ಏಪ್ರಿಲ್ 22-28
ಕೀರ್ತನೆ 32-33
ಗೀತೆ 123 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ದೊಡ್ಡ ತಪ್ಪುಗಳನ್ನ ಮಾಡ್ದಾಗ ನಾವ್ಯಾಕೆ ಅದನ್ನ ಒಪ್ಕೊಬೇಕು?
(10 ನಿ.)
ದಾವೀದ ದೊಡ್ಡ ತಪ್ಪುಗಳನ್ನ ಮಾಡಿ ಅದನ್ನ ಮುಚ್ಚಾಕೋಕೆ ಪ್ರಯತ್ನ ಮಾಡಿದಾಗ ತುಂಬ ಸಂಕಟಪಟ್ಟ. ಬತ್ಷೆಬೆ ಜೊತೆ ಅನೈತಿಕತೆ ನಡೆಸಿದ ಮೇಲೆ ಅವನಿಗೆ ಈ ತರ ಆಗಿರಬಹುದು (ಕೀರ್ತ 32:3, 4; ಕಾವಲಿನಬುರುಜು93-E 3/15 ಪುಟ 9 ಪ್ಯಾರ 7)
ದಾವೀದ ಯೆಹೋವನ ಹತ್ರ ತನ್ನ ಪಾಪವನ್ನ ಒಪ್ಕೊಂಡ ಮೇಲೆ ಯೆಹೋವ ಅವನನ್ನ ಕ್ಷಮಿಸಿದನು (ಕೀರ್ತ 32:5; ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 262 ಪ್ಯಾರ 8)
ಯೆಹೋವನ ಕ್ಷಮೆ ಪಡ್ಕೊಂಡ ಮೇಲೆ ದಾವೀದನಿಗೆ ನೆಮ್ಮದಿ ಆಯ್ತು (ಕೀರ್ತ 32:1; ಕಾವಲಿನಬುರುಜು01 6/1 ಪುಟ 30 ಪ್ಯಾರ 1)
ನಾವು ಯಾವುದಾದ್ರೂ ಗಂಭೀರ ತಪ್ಪು ಮಾಡಿದ್ರೆ ಯೆಹೋವನ ಹತ್ರ ನಮ್ಮ ಪಾಪವನ್ನ ದೀನತೆಯಿಂದ ಒಪ್ಕೊಬೇಕು ಮತ್ತು ಕ್ಷಮಿಸು ಅಂತ ಕೇಳ್ಕೊಬೇಕು. ನಾವು ಹಿರಯರ ಸಹಾಯನೂ ಪಡ್ಕೊಬೇಕು. ಆಗ ಅವರು ಯೆಹೋವನ ಜೊತೆ ಹಾಳಾಗಿರೋ ಸಂಬಂಧನ ಸರಿಮಾಡ್ಕೊಳ್ಳೋಕೆ ಸಹಾಯ ಮಾಡ್ತಾರೆ. (ಯಾಕೋ 5:14-16) ಆಗ ಯೆಹೋವ ನಮಗೆ ಹೊಸಬಲ ಕೊಡ್ತಾನೆ.—ಅಕಾ 3:19.
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಕೀರ್ತ 33:6—ಯೆಹೋವನ ಬಾಯಿಯ “ಉಸಿರಿಂದ ಬಂತು” ಅನ್ನೋ ಮಾತಿನ ಅರ್ಥ ಏನು? (ಕಾವಲಿನಬುರುಜು06 5/15 ಪುಟ 20 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 33:1-22 (ಪ್ರಗತಿ ಪಾಠ 11)
4. ದೀನತೆ—ಪೌಲ ಏನು ಮಾಡಿದನು?
(7 ನಿ.) ಚರ್ಚೆ. ವಿಡಿಯೋ ಹಾಕಿ, ಪ್ರೀತಿಸಿ-ಕಲಿಸಿ ಪಾಠ 4ರ ಪಾಯಿಂಟ್ 1-2ನ್ನ ಚರ್ಚಿಸಿ.
5. ದೀನತೆ—ಪೌಲನ ತರ ನೀವೂ ಮಾಡಿ
(8 ನಿ.) ಪ್ರೀತಿಸಿ-ಕಲಿಸಿ ಪಾಠ 4ರ ಪಾಯಿಂಟ್ 3-5 ಮತ್ತು “ಇದನ್ನೂ ನೋಡಿ” ಅನ್ನೋ ಭಾಗ ಚರ್ಚಿಸಿ.
ಗೀತೆ 102
6. ಸ್ಥಳೀಯ ಅಗತ್ಯಗಳು
(15 ನಿ.)