ಗೀತೆ 58
ಯೋಗ್ಯರನು ಪತ್ತೆ ಹಚ್ಚೋಣ
(ಲೂಕ 10:6)
-
1. ಸಾರಿ ಸಂದೇಶ, ಯೇಸು ಹೇಳಿದ.
ದಿನ ನಿತ್ಯ, ಬಹುದೂರ,
ಎಲ್ಲೆಲ್ಲೂ ಸತ್ಯ ಸಾರಿದ.
ಭೂಮೀಲಿ ಯೇಸು ಯೋಗ್ಯ ರೀತಿಯ,
ಜನರನ್ನು ಹುಡುಕಾಡಿ,
ಪ್ರೀತಿ ತೋರಿದ.
ನಾವೆಲ್ಲರೂ ಕಷ್ಟಾಂತ್ಯದ,
ಸುವಾರ್ತೆಯನ್ನು ಹಂಚುವ,
ಎಲ್ಲಾ ಕಡೆ ಮುಟ್ಟಲಿ ಜೀವವಾಕ್ಯ.
(ಪಲ್ಲವಿ)
ಈ ಜಗದಿ,
ಹಂಚೋಣವೇ ಸಿಹಿ ಸುದ್ದೀನ.
ಯೋಗ್ಯರನು,
ಸಂತೋಷದಿ ಪತ್ತೆ ಹಚ್ಚೋಣ.
ಭೂಮಿಯಲಿ,
ಸಾರೋವಾಗ.
-
2. ಕಾಯಲ್ಲ ಕಾಲ, ಸಾರುತ್ತಾ ಇರಿ.
ಮಹಾ ಅಂತ್ಯ ಬರೋ ಮುಂಚೆ,
ಅನೇಕ ಜೀವ ಕಾಪಾಡಿ.
ತೋರೋಣ ಪ್ರೀತಿ, ಮತ್ತೆ ಸಂದಿಸಿ.
ದಿಕ್ಕಿಲ್ಲದ ಜನರನ್ನು,
ಮಾರ್ಗದರ್ಶಿಸಿ.
ಯೆಹೋವನ ಆಹ್ವಾನಕೆ,
ಉತ್ಸಾಹ ತೋರಿ ಬಂದರೆ,
ಉಂಟಾಗುವ ಹರ್ಷವೇ ನಮ್ಮ ಸ್ಪೂರ್ತಿ.
(ಪಲ್ಲವಿ)
ಈ ಜಗದಿ,
ಹಂಚೋಣವೇ ಸಿಹಿ ಸುದ್ದೀನ.
ಯೋಗ್ಯರನು,
ಸಂತೋಷದಿ ಪತ್ತೆ ಹಚ್ಚೋಣ.
ಭೂಮಿಯಲಿ,
ಸಾರೋವಾಗ.
(ಯೆಶಾ. 52:7; ಮತ್ತಾ. 28:19,20; ಲೂಕ 8:1; ರೋಮ. 10:10 ಸಹ ನೋಡಿ)