ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು

ಸಮೃದ್ಧಿ ಕೊರತೆಯನ್ನ ನೀಗಿಸಿತು

ಸಮೃದ್ಧಿ ಕೊರತೆಯನ್ನ ನೀಗಿಸಿತು

ಅಕ್ಟೋಬರ್‌ 1, 2020

 ಯೆಹೋವನ ಸಾಕ್ಷಿಗಳು ಸುಮಾರು 200 ದೇಶಗಳಲ್ಲಿ ಜನ್ರಿಗೆ ಸಹಾಯ ಮಾಡೋಕೆ ಪ್ರಾಮುಖ್ಯ ಕೆಲಸವನ್ನ ಮಾಡ್ತಿದ್ದಾರೆ. ಆದ್ರೆ ಸುಮಾರು 35 ದೇಶಗಳಲ್ಲಿ ಮಾತ್ರ ಸ್ಥಳೀಯವಾಗಿ ಸಿಗೋ ಕಾಣಿಕೆಗಳಿಂದ ಅಲ್ಲಿನ ಖರ್ಚನ್ನ ನೋಡ್ಕೊಳ್ಳೋಕೆ ಆಗ್ತಿದೆ. ಇನ್ನುಳಿದ ದೇಶಗಳ, ಅಂದ್ರೆ ಅಷ್ಟೊಂದು ಅನುಕೂಲ ಇಲ್ಲದ ದೇಶಗಳ ಖರ್ಚನ್ನ ಹೇಗೆ ನೀಗಿಸೋದು?

 ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಯೆಹೋವನನ್ನ ಆರಾಧನೆ ಮಾಡೋಕೆ ಮತ್ತು ಸುವಾರ್ತೆ ಸಾರೋಕೆ ಬೇಕಾದ ಅವಶ್ಯಕತೆಗಳನ್ನ ಆಡಳಿತ ಮಂಡಲಿ ನೋಡ್ಕೊಳ್ಳುತ್ತೆ. ಬಂದ ಕಾಣಿಕೆಗಳನ್ನ ಚೆನ್ನಾಗಿ ಪ್ಲ್ಯಾನ್‌ ಮಾಡಿ ಸರಿಯಾದ ರೀತಿ ಉಪಯೋಗಿಸುತ್ತೆ. ಒಂದು ಶಾಖಾ ಕಛೇರಿ ಅದ್ರ ಸ್ಥಳೀಯ ಖರ್ಚಿಗಿಂತ ಹೆಚ್ಚು ಕಾಣಿಕೆಯನ್ನ ಪಡೆದರೆ, ಎಲ್ಲಿ ಅಗತ್ಯ ಇದೆಯೋ ಅಂಥ ಸ್ಥಳಕ್ಕೆ ಆ ಕಾಣಿಕೆಗಳನ್ನ ಹಂಚಲಾಗುತ್ತೆ. ಇಲ್ಲಿ ಒಂದನೇ ಶತಮಾನದ ಕ್ರೈಸ್ತರ ಮಾದರಿಯನ್ನ ಅನುಸರಿಸಲಾಗಿದೆ. ಅವರು ತಮ್ಮ ಹತ್ರ ಇರೋದನ್ನ ಸಮಾನವಾಗಿ ಹಂಚಿಕೊಳ್ಳೋ ಮೂಲಕ ಒಬ್ಬರಿಗೊಬ್ಬರು ಸಹಾಯ ಮಾಡಿದ್ರು. (2 ಕೊರಿಂಥ 8:14) ಆ ಕ್ರೈಸ್ತರು ತಮ್ಮ ಸಮೃದ್ಧಿಯಿಂದ ಇತರ ಕ್ರೈಸ್ತರ ಅಗತ್ಯಗಳನ್ನ ನೀಗಿಸಿದ್ರು.

