ಸದಾ ಎಚ್ಚರವಾಗಿರಿ!
ಒಂದು ವರ್ಷ ಆದ್ರೂ ಮುಗಿಯದ ಉಕ್ರೇನ್ ಯುದ್ಧ—ನಿರೀಕ್ಷೆ ಕೊಡೋ ವಿಷಯ ಬೈಬಲಲ್ಲಿ ಇದ್ಯಾ?
ಶುಕ್ರವಾರ, ಫೆಬ್ರವರಿ 24, 2023ಕ್ಕೆ ಉಕ್ರೇನಲ್ಲಿ ಯುದ್ಧ ಆರಂಭವಾಗಿ ಒಂದು ವರ್ಷ ಆಯ್ತು. ಕೆಲವು ವರದಿ ಪ್ರಕಾರ, ಯುದ್ಧದಲ್ಲಿ ಸುಮಾರು 3,00,000 ಉಕ್ರೇನಿನ ಮತ್ತು ರಷ್ಯಾದ ಸೈನಿಕರು ತೀರಿಹೋಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಸುಮಾರು 30,000 ನಾಗರಿಕರು ಯುದ್ಧದಲ್ಲಿ ಮೃತಪಟ್ಟಿರೋ ಸಾಧ್ಯತೆ ಇದೆ. ಆದ್ರೆ ಈ ಸಂಖ್ಯೆಗಳು ಇನ್ನೂ ಜಾಸ್ತಿನೇ ಇರಬಹುದು.
ದುಃಖದ ವಿಷಯ ಏನಂದ್ರೆ ಈ ಯುದ್ಧ ಬೇಗ ಮುಗಿಯೋ ಹಾಗೆ ಕಾಣಿಸ್ತಾ ಇಲ್ಲ.
“ರಷ್ಯಾದ ಸೈನ್ಯ ಉಕ್ರೇನ್ನಲ್ಲಿ ಕಾಲಿಟ್ಟು ಒಂದು ವರ್ಷ ಆದ್ರೂ, ಯುದ್ಧ ಮುಗಿತಾನೇ ಇಲ್ಲ. ಆಕಡೆ ಒಂದು ದೇಶ ಗೆಲ್ಲುತ್ತೆ ಅಂತಾನೂ ಹೇಳಕ್ಕಾಗ್ತಿಲ್ಲ. ಈಕಡೆ ಎರಡೂ ದೇಶದವರು ಮಾತಾಡಿ ಒಪ್ಪಂದಕ್ಕೆ ಬರ್ತಾರೆ ಅಂತಾನೂ ಹೇಳಕ್ಕಾಗ್ತಿಲ್ಲ.”—NPR (ನ್ಯಾಷನಲ್ ಪಬ್ಲಿಕ್ ರೇಡಿಯೋ), ಫೆಬ್ರವರಿ 19, 2023.
ಈ ಯುದ್ಧ ಮತ್ತು ಲೋಕದಲ್ಲಿ ಆಗ್ತಿರೋ ಬೇರೆ ಯುದ್ಧಗಳಿಂದ ಅಮಾಯಕ ಜನರು ತುಂಬ ನೋವನ್ನ ಅನುಭವಿಸ್ತಿದ್ದಾರೆ. ಅವರ ಕಷ್ಟ-ದುಃಖ ನೋಡಿ ತುಂಬ ಜನ್ರಿಗೆ ಬೇಜಾರಾಗುತ್ತೆ. ಇಂತಹ ಪರಿಸ್ಥಿತಿ ಬಗ್ಗೆ ಬೈಬಲ್ ಏನಾದ್ರೂ ಹೇಳಿದ್ಯಾ? ಈ ಯುದ್ಧಗಳಿಗೆ ಕೊನೆ ಅನ್ನೋದು ಇದ್ಯಾ?
ಎಲ್ಲಾ ಯುದ್ಧಗಳಿಗೆ ಅಂತ್ಯ ಹಾಡೋ ಒಂದು ಮಹಾ ಯುದ್ಧ
ಇಡೀ ಮಾನವ ಸಮಾಜವನ್ನ ರಕ್ಷಿಸೋ ಒಂದು ಯುದ್ಧದ ಬಗ್ಗೆ ಬೈಬಲ್ ತಿಳಿಸುತ್ತೆ. ಅದೇ ಹರ್ಮಗೆದೋನ್ ಯುದ್ಧ. ಅದು “ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ ಯುದ್ಧ.” (ಪ್ರಕಟನೆ 16:14, 16) ಈ ಯುದ್ಧದ ಮೂಲಕ ದೇವರು ಏನು ಮಾಡ್ತಾನೆ ಗೊತ್ತಾ? ಎಷ್ಟೋ ಯುದ್ಧಗಳನ್ನ ಮಾಡಿ ತುಂಬ ಹಾನಿಗೆ ಕಾರಣವಾಗಿರೋ ಎಲ್ಲ ಮಾನವ ಸರ್ಕಾರಗಳನ್ನ ಹೇಳಹೆಸರಿಲ್ಲದಂತೆ ಮಾಡ್ತಾನೆ. ಈ ಹರ್ಮಗೆದೋನ್ ಯುದ್ಧ ಶಾಂತಿಯನ್ನ ಹೇಗೆ ತರುತ್ತೆ ಅಂತ ತಿಳಿಯೋಕೆ ಈ ಕೆಳಗಿರೋ ಲೇಖನಗಳನ್ನ ನೋಡಿ: