ಸದಾ ಎಚ್ಚರವಾಗಿರಿ!
ಭೂಮಿಯನ್ನ ನಾಶ ಮಾಡ್ತಿದ್ದಾರೆ—ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಏಪ್ರಿಲ್ 4, 2022ರಂದು ಇಂಟರ್ಗವರ್ಮೆಂಟಲ್ ಪಾನಲ್ ಆನ್ ಕ್ಲೈಮೆಟ್ ಚೇಂಜ್ ವರದಿಯನ್ನ ನೋಡಿ ಯುನೈಟೆಡ್ ನೇಷನ್ನ ಜನರಲ್ ಸೆಕ್ರಟರಿಯಾಗಿರೋ ಆಂಟನಿಯೋ ಗುಟರೆಸ್ ಹೇಳಿರೋದೇನಂದ್ರೆ: “ಪ್ರಕೃತಿ ವಿಕೋಪ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಪಟ್ಟಣಗಳು ಪ್ರವಾಹದಿಂದ ಮುಳುಗುತ್ತಿವೆ, ಅತಿಯಾದ ತಾಪಮಾನ, ಚಂಡಮಾರುತ, ನೀರಿನ ಅಭಾವ ಎಲ್ಲ ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಲಕ್ಷಾಂತರ ಪ್ರಾಣಿ-ಪಕ್ಷಿಗಳು, ಗಿಡ-ಮರಗಳು ಅಳಿದುಹೋಗ್ತಿವೆ. ಇದು ಕಟ್ಟುಕಥೆಯಲ್ಲ, ಎಲ್ಲರೂ ಒಪ್ಕೊಳ್ಳಲೇ ಬೇಕಾದ ಘೋರ ಸತ್ಯ. ಇದು ಹೀಗೆ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ವಿಜ್ಞಾನ ಹೇಳುತ್ತೆ.”
ಜೂನ್ 15 2022ರ ದ ನ್ಯೂಯಾರ್ಕ್ ಟೈಮ್ಸ್ ವಾರ್ತಾ ಪತ್ರಿಕೆಯಲ್ಲಿ “ಫ್ಲಡಿಂಗ್ ಕೆಯೋಸ್ ಇನ್ ಯೆಲ್ಲೋಸ್ಟೋನ್, ಎ ಸೈನ್ ಆಫ್ ಕ್ರೈಸಿಸ್ ಟು ಕಮ್” ಅನ್ನೋ ಲೇಖನ ಇದರ ಬಗ್ಗೆ ಹೀಗೆ ಅನ್ನುತ್ತೆ: “ಹವಮಾನದಲ್ಲಿ ಬದಲಾವಣೆ ಮತ್ತು ತಾಪಮಾನದಲ್ಲಿ ಏರಿಕೆ ಆಗ್ತಾ ಇರೋದ್ರಿಂದ ಅಮೆರಿಕದಲ್ಲಿರೋ 423 ಪಾರ್ಕ್ಗಳು ಇನ್ನೂ ಕೆಲವೇ ವರ್ಷಗಳಲ್ಲಿ ನಾಶ ಆಗೋ ಸಾಧ್ಯತೆ ಇದೆ ಅಂತ ವಿಜ್ಞಾನಿಗಳು ತುರ್ತಿನಿಂದ ಎಚ್ಚರಿಸುತ್ತಿದ್ದಾರೆ. ಬೆಂಕಿ ಮತ್ತು ಪ್ರಳಯ, ಹಿಮ ಕರಗುವಿಕೆ, ಸಮುದ್ರದ ನೀರಿನ ಮಟ್ಟ ಏರುವುದು ಮತ್ತು ಉಷ್ಣತೆ ಇವೆಲ್ಲ ಬೈಬಲಲ್ಲಿ ಹೇಳಿರೋ ತರಾನೇ ಇದೆಯೇನೋ ಅಂತ ಅನಿಸುತ್ತೆ.”
ಈ ಸಮಸ್ಯೆಗಳೆಲ್ಲ ಬಗೆಹರಿಯುತ್ತಾ? ಯಾರು ಬಗೆಹರಿಸುತ್ತಾರೆ? ಬೈಬಲ್ ಇದರ ಬಗ್ಗೆ ಏನು ಹೇಳುತ್ತೆ ಅಂತ ನೋಡೋಣ.
ಹಾನಿಯ ಮುನ್ಸೂಚನೆ
“ಭೂಮಿಯನ್ನ ನಾಶಮಾಡ್ತಿರೋ ಜನ್ರನ್ನ” ದೇವರು ನಾಶಮಾಡುತ್ತಾನೆ ಅಂತ ಬೈಬಲ್ ಹೇಳುತ್ತೆ. (ಪ್ರಕಟನೆ 11:18) ಈ ವಚನದಿಂದ ನಮಗೆ ಗೊತ್ತಾಗೋ ಮೂರು ವಿಷಯಗಳು ಯಾವುದಂದ್ರೆ:
1. ಈ ಹಾನಿಗೆಲ್ಲ ಕಾರಣ ಮನುಷ್ಯರೇ.
2. ಈಗ ಆಗ್ತಿರೋ ನಾಶನಕ್ಕೆ ಒಂದು ಅಂತ್ಯ ಖಂಡಿತ ಇದೆ.
3. ಈ ಸಮಸ್ಯೆಯನ್ನ ಮನುಷ್ಯರಲ್ಲ, ದೇವರೇ ಬಗೆಹರಿಸುತ್ತಾನೆ.
ಭೂಮಿ ಅಳಿಯಲ್ಲ
“ಭೂಮಿ ಶಾಶ್ವತವಾಗಿ ಇರುತ್ತೆ” ಅಂತ ಬೈಬಲ್ ಹೇಳುತ್ತೆ. (ಪ್ರಸಂಗಿ 1:4) ಅದರಲ್ಲಿ ಮನುಷ್ಯರು ಯಾವಾಗಲೂ ಇದ್ದೇ ಇರುತ್ತಾರೆ.
“ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.”—ಕೀರ್ತನೆ 37:29.
ಭೂಮಿಗಾಗಿರೋ ಹಾನಿಯನ್ನೆಲ್ಲ ಸರಿಮಾಡಲಾಗುತ್ತೆ.
“ಕಾಡು ಮತ್ತು ಬರಡು ಭೂಮಿ ಸಂಭ್ರಮಪಡುತ್ತೆ, ಬಯಲು ಪ್ರದೇಶ ಉಲ್ಲಾಸಿಸ್ತಾ ಹೂಗಳಿಂದ ಕಂಗೊಳಿಸುತ್ತೆ.”—ಯೆಶಾಯ 35:1.