 ಬೇರೆ ಶಾಖಾ ಕಛೇರಿಯಿಂದ ಬಂದ ಸಮೃದ್ಧಿಯನ್ನ ಸ್ವೀಕರಿಸಿದ ನಮ್ಮ ಸಹೋದರ ಸಹೋದರಿಯರಿಗೆ ಹೇಗನಿಸ್ತು? ಟಾನ್ಸೇನಿಯದ ಉದಾಹರಣೆಯನ್ನ ನೋಡೋಣ. ಅಲ್ಲಿನ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನ್ರು ಪ್ರತಿದಿನ ಕೇವಲ ಎರಡು ಡಾಲರ್‌ (146 ರೂಪಾಯಿ) ದುಡಿದು ಜೀವನ ಮಾಡ್ತಾರೆ. ಅಲ್ಲಿರೋ ಮಾಫೀಗಾ ರಾಜ್ಯ ಸಭಾಗೃಹದ ನವೀಕರಣಕ್ಕೆ ಬೇರೆ ಶಾಖಾ ಕಛೇರಿಯಿಂದ ಬಂದ ಕಾಣಿಕೆಯನ್ನ ಬಳಸಲಾಯ್ತು. ಆ ಸಭೆಯವರು ಹೀಗೆ ಬರೆದ್ರು: “ನಮ್ಮ ರಾಜ್ಯ ಸಭಾಗೃಹ ನವೀಕರಣ ಆದ್ಮೇಲೆ ಹೆಚ್ಚೆಚ್ಚು ಜನ ಕೂಟಗಳಿಗೆ ಬರ್ತಿದ್ದಾರೆ. ಇಂಥ ಸುಂದರವಾದ ಸ್ಥಳದಲ್ಲಿ ಯೆಹೋವನನ್ನ ಆರಾಧಿಸೋಕೆ ಸಹಾಯ ಮಾಡಿದ ಆತನ ಸಂಘಟನೆಗೆ ಮತ್ತು ಧಾರಾಳ ಮನಸ್ಸು ತೋರಿಸಿದ ಲೋಕವ್ಯಾಪಕ ನಮ್ಮ ಸಹೋದರ ಸಹೋದರಿಯರಿಗೆ ನಾವು ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ.”

 ಕೋವಿಡ್‌-19 ಅಂಟುರೋಗದಿಂದ ಎದ್ದ ಸಂಕಷ್ಟದಿಂದಾಗಿ ಶ್ರೀಲಂಕದಲ್ಲಿರೋ ನಮ್ಮ ಸಹೋದರರಿಗೆ ಆಹಾರದ ಕೊರತೆ ಉಂಟಾಯ್ತು. ಅದರಲ್ಲಿ ಇಮ್‌ರಾ ಫರ್ನಾಂಡೊ ಮತ್ತು ಅವ್ರ ಮಗ ಎನೋಷ್‌ ಇದ್ರು. ಬೇರೆ ದೇಶದಿಂದ ಬಂದ ಕಾಣಿಕೆಯಿಂದಾಗಿ ಅವ್ರಿಗೆ ಬೇಕಾದದ್ದನ್ನ ಪೂರೈಸೋಕಾಯ್ತು. ಅವರಿಬ್ಬರು ಒಂದು ಕಾರ್ಡ್‌ ಮಾಡಿ ಅದ್ರಲ್ಲಿ ಹೀಗೆ ಬರೆದ್ರು: “ಇಂಥ ಕಷ್ಟದ ಸಮಯದಲ್ಲಿ ಪ್ರೀತಿ ತೋರಿಸಿದ ಸಹೋದರರಿಗೆ ತುಂಬ ಥ್ಯಾಂಕ್ಸ್‌. ಇಂಥ ಒಂದು ಕುಟುಂಬದ ಭಾಗವಾಗಿರೋಕೆ ನಮ್ಗೆ ತುಂಬ ಖುಷಿ ಆಗುತ್ತೆ. ಈ ಕಡೇ ದಿವಸಗಳಲ್ಲಿ ಎಲ್ಲ ಸಹೋದರ ಸಹೋದರಿಯರಿಗೆ ಸಹಾಯ ಮಾಡುವಂತೆ ಯೆಹೋವ ದೇವರ ಹತ್ರ ನಾವು ಪ್ರಾರ್ಥನೆ ಮಾಡ್ತಾ ಇರ್ತೇವೆ.”

