ಸದಾ ಎಚ್ಚರವಾಗಿರಿ!
ರಾಜಕೀಯ ವ್ಯವಸ್ಥೆ ಜನ್ರಲ್ಲಿ ಯಾಕೆ ಒಡಕನ್ನ ತರುತ್ತಿದೆ?—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಈ ಲೋಕದಲ್ಲಿರೋ ಎಷ್ಟೋ ದೇಶಗಳಲ್ಲಿ ಬೇರೆಬೇರೆ ರಾಜಕೀಯ ಪಕ್ಷಗಳಿವೆ. 2022ರಲ್ಲಿ ಪ್ಯೂ ರಿಸರ್ಚ್ ಸೆಂಟರ್ 19 ದೇಶಗಳಲ್ಲಿ ಒಂದು ಸರ್ವೇ ಮಾಡಿದಾಗ ಸಿಕ್ಕ ವರದಿ ಏನಂದ್ರೆ: “ತಮ್ಮ ದೇಶದಲ್ಲೇ ಬೇರೆಬೇರೆ ರಾಜಕೀಯ ಪಕ್ಷಗಳಿರೋದ್ರಿಂದ, ಆ ಪಕ್ಷಗಳಲ್ಲಿರೋ ಜನ್ರ ಮಧ್ಯನೇ ತುಂಬ ಹೊಡೆದಾಟ ಮತ್ತು ಜಗಳಗಳು ನಡೀತಿವೆ ಅಂತ 65% ಜನ್ರು ಹೇಳ್ತಾರೆ.”
ನೀವಿರೋ ಸ್ಥಳದಲ್ಲೂ ರಾಜಕೀಯ ಪಕ್ಷಗಳಿಂದ ಜನ್ರ ಮಧ್ಯ ಒಡಕು ಬರೋದನ್ನ ಗಮನಿಸಿದ್ದೀರಾ? ಯಾಕೆ ಹಾಗೆ ಆಗ್ತಿದೆ? ಅದಕ್ಕೇನಾದ್ರೂ ಪರಿಹಾರ ಇದೆಯಾ? ಬೈಬಲ್ ಇದ್ರ ಬಗ್ಗೆ ಏನು ಹೇಳುತ್ತೆ ನೋಡಿ.
ಜನ್ರ ನಡತೆ ಒಡಕು ತರುತ್ತಿದೆ
ಬೈಬಲ್ ಹೇಳೋ ಪ್ರಕಾರ, ನಾವೀಗ ಜೀವಿಸ್ತಿರೋದು “ಕೊನೇ ದಿನಗಳಲ್ಲಿ.” ಹಾಗಾಗಿ ಜನ್ರ ನಡತೆಯಿಂದ ಇವತ್ತು ಒಗ್ಗಟ್ಟನ್ನ ತರೋಕೆ ಆಗಲ್ಲ.
“ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ. ಯಾಕಂದ್ರೆ ತಮ್ಮ ಬಗ್ಗೆನೇ ಯೋಚಿಸುವವರು. . . ಯಾವುದಕ್ಕೂ ಒಪ್ಪದವರು” ಆಗಿರ್ತಾರೆ.—2 ತಿಮೊತಿ 3:1-3.
ಜನ ಇವತ್ತು ಎಷ್ಟೇ ಪ್ರಯತ್ನ ಮಾಡಿದ್ರೂ ಸರ್ಕಾರಕ್ಕೆ ಚೆನ್ನಾಗಿ ಆಳ್ವಿಕೆ ಮಾಡೋಕೆ ಆಗ್ತಿಲ್ಲ. ಜನ್ರ ಪ್ರಯತ್ನ ಎಲ್ಲಾ ಮಣ್ಣು ಮುಕ್ಕುತ್ತಿವೆ. ಯಾಕಂದ್ರೆ ಪ್ರತಿಯೊಬ್ರ ಯೋಚನೆ ತುಂಬ ವಿಭಿನ್ನವಾಗಿರೋದ್ರಿಂದ ಎಲ್ರೂ ಒಟ್ಟಿಗೆ ಸೇರಿ ಸಮಸ್ಯೆಯನ್ನ ಬಗೆಹರಿಸೋಕೆ ಆಗ್ತಿಲ್ಲ. ಪರಿಸ್ಥಿತಿ ಈ ತರ ಆಗುತ್ತೆ ಅಂತ ಬೈಬಲ್ ಎಷ್ಟೋ ವರ್ಷಗಳ ಮುಂಚೆನೇ ಹೇಳಿತ್ತು.
“ಮನುಷ್ಯ ಮನುಷ್ಯನ ಮೇಲೆ ಅಧಿಕಾರ ನಡೆಸಿ ಹಾನಿ ಮಾಡಿದ್ದಾನೆ.”—ಪ್ರಸಂಗಿ 8:9.
