ತಂದ ಈ ನಗು.
ಬಾ ನೋಡು,
ನೀ ನೋಡು,
ಈ ಬೀಡು.