ಇಮ್‌ರಾ ಮತ್ತು ಎನೋಷ್‌ ಫರ್ನಾಂಡೊ

 ನಮ್ಮ ಸಹೋದರ ಸಹೋದರಿಯರು ಎಲ್ಲೇ ಇರಲಿ, ಅವರ ಹತ್ರ ಇರೋದನ್ನ ಇತರರ ಜೊತೆ ಹಂಚ್ಕೊಳ್ಳೋಕೆ ಮುಂದೆ ಬರುತ್ತಿದ್ದಾರೆ. ಉದಾಹರಣೆಗೆ ಎನೋಷ್‌ ಅಗತ್ಯ ಇದ್ದ ಕುಟುಂಬಗಳಿಗೆ ಸಹಾಯ ಮಾಡೋಕೆ ಚಿಕ್ಕ ಕಾಣಿಕೆ ಡಬ್ಬವನ್ನ ಮಾಡಿ ಇಟ್ಕೊಂಡಿದ್ದಾನೆ. ಗ್ವಾಡೆಲೋಪ್‌ ಅಲವೀರಿಜ್‌ ಕೂಡ ಅಂಥದ್ದೇ ಧಾರಾಳ ಮನಸ್ಸನ್ನ ತೋರಿಸಿದ್ದಾರೆ. ಈ ಸಹೋದರಿ ಇರೋದು ಮೆಕ್ಸಿಕೋದಲ್ಲಿ. ಅಲ್ಲಿ ಕೆಲವರಿಗೆ ಕಡಿಮೆ ಸಂಬಳ ಸಿಗುತ್ತೆ ಅಥವಾ ಪ್ರತಿದಿನ ದುಡಿಮೆ ಇರಲ್ಲ. ಇಂಥದ್ರಲ್ಲೂ ಆ ಸಹೋದರಿ ತನ್ನ ಹತ್ರ ಇರೋದನ್ನ ಕಾಣಿಕೆಯಾಗಿ ಕೊಡುತ್ತಾಳೆ. ಅವರು ಹೀಗೆ ಬರೆದ್ರು: “ಯೆಹೋವನ ಒಳ್ಳೇತನಕ್ಕಾಗಿ ಮತ್ತು ನಿಷ್ಠಾವಂತ ಪ್ರೀತಿಗಾಗಿ ನಾನು ಆತನಿಗೆ ಥ್ಯಾಂಕ್ಸ್‌ ಹೇಳ್ತೀನಿ. ನಾನು ಕೊಡೋ ಕಾಣಿಕೆ ಬೇರೆಯವರ ಕಾಣಿಕೆ ಒಟ್ಟಿಗೆ ಸೇರಿ ಅಗತ್ಯ ಇರೋ ಸಹೋದರರಿಗೆ ಸಹಾಯ ಆಗುತ್ತೆ ಅಂತ ನಾನು ನಂಬ್ತೀನಿ.”

 ಅಗತ್ಯ ಇರೋ ಸ್ಥಳಗಳಿಗೆ ಶಾಖಾ ಕಛೇರಿ ಸಂತೋಷದಿಂದ ಕಾಣಿಕೆಗಳನ್ನ ಕಳಿಸಿಕೊಡುತ್ತೆ. ಬ್ರಸಿಲ್‌ನ ಶಾಖಾ ಸಮಿತಿ ಸದಸ್ಯರಾದ ಆ್ಯಂಥನಿ ಕಾರ್ವಾಲ್ಯೂ ಹೀಗೆ ಹೇಳ್ತಾರೆ: “ತುಂಬ ವರ್ಷಗಳಿಂದ ನಮ್ಮ ದೇಶಕ್ಕೆ ಬೇಕಾದ ಹಣಕಾಸಿನ ಸಹಾಯವನ್ನ ಬೇರೆ ದೇಶದಿಂದ ಪಡಿತಿತ್ತು. ಈ ಸಹಾಯದಿಂದ ಇಲ್ಲಿ ತುಂಬ ಪ್ರಗತಿಯಾಗಿದೆ. ಆದ್ರೆ ಈಗ ನಮ್ಮ ಆರ್ಥಿಕ ಪರಿಸ್ಥಿತಿ ಬದಲಾಗಿದೆ. ನಾವೀಗ ಬೇರೆಯವರಿಗೆ ಸಹಾಯ ಮಾಡೋಕೆ ಆಗ್ತಿದೆ. ಬ್ರಸಿಲ್‌ನ ಸಹೋದರರು ಲೋಕವ್ಯಾಪಕ ಸಾರೋ ಕೆಲಸದಲ್ಲಿ ಭಾಗವಹಿಸೋಕೆ ಮತ್ತು ಬೇರೆಯವರಿಗೆ ಸಹಾಯ ಮಾಡೋಕೆ ಕಾತುರದಿಂದ ಕಾಯುತ್ತಿದ್ದಾರೆ.”

 ಅಗತ್ಯ ಇರೋ ನಮ್ಮ ಸಹೋದರ ಸಹೋದರಿಯರಿಗೆ ನಾವು ಹೇಗೆ ಸಹಾಯ ಮಾಡಬಹುದು? ನಾವು ಇದನ್ನ ಬೇರೆ ದೇಶದ ಶಾಖಾ ಕಛೇರಿಗೆ ನೇರವಾಗಿ ಹಣ ಕಳಿಸೋ ಮೂಲಕ ಅಲ್ಲ, ಬದಲಿಗೆ ಲೋಕವ್ಯಾಪಕ ಕೆಲಸಕ್ಕೆ ಕಾಣಿಕೆ ಕೊಡೋ ಮೂಲಕ ಮಾಡಬಹುದು. ಅಂದ್ರೆ ಕಾಣಿಕೆಗಳನ್ನ “ಲೋಕವ್ಯಾಪಕ ಕೆಲಸಕ್ಕಾಗಿ” ಎಂದು ಬರೆದಿರೋ ಬಾಕ್ಸ್‌ನಲ್ಲಿ ಹಾಕಬಹುದು ಅಥವಾ donate.mt1130.comಗೆ ಕಳಿಸಬಹುದು. ನಿಮ್ಮ ಉದಾರ ಕಾಣಿಕೆಗಳಿಗಾಗಿ ತುಂಬ ಧನ್ಯವಾದ.