ಸ್ಮರಣೆಯ ಅಭಿಯಾನ
ಯೇಸು ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ
ಭೂಮಿಯಲ್ಲಿದ್ದಾಗ ತನ್ನ ಪ್ರಾಣವನ್ನೇ ಕೊಡುವಷ್ಟರ ಮಟ್ಟಿಗೆ ಯೇಸು ಜನರನ್ನ ಪ್ರೀತಿಸಿದನು. (ಮತ್ತಾಯ 20:28; ಯೋಹಾನ 15:13) ದೇವರ ಸರ್ಕಾರದ ರಾಜನಾಗಿರೋ ಯೇಸು ತನ್ನ ಅಧಿಕಾರವನ್ನ ಬಳಸಿ ‘ಭೂಮಿಯ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡೋ’ ಮೂಲಕ ಜನರ ಮೇಲೆ ತನಗೆಷ್ಟು ಪ್ರೀತಿಯಿದೆ ಅಂತ ಮತ್ತೊಮ್ಮೆ ತೋರಿಸಿಕೊಡ್ತಾನೆ.—ಕೀರ್ತನೆ 46:9.
ಯೇಸು ಏನು ಮಾಡ್ತಾನೆ ಅಂತ ಬೈಬಲ್‌ನಲ್ಲಿ ತಿಳಿಸಿರೋ ವಿಷಯವನ್ನ ಗಮನಿಸಿ:
“ಅವನು ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ ಕಾಪಾಡ್ತಾನೆ, ದೀನರನ್ನ, ಸಹಾಯಕ್ಕಾಗಿ ಯಾರೂ ಇಲ್ಲದವ್ರನ್ನ ರಕ್ಷಿಸ್ತಾನೆ. ದೀನರ ಮೇಲೆ, ಬಡಬಗ್ಗರ ಮೇಲೆ ಅವನಿಗೆ ಕನಿಕರ ಇರುತ್ತೆ, ಬಡವರ ಜೀವವನ್ನ ಕಾಪಾಡ್ತಾನೆ. ಅವನು ಅವ್ರನ್ನ ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ.”—ಕೀರ್ತನೆ 72:12-14.
ಯೇಸು ಈ ಹಿಂದೆ ಮಾಡಿರೋ ಮತ್ತು ಮುಂದೆ ಮಾಡಲಿರೋ ವಿಷಯಗಳಿಗೆ ನಾವು ಹೇಗೆ ಥ್ಯಾಂಕ್ಸ್ ಹೇಳಬಹುದು? ಲೂಕ 22:19ರಲ್ಲಿ ಯೇಸು ತನ್ನ ಹಿಂಬಾಲಕರಿಗೆ ತನ್ನ ಮರಣವನ್ನ ನೆನಪಿಸಿಕೊಳ್ಳೋಕೆ ಹೇಳಿದನು. ಅದಕ್ಕೇ ಪ್ರತಿ ವರ್ಷ ಯೆಹೋವನ ಸಾಕ್ಷಿಗಳು ಆತನ ಮರಣವನ್ನ ಸ್ಮರಿಸೋಕೆ ಒಟ್ಟಿಗೆ ಸೇರಿ ಬರ್ತಾರೆ. 2024, ಮಾರ್ಚ್ 24ರ ಭಾನುವಾರದಂದು ನಡೆಯೋ ಯೇಸುವಿನ ಮರಣದ ಸ್ಮರಣೆಗೆ ನಿಮ್ಮನ್ನ ಆಮಂತ್ರಿಸಲು ಖುಷಿಪಡ್ತೀವಿ.