ಹಾಗಿದ್ರೂ ಈ ಸಮಸ್ಯೆಗೆ ಪರಿಹಾರ ಇದೆ ಅಂತ ಬೈಬಲ್ ಹೇಳುತ್ತೆ. ಸೋಂಕಂತೆ ಹರಡಿಕೊಂಡಿರೋ ಈ ಸಮಸ್ಯೆಗಳನ್ನ ಸರಿಮಾಡೋ ಒಬ್ಬ ಒಳ್ಳೇ ನಾಯಕನಿರೋ ಒಂದು ಸರ್ಕಾರ ಬರುತ್ತೆ.
ಕಾಳಜಿ ತೋರಿಸೋ ಒಬ್ಬ ಸಮರ್ಥ ನಾಯಕ
ಈ ಸಮಸ್ಯೆಗಳನ್ನೆಲ್ಲ ಸರಿಮಾಡೋ ಸಾಮರ್ಥ್ಯ ಇರೋ ಒಬ್ಬ ನಾಯಕನ ಬಗ್ಗೆ ಬೈಬಲ್ ಹೇಳುತ್ತೆ. ಅವನೇ ಯೇಸು ಕ್ರಿಸ್ತ. ಯೇಸುಗೆ ಜನ್ರಲ್ಲಿ ಒಗ್ಗಟ್ಟು ಮತ್ತು ಶಾಂತಿ ತರೋ ಆಸೆ ಇದೆ. ಅಷ್ಟೇ ಅಲ್ಲ, ಇದನ್ನೆಲ್ಲ ಮಾಡೋ ಶಕ್ತಿ ಮತ್ತು ಅಧಿಕಾರ ಇದೆ.
“ಅವನ ಕಾಲದಲ್ಲಿ ನೀತಿವಂತರು ಅಭಿವೃದ್ಧಿ ಆಗ್ತಾರೆ. . . ಎಲ್ಲ ಕಡೆ ಶಾಂತಿ ತುಂಬಿತುಳುಕುತ್ತೆ.”—ಕೀರ್ತನೆ 72:7.
“ಎಲ್ಲ ಜನಾಂಗದ ಜನ್ರು ಅವನ ಸೇವೆಮಾಡ್ತಾರೆ.”—ಕೀರ್ತನೆ 72:11.
ಯೇಸು ಜನ್ರಿಗೆ ಸಹಾಯ ಮಾಡೋ, ಕಾಳಜಿ ತೋರಿಸೋ ಒಬ್ಬ ಒಳ್ಳೇ ನಾಯಕ. ಅದ್ರಲ್ಲೂ ಅನ್ಯಾಯಕ್ಕೆ ತುತ್ತಾದವ್ರಿಗೆ ಸಹಾಯ ಮಾಡೋಕಂತೂ ತುದಿಗಾಲಲ್ಲಿ ನಿಂತಿರ್ತಾನೆ.
“ಅವನು ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ ಕಾಪಾಡ್ತಾನೆ, ದೀನರನ್ನ, ಸಹಾಯಕ್ಕಾಗಿ ಯಾರೂ ಇಲ್ಲದವ್ರನ್ನ ರಕ್ಷಿಸ್ತಾನೆ. ದೀನರ ಮೇಲೆ, ಬಡಬಗ್ಗರ ಮೇಲೆ ಅವನಿಗೆ ಕನಿಕರ ಇರುತ್ತೆ, ಬಡವರ ಜೀವವನ್ನ ಕಾಪಾಡ್ತಾನೆ. ಅವನು ಅವ್ರನ್ನ ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ.”—ಕೀರ್ತನೆ 72:12-14.
ಯೇಸು ಸ್ವರ್ಗದಿಂದ ಆಳೋ ದೇವರ ಸರ್ಕಾರದ ಬಗ್ಗೆ ಹೆಚ್ಚನ್ನ ತಿಳಿಯಿರಿ. ಅದ್ರಿಂದ ನೀವು ಹೇಗೆ ಪ್ರಯೋಜನ ಪಡ್ಕೊಬಹುದು? ಅದಕ್ಕೆ ಹೇಗೆ ಬೆಂಬಲ ಕೊಡಬಹುದು ಅಂತ ತಿಳಿಯಿರಿ.
ದೇವರ ರಾಜ್ಯ ಅಂದರೇನು? ಅನ್ನೋ ವಿಡಿಯೋ ನೋಡಿ.
”ದೇವರ ಸರಕಾರ—ಭ್ರಷ್ಟಾಚಾರವಿಲ್ಲದ ಸರಕಾರ” ಅನ್ನೋ ಲೇಖನ ನೋಡಿ.