ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಡಗಡೆ: Olena Yefremkina/stock.adobe.com; ಮಧ್ಯ: lunamarina/stock.adobe.com; ಬಲಗಡೆ: Rido/stock.adobe.com

ಸದಾ ಎಚ್ಚರವಾಗಿರಿ!

ನೀವು ಯಾರನ್ನ ನಂಬಬಹುದು?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ನೀವು ಯಾರನ್ನ ನಂಬಬಹುದು?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಕೆಲವ್ರನ್ನ ನಾವು ತುಂಬ ನಂಬ್ತೀವಿ. ಆದ್ರೆ ಅವರು ನಮ್ಮ ನಂಬಿಕೆ ಉಳಿಸ್ಕೊಳ್ಳದೇ ಹೋದ್ರೆ ಬೇಜಾರ್‌ ಆಗಿಬಿಡ್ತೀವಿ. ಇವತ್ತು ಜನ ಕೆಲವ್ರಲ್ಲಿ ನಂಬಿಕೆ ಕಳ್ಕೊಳ್ತಿದ್ದಾರೆ:

  •   ರಾಜಕೀಯ ನಾಯಕರು: ಕೆಲವರು ಜನ್ರ ಬಗ್ಗೆ ಯೋಚಿಸದೇ, ಒಳ್ಳೆದು ಮಾಡದೇ ತಮ್ಮ ಸ್ವಾರ್ಥದ ಬಗ್ಗೆನೇ ಯೋಚಿಸ್ತಿದ್ದಾರೆ.

  •   ನ್ಯೂಸ್‌ ಮೀಡಿಯಾ: ಇದಿದ್ದನ್ನ ಇದ್ದ ಹಾಗೆ ಹೇಳದೇ ರೆಕ್ಕೆಪುಕ್ಕ ಕಟ್ಟಿ ಸತ್ಯನ ಮರೆಮಾಚ್ತಿದ್ದಾರೆ.

  •   ವಿಜ್ಞಾನಿಗಳು: ಜನ್ರಿಗೆ ಒಳ್ಳೆದು ಆಗೋ ತರ ಮಾಡೋ ಸಂಶೋಧನೆಗಳನ್ನ ಕಮ್ಮಿ ಮಾಡಿಬಿಟ್ಟಿದ್ದಾರೆ.

  •   ಧರ್ಮಗುರುಗಳು: ಕೆಲವರು ದೇವರ ಬಗ್ಗೆ ಮಾತಾಡೋದಕ್ಕಿಂತ ರಾಜಕೀಯ ವಿಷ್ಯಗಳಲ್ಲಿ ತಲೆ ಹಾಕೋದು ಜಾಸ್ತಿ ಮಾಡಿಬಿಟ್ಟಿದ್ದಾರೆ.

 ಯಾರನ್ನೂ ಕಣ್ಮುಚ್ಚಿ ನಂಬಬಾರದು. ಇದ್ರ ಬಗ್ಗೆ ಬೈಬಲಲ್ಲಿ ಈ ಎಚ್ಚರಿಕೆ ಇದೆ:

  •   “ದೊಡ್ಡದೊಡ್ಡ ಅಧಿಕಾರಿಗಳ ಮೇಲಾಗಲಿ, ಮನುಷ್ಯರ ಮೇಲಾಗಲಿ ಭರವಸೆ ಇಡಬೇಡಿ, ಅವರು ರಕ್ಷಣೆ ಕೊಡೋಕೆ ಆಗಲ್ಲ.”—ಕೀರ್ತನೆ 146:3.

ನೀವು ಯಾರನ್ನ ನಂಬಬಹುದು ಗೊತ್ತಾ?

 ಯೇಸು ಕ್ರಿಸ್ತನನ್ನ ನೀವು ನಂಬಬಹುದು ಅಂತ ಬೈಬಲ್‌ ಹೇಳುತ್ತೆ. ನೂರಾರು ವರ್ಷಗಳ ಹಿಂದೆ ಜೀವಿಸಿದ ಯೇಸು ಬರೀ ಒಳ್ಳೇ ವ್ಯಕ್ತಿ ಅಲ್ಲ. ಯಾಕಂದ್ರೆ ದೇವರು ಯೇಸುವನ್ನ ತನ್ನ ಆಳ್ವಿಕೆಯ “ರಾಜನಾಗಿ” ಮಾಡಿದ್ದಾನೆ. “ಆತನ ಆಳ್ವಿಕೆಗೆ ಅಂತ್ಯಾನೇ ಇಲ್ಲ.” (ಲೂಕ 1:32, 33) ದೇವರ ಆಳ್ವಿಕೆ ಅಂದ್ರೆ ದೇವರ ಸರ್ಕಾರ, ಇದು ಈಗ ಸ್ವರ್ಗದಿಂದ ಆಳ್ತಿದೆ.—ಮತ್ತಾಯ 6